ಅದ್ದೂರಿಯಾಗಿ ಮದ್ವೆಯಾದ ಸಲಿಂಗ ಪ್ರೇಮಿಗಳು! 8 ವರ್ಷದ ಹಿಂದೆ ಡೇಟಿಂಗ್ ಆ್ಯಪ್ ಮೂಲಕ ಪ್ರೀತಿಯ ಬಲೆಗೆ ಬಿದ್ದಿದ್ದರು…
ಹೈದರಾಬಾದ್: ಸತತ 8 ವರ್ಷದಿಂದ ಒಟ್ಟಿಗೆ ವಾಸಿಸುತ್ತಿದ್ದ ಸಲಿಂಗ ಪ್ರೇಮಿಗಳಿಬ್ಬರ ಮದುವೆ ಕುಟುಂಬಸ್ಥರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿದೆ.
31 ವರ್ಷದ ಸುಪ್ರಿಯೋ ಚಕ್ರವರ್ತಿ ಮತ್ತು 34 ವರ್ಷದ ಅಭಯ್ ದಂಗ್ ದಾಂಪತ್ಯಕ್ಕೆ ಕಾಲಿಟ್ಟವರು. ಚಿಕ್ಕಂದಿನಲ್ಲೇ ತಾವಿಬ್ಬರೂ ‘ಗೇ’ ಎಂದು ಅರಿತಿದ್ದ ಸುಪ್ರಿಯೋ ಮತ್ತು ಅಭಯ್, 8 ವರ್ಷಗಳ ಹಿಂದೆ ಡೇಟಿಂಗ್ ಆ್ಯಪ್ ಮೂಲಕ ಪರಸ್ಪರ ಭೇಟಿಯಾಗಿದ್ದರು. ಆ ಸ್ನೇಹ ಪ್ರೇಮಕ್ಕೆ ತಿರುಗಿ ಅಂದಿನಿಂದ ಇಬ್ಬರೂ ಒಟ್ಟಿಗೆ ವಾಸಿಸುತ್ತಿದ್ದರು. ಇದೀಗ ಆಪ್ತರ ಸಮ್ಮುಖದಲ್ಲಿ ಮದುವೆಯಾಗಿದ್ದು, ಇಬ್ಬರ ಸಂಬಂಧವನ್ನು ಇನ್ನಷ್ಟು ಗಟ್ಟಿ ಮಾಡಿಕೊಂಡಿದ್ದಾರೆ.
ಹೈದರಾಬಾದ್‌ನಲ್ಲಿ ಸುಪ್ರಿಯೋ ಕೆಲಸ ಮಾಡುತ್ತಿದ್ದರೆ, ಪಂಜಾಬ್ ಮೂಲದ ಅಭಯ್ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಮದುವೆ ನಿಮಿತ್ತ ಹೈದರಾಬಾದ್‌ನ ಖಾಸಗಿ ರೆಸಾರ್ಟ್‌ನಲ್ಲಿ ಆಯೋಜಿಸಿದ್ದ ಮೆಹೆಂದಿ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿದೆ. ಹಿರಿಯರ ಸಮ್ಮುಖದಲ್ಲಿ ಉಂಗುರ ಬದಲಾಯಿಸಿಕೊಂಡ ಈ ಜೋಡಿ ಮುಖದಲ್ಲಿ ಸಂಭ್ರಮ ಮನೆ ಮಾಡಿತ್ತು. ಸಲಿಂಗಿಗಳ ಮದುವೆಯಲ್ಲಿ ಹೈದರಾಬಾದ್‌ನ ಕೆಲ ತೃತೀಯಲಿಂಗಿಗಳೂ ಪಾಲ್ಗೊಂಡು ನವ ಜೋಡಿಗೆ ಶುಭ ಕೋರಿದರು.
ಇನ್ನು ಮದುವೆ ಬಗ್ಗೆ ನೂರಾರು ಕನಸು ಕಂಡಿದ್ದ ಸುಪ್ರಿಯೋ ಮತ್ತು ಅಭಯ್ ಇಬ್ಬರೂ ಧರಿಸಿದ ಡ್ರೆಸ್ಗಳ ಡಿಸೈನ್ ಪಂಜಾಬ್ ಮತ್ತು ಕೋಲ್ಕತ್ತಾದಲ್ಲಿ ಮಾಡಿಸಿಕೊಂಡಿದ್ದಂತೆ.
ಇನ್ನು ಸಲಿಂಗಿಗಳ ಮದುವೆಗೆ ನಮ್ಮ ದೇಶದಲ್ಲಿ ಕಾನೂನಾತ್ಮವಾಗಿ ಸಿಂಧು ಆಗುವುದಿಲ್ಲ. ಸಲಿಂಗಿಗಳ ಪ್ರೀತಿಗೆ ಒಪ್ಪಿಗೆ ಇದೆ, ಆದರೆ ಮದುವೆಗೆ ಇಲ್ಲ. ಹಾಗಾಗಿ ಸುಪ್ರಿಯೋ ಮತ್ತು ಅಭಯ್ರ ಮದುವೆ ಚರ್ಚೆಗೆ ಗ್ರಾಸವಾಗಿದೆ.
ಮನೆ ಮುಂದೆಯೇ ಅಡಗಿತ್ತು ಭಯಾನಕ ರಹಸ್ಯ! ಮಗನೆದುರು ಕಣ್ಣೀರಿಟ್ಟ ಅಪ್ಪನ ಅಸಲಿ ಮುಖವಾಡ ಬಯಲು
ಇಸ್ಟೀಟ್ ಆಡುತ್ತಿದ್ದ ಎಎಸ್ಐ, ಹೆಡ್ಕಾನ್ಸ್ಟೇಬಲ್ ಬಂಧನ! ತಹಸೀಲ್ದಾರ್ರ ಡ್ರೈವರ್ ಕೂಡ ಅಂದರ್
ಮಗಳೇ ನೀನಿನ್ನೂ ಚಿಕ್ಕವಳು, ಬೇಡ ಕಣವ್ವಾ ಅಂದ್ರೂ ಕೇಳಲಿಲ್ಲ… ಬಾಳಿ ಬದುಕಬೇಕಿದ್ದವರ ಬಾಳಲ್ಲಿ ನಡೆಯಿತು ಘೋರ ದುರಂತ