ಹಂದಿ ಬೇಟೆಗಾಗಿ ತಂಬಾಕು ಹೊಲದಲ್ಲಿ ಇರಿಸಿದ್ದ ಸಿಡಿಮದ್ದು, ಸ್ಫೋಟಿಸಿ ರೈತನಿಗೆ ಗಂಭೀರ ಗಾಯ

ಮೈಸೂರು: ಕಾಡು ಪ್ರಾಣಿಗಳ ಬೇಟೆ ನಿಷೇಧವಿದ್ದರೂ, ಹಲವೆಡೆ ಅದು ಅವ್ಯಾಹತವಾಗಿ ಮುಂದುವರಿದಿದೆ. ಹುಣಸೂರು ತಾಲೂಕಿನ ಮುತ್ತುರಾಯನ ಹೊಸಳ್ಳಿಯಲ್ಲಿ ನಡೆದಿರುವ ಈ ಘಟನೆ ಇದಕ್ಕೆ ಸಾಕ್ಷ್ಯ ಒದಗಿಸುತ್ತದೆ. ಕಾಡುಹಂದಿ ಮತ್ತು ಮುಳ್ಳು ಹಂದಿ ಬೇಟೆಗಾಗಿ ಭೂಮಿಯಲ್ಲಿ ಹುದುಗಿಸಿಡಲಾಗಿದ್ದ ಸಿಡಿಮದ್ದು ಸ್ಫೋಟಿಸಿ ರೈತರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮುತ್ತುರಾಯನ ಹೊಸಳ್ಳಿಯ ಸ್ವಾಮೇಗೌಡ ಪುತ್ರ ಶಿವ ಗಾಯಗೊಂಡವ. ಜಮೀನಿ‌ನಲ್ಲಿ ತಂಬಾಕು ಬೆಳೆಯಲಾಗುತ್ತಿತ್ತು. ಬೆಳೆಗೆ ಕಳೆ ಬಾಧೆ ಕಾಡುತ್ತಿತ್ತು. ಈ ಹಿನ್ನೆಲೆಯಲ್ಲಿ ಶಿವ ಕಳೆ ಕೀಳಲು ಮುಂದಾಗಿದ್ದರು. ಸ್ಫೋಟಕ ಹೂತಿಟ್ಟಿರುವ ವಿಷಯ ತಿಳಿಯ ಶಿವ ಆ ಭಾಗದಲ್ಲಿ ಕುಡುಗೋಲಿನಿಂದ ಕಳೆ ತೆಗೆಯುವಾಗ ಈ ಅವಘಡ ಸಂಭವಿಸಿದೆ.

ಸ್ಫೋಟದಿಂದಾಗಿ ರೈತನ ಮುಖ, ಎದೆ ಭಾಗಕ್ಕೆ ಗಂಭೀರ ಗಾಯಗಳಾಗಿವೆ. ಗಾಯಾಳು ಶಿವನನ್ನು, ಹುಣಸೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *