More

    ಅಕಾಲಿಕ ಮಳೆಯಿಂದ ಉದುರುತ್ತಿರುವ ಹೂ

    ಶಹಾಬಾದ್: ಕಳೆದ ಎರಡು ದಿನಗಳ ಹಿಂದೆ ಸುರಿದ ಅಕಾಲಿಕ ಮಳೆ ಪ್ರಮುಖ ವಾಣಿಜ್ಯ ಬೆಳೆ ತೊಗರಿಗೆ ಕಂಟಕ ತಂದೊಡ್ಡಿದ್ದು, ಹೂವುಗಳು ಉದುರಿ ರೈತಾಪಿ ವರ್ಗ ಆತಂಕಕ್ಕೆ ದೂಡಿದೆ.

    ಮಳೆಯಿಲ್ಲದೆ ತೇವಾಂಶ ಕೊರತೆಯಿಂದ ತೊಗರಿ ಬಾಡುತ್ತಿತ್ತು. ಕೆಲವೆಡೆ ಉತ್ತಮವಾಗಿ ಬೆಳೆದಿದ್ದು, ಹೂವು ಬಿಡುತ್ತಿತ್ತು. ಆದರೆ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಹೂವುಗಳು ಉದುರುತ್ತಿವೆ. ಅಲ್ಲದೆ ಗಾಳಿಯಿಂದಲೂ ಗಿಡಕ್ಕೆ ಹೆಚ್ಚಿನ ಹಾನಿ ಆಗುತ್ತಿವೆ. ಹೀಗಾದಲ್ಲಿ ಬೆಳೆ ಸಂಪೂರ್ಣ ಹಾಳಾಗಲಿದೆ, ಅಲ್ಲದೆ ಇಳುವರಿಯೂ ಕಮ್ಮಿ ಆಗಲಿದೆ ಎಂಬ ಚಿಂತೆಯಲ್ಲಿ ರೈತರಿದ್ದಾರೆ.

    ನೈಸರ್ಗಿಕ ವಿಕೋಪದಿಂದ ಕನಿಷ್ಠ ಹಾನಿ ತಪ್ಪಿಸಿಕೊಳ್ಳಲು ರೈತರು ತಮ್ಮ ಬೆಳೆಗೆ ಯೂನಿವರ್ಸಲ್ ಕಂಪನಿಯ ವಿಮೆ ಮಾಡಿಸಿದ್ದಾರೆ. ಈಗ ಹೂ ಉದುರುವುದರಿಂದ ಇಳುವರಿಗೆ ಧಕ್ಕೆ ಆಗುತ್ತಿದ್ದು, ಹೀಗಾಗಿ ದೂರು ಸಲ್ಲಿಸಲು ಕಂಪನಿಗೆ ಹೋದರೆ ಸರಿಯಾಗಿ ಸ್ಪಂದಿಸುತ್ತಿಲ್ಲ. ದೂರು ಸ್ವೀಕರಿಸುತ್ತಿಲ್ಲ ಎಂದು ರೈತಾಪಿ ವರ್ಗ ದೂರುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts