ನರಗುಂದ: ತಾಲೂಕಿನ ಬನಹಟ್ಟಿ- ಮೂಗನೂರ ಮತ್ತು ಅಮರಗೋಳ ಗ್ರಾಮಗಳ ಮಾಜಿ ಕ್ರೀಡಾಪಟುಗಳು ಇತ್ತೀಚೆಗೆ ಸ್ನೇಹ ಸಮ್ಮಿಲನ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಬನಹಟ್ಟಿ ರುದ್ರಸ್ವಾಮಿ ಮಠದ ಸೊಲಬಯ್ಯಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನಿವೃತ್ತ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ಎಂ.ಎಂ. ಕಲಹಾಳ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನವಲಗುಂದ ಆರ್ಟ್ಸ್ ಕಾಲೇಜಿನ ನಿವೃತ್ತ ದೈಹಿಕ ಶಿಕ್ಷಕ ಐ.ಎಸ್. ಪೂಜಾರ, ಅಂತಾರಾಷ್ಟ್ರೀಯ ಕ್ರೀಡಾಪಟು ಡಾ. ಶಿವಾನಂದ ಅಳಗವಾಡಿ, ವಿ.ಸಿ. ಮ್ಯಾಗೇರಿ, ಎಸ್.ಎನ್. ಹಕಾರಿ, ಬಿ.ಎನ್. ಮಾನೆ, ವಿ.ವಿ. ಜೋಶಿ, ಪಿ.ಎಸ್. ಸೋಲಾಪೂರೆ, ಬಿ.ಎನ್. ಜಾಲಿಹಾಳ, ವೈ.ಎಂ. ಚಿಕ್ಕನಗೌಡ್ರ, ಎಸ್.ಎಸ್. ಹಿರೇಮಠ, ಸಿ.ಟಿ. ಬೆನ್ನೂರ, ಎಂ.ಜಿ. ಅಂಗಡಿ, ಎಂಬಿ. ಹಳ್ಳಿಕೇರಿ, ಎಸ್.ಜಿ. ನಂದಿಕೋಲವಠ ಇತರರನ್ನು ಸನ್ಮಾನಿಸಲಾಯಿತು. ಶಿವಣಪ್ಪ ಕಲ್ಲಾಪುರ, ಗ್ರಾಪಂ ಅಧ್ಯಕ್ಷ ಜಾಧವ ಹಾಗೂ ಗ್ರಾಪಂ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.
