ಸಿನಿಮಾ

ಮೀನುಗಾರಿಕೆ ನಡೆಸುತ್ತಿದ್ದ ಬೋಟ್‌ಗೆ ಹಾನಿ

ಅಂಕೋಲಾ: ಬಿರುಗಾಳಿಯ ರಭಸಕ್ಕೆ ಸಿಲುಕಿದ ಮೀನುಗಾರಿಕೆ ನಡೆಸುತ್ತಿದ್ದ ಬೋಟ್‌ನ ಫೈಬರ್‌ಗೆ ಹೊಡೆತ ಬಿದ್ದಿದ್ದರಿಂದ ಸಮುದ್ರದಲ್ಲಿ ಮುಳುಗಿದ ಘಟನೆ ಸೋಮವಾರ ಮಧ್ಯಾಹ್ನ ತಾಲೂಕಿನ ಮಂಜಗುಣಿಯ 20 ನಾಟಿಕಲ್ ದೂರದಲ್ಲಿ ಸಂಭವಿಸಿದೆ. ಬೆಳಂಬಾರದ ಚಂದ್ರಾವತಿ ಸುಭಾಸ ಖಾರ್ವಿ ಅವರ ಮಾಲೀಕತ್ವದ ಜೈ ಶ್ರೀರಾಮ ಎಂಬ ಹೆಸರಿನ ಬೋಟ್ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಬಿರುಗಾಳಿ ಕಾಣಿಸಿಕೊಂಡು ದೊಡ್ಡ ಪ್ರಮಾಣದ ತೆರೆಗಳು ಬೋಟ್‌ಗೆ ಬಡಿದಿವೆ. ಪರಿಣಾಮವಾಗಿ ಬೋಟ್‌ನ ತಳಭಾಗದ ಫೈಬರ್‌ನಿಂದ ನೀರು ಒಳಭಾಗಕ್ಕೆ ಪ್ರವೇಶಿಸಿ ಮುಳುಗುವ ಸನ್ನಿವೇಶ ಸೃಷ್ಟಿಯಾಗಿತ್ತು. ಇದನ್ನು ಅರಿತ ಇನ್ನೊಂದು ಬೋಟ್‌ನ ಸಹಾಯದಿಂದ ಕಾರ್ಮಿಕರನ್ನು ರಕ್ಷಣೆ ಮಾಡಲಾಯಿತು. ಸ್ಥಳೀಯ ಠಾಣೆಯಲ್ಲಿ ದೂರು ದಾಖಲಾಗಿದೆ.

Latest Posts

ಲೈಫ್‌ಸ್ಟೈಲ್