ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಮುಡಾ ಮಾಜಿ ಅಧಿಕಾರಿ ಪ್ರತಿಭಟನೆ

blank

ಮೈಸೂರು: ಮುಡಾದಲ್ಲಿ ಜನರ ಹಿತಕ್ಕಿಂತ ಡೆವಲಪರ್‌ಗಳ ಹಿತಕ್ಕಾಗಿ ಸಾಮಾನ್ಯ ಸಭೆ ನಡೆಸಲಾಗುತ್ತಿದೆ ಎಂದು ಆರೋಪಿಸಿ ಮುಡಾ ಮಾಜಿ ಅಧಿಕಾರಿ ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಪ್ರತಿಭಟನೆ ನಡೆಸಿದರು.
ಮುಡಾ ಕಚೇರಿ ಮುಂದೆ ದಾಖಲೆ ಪತ್ರ ಹಿಡಿದು ಕಣ್ಣಿಗೆ ಬಟ್ಟೆ ಕಟ್ಟಿಕೊಂಡ ಮುಡಾ ಯೋಜನಾ ಮಾಜಿ ಸದಸ್ಯರಾದ ಇಂಜಿನಿಯರ್ ನಾಗರಾಜು ಅವರು, ಜನಹಿತ ಕಾಪಾಡಿ, ಮುಡಾ ಉಳಿಸಬೇಕು ಎಂದು ಒತ್ತಾಯಿಸಿದರು.
ನಾಲ್ಕು ಸಾವಿರ ಕೋಟಿ ರೂ. ಗಿಂತಲೂ ಹೆಚ್ಚು ಹಗರಣ ನಡೆದಿದೆ. ಮುಡಾದಲ್ಲಿ ನಡೆದಿರುವ ಹಗರಣ ಕುರಿತು ನಾನು ಹತ್ತು ವರ್ಷದಿಂದ ಹೋರಾಟ ನಡೆಸಿಕೊಂಡು ಬಂದರೂ ಯಾವುದೇ ಕ್ರಮಕೈಗೊಂಡಿರಲಿಲ್ಲ ಎಂದು ದೂರಿದರು.
ಸಭೆಯಲ್ಲಿ 167 ವಿಷಯಗಳ ಚರ್ಚೆ ನಡೆಯುತ್ತಿದೆ. ಕೇವಲ ಖಾಸಗಿ ಬಡಾವಣೆ, ಟೌನ್ ಪ್ಲ್ಯಾನಿಂಗ್‌ಗೆ ಅನುಮೋದನೆಗೋಸ್ಕರ ಈ ಸಭೆ ನಡೆಯುತ್ತಿದೆ. ಹಗರಣದ ಬಗ್ಗೆ ಯಾರೂ ಚರ್ಚೆ ಮಾಡುತ್ತಿಲ್ಲ. ಮುಡಾ ಹಗರಣದ ಹಿಂದೆ ಹಿರಿಯ ಸದಸ್ಯರ ಕೈವಾಡ ಇದೆ ಎಂಬ ಮಾಹಿತಿ ಇದೆ. ಇದನ್ನು ಬಹಿರಂಗಗೊಳಿಸಲು ಸಭೆಯ ನಡಾವಳಿಯ ವಿಡಿಯೋವನ್ನು ಬಹಿರಂಗಪಡಿಸಬೇಕು. ಈ ಅಕ್ರಮದ ಕುರಿತು ಯಾವುದೇ ಕ್ರಮ ಅಗಿಲ್ಲ. ಆದ್ದರಿಂದ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಈ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಹೇಳಿದರು.

Share This Article

ನೆಲದ ಮೇಲೆ ಕುಳಿತು ಊಟ ಮಾಡುವುದರಿಂದಾಗುವ ಪ್ರಯೋಜನಗಳು..eating

eating: ನೆಲದ ಮೇಲೆ ಕುಳಿತು ಊಟ ಮಾಡುವುದು ಭಾರತೀಯ ಸಂಸ್ಕೃತಿಯ  ಸಂಪ್ರದಾಯವಾಗಿದೆ. ಆಧುನಿಕ ಕಾಲದಲ್ಲಿ ಊಟದ…

ಕೆಂಪು ಬಾಳೆಹಣ್ಣಿನ ಸೇವನೆಯಿಂದಾಗುವ ಅದ್ಭುತ ಪ್ರಯೋಜಗಳಿವು; ನಿಮಗಾಗಿ ಹೆಲ್ತಿ ಮಾಹಿತಿ | Health Tips

ಕೆಂಪು ಬಾಳೆಹಣ್ಣು ಒಂದು ವಿಶಿಷ್ಟ ಮತ್ತು ಪೌಷ್ಟಿಕ ಹಣ್ಣು. ಇದು ಸಾಮಾನ್ಯ ಹಳದಿ ಬಾಳೆಹಣ್ಣಿಗಿಂತ ಹೆಚ್ಚು…

ಊಟ & ನಿದ್ರೆಯ ನಡುವಿನ ಅಂತರ ಎಷ್ಟಿರಬೇಕು?; ಇಲ್ಲಿದೆ ICMR ನೀಡಿರುವ ಸೂಚನೆ | Health Tips

ನಮ್ಮ ದಿನಚರಿಯ ಪ್ರಮುಖ ಭಾಗವೆಂದರೆ ಆಹಾರ ಸೇವಿಸುವುದು ಮತ್ತು ಸಾಕಷ್ಟು ನಿದ್ರೆ ಮಾಡುವುದು. ಆದರೆ ಜನರು…