ಗುಂಡೇಟು ಬಡಿದೂ ಬದುಕುಳಿದ ಶ್ವಾನ

ಕೆಲವರು ಎಷ್ಟೊಂದು ಬಗೆಯ ಅಪಾಯಗಳಿಂದ ಪಾರಾಗಿರುತ್ತಾರೆ ಎಂದರೆ ಅವರು ಬದುಕುಳಿದಿದ್ದೇ ಆಶ್ಚರ್ಯ ಎನಿಸುತ್ತದೆ. ಇದಕ್ಕೆ ಈ ನಾಯಿಯೇ ಇತ್ತೀಚಿನ ನಿದರ್ಶನ.

ನಾಯಿಯ ಹೆಸರು ಮ್ಯಾಗಿ. ಇದರ ಮಾಲೀಕ ಲೆಬನಾನ್​ನ ಬೀದಿಯಲ್ಲಿ ಇದನ್ನು ಬಿಟ್ಟುಹೋದಾಗ ತುಂಬು ಗರ್ಭಿಣಿಯಾಗಿತ್ತು. ಇದನ್ನು ತುಂಬಿಟ್ಟಿದ್ದ ಬಾಕ್ಸ್ ತೆರೆದು ನೋಡಿದಾಗ ದೇಹದ 17 ಕಡೆ ಗುಂಡು ತಾಕಿದ್ದ ಗಾಯಗಳಿದ್ದವು. ದವಡೆ ಮುರಿದಿತ್ತು, ಕಿವಿ ತುಂಡಾಗಿತ್ತು ಮತ್ತು ಕಣ್ಣುಗಳು ಸಂಪೂರ್ಣ ಹಾನಿಗೊಳಗಾಗಿದ್ದವು.

ಇದನ್ನು ದತ್ತು ಪಡೆದು ಆರೈಕೆ ಮಾಡಿದವರು ಬ್ರೖೆಟನ್ ನಿವಾಸಿ ಕಾಸೆ. ದೃಷ್ಟಿ ಕಳೆದುಕೊಂಡ ಇದಕ್ಕೆ ಥೆರಪಿ ಡಾಗ್ ಆಗಿ ತರಬೇತಿ ನೀಡಲಾಗಿದೆ. ಕಣ್ಣಿಗೆ ಮತ್ತಷ್ಟು ಹಾನಿಯಾಗುವುದನ್ನು ತಪ್ಪಿಸಲು ಹೊಲಿಗೆ ಹಾಕಲಾಗಿದೆ. ಲವಲವಿಕೆಯಿಂದಿರುವ ಈ ನಾಯಿ ಇನ್​ಸ್ಟಾಗ್ರಾಂನಲ್ಲಿ 191 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದೆ.

Leave a Reply

Your email address will not be published. Required fields are marked *