More

  PSI ಪರೀಕ್ಷೆ ಅಕ್ರಮದಲ್ಲಿ ಮಂತ್ರಿ ಹೆಸರು: ನಾವು ಗಂಡಸರಲ್ಲ.. ಅವರೊಬ್ಬರೇ ಗಂಡಸು.. ಎನ್ನುತ್ತಾ ಪರೋಕ್ಷವಾಗಿ ಪಂಚ್ ಕೊಟ್ಟ ಡಿಕೆಶಿ

  ಬೆಂಗಳೂರು: ಪಿಎಸ್ಐ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣ ರಾಜ್ಯಾದ್ಯಂತ ಕೋಲಾಹಲವನ್ನೇ ಎಬ್ಬಿಸಿದ್ದು, ಸಿಐಡಿ ತನಿಖೆ ಚುರುಕುಗೊಂಡಿದೆ. ಈ ಹಗರಣದಲ್ಲಿ ಸಚಿವರೊಬ್ಬರ ಸಂಬಂಧಿಯೂ ಭಾಗಿಯಾಗಿದ್ದಾನೆ ಎಂಬ ಗಂಭೀರ ಆರೋಪವೂ ಕೇಳಿಬಂದಿದ್ದು, ಯಾರು ಆ ಸಚಿವ? ಎಂಬ ಚರ್ಚೆ ಶುರುವಾಗಿದೆ. ಇದರ ಬೆನ್ನಲ್ಲೇ ಡಿಕೆಶಿ ‘ನಾವು ಗಂಡಸರಲ್ಲ.. ಅವರೊಬ್ಬರೇ ಗಂಡಸು’ ಎನ್ನುವ ಮೂಲಕ ಪರೋಕ್ಷವಾಗಿ ಮಾತಿನಲ್ಲೇ ಸಚಿವ ಅಶ್ವತ್ಥ ನಾರಾಯಣ​ಗೆ ಪಂಚ್​ ಕೊಟ್ಟಿದ್ದಾರೆ.

  ನನ್ನ ಮಾಹಿತಿ ಪ್ರಕಾರ ಸಚಿವ ಸಂಬಂಧಿ ದುಡ್ಡು ಪಡೆದಿದ್ದಾರೆ. ಆ ಸಚಿವರು ಸಿಎಂ ಎದುರೇ ನಮ್ಮ ಗಂಡಸ್ತನದ ಬಗ್ಗೆ ಪ್ರಶ್ನೆ ಮಾಡಿದ್ದರು ಎನ್ನುವ ಮೂಲಕ ಹೆಸರೇಳದೆ ಅಶ್ವತ್ಥ ನಾರಾಯಣರತ್ತ ಡಿಕೆಶಿ ಕೈ ತೋರಿಸಿದ್ದಾರೆ. ಪಿಎಸ್​ಐ ಹುದ್ದೆಗೆ ಆಯ್ಕೆಯಾಗಿದ್ದ ದರ್ಶನ್​ ಗೌಡ ಎಂಬಾತನನ್ನು ಬಂಧಿಸಿದಾಗ, ತಾನು ಸಚಿವರೊಬ್ಬರ ತಮ್ಮನಿಗೆ 80 ಲಕ್ಷ ರೂ. ದುಡ್ಡು ಕೊಟ್ಟಿದ್ದೀನಿ ಎಂದು ಸಿಐಡಿ ಪೊಲೀಸರ ಬಳಿ ಬಾಯ್ಬಿಟ್ಟಿದ್ದ. ಸಚಿವರ ಸಂಬಂಧಿಯನ್ನ ವಿಚಾರಣೆಗೆ ಕರೆತಂದಾಗ ಸಿಐಡಿ ಪೊಲೀಸರಿಗೆ ಫೋನ್​ ಕರೆ ಬರುತ್ತೆ, ಆಗ ಅವರನ್ನು ಪೊಲೀಸರು ಬಿಟ್ಟು ಕಳುಹಿಸಿದ್ದಾರೆ. ಸಚಿವರು ಸಂಬಂಧಿಯ ರಕ್ಷಣೆಗೆ ನಿಂತಿದ್ದಾರೆ. ನಮಗೆ ಅವರನ್ನ ಕಂಡರೆ ಭಯವಾಗುತ್ತೆ. ನಾವು ಗಂಡಸರಲ್ಲ.. ಅವರೊಬ್ಬರೇ ಗಂಡಸು ಎಂದು ವ್ಯಂಗ್ಯವಾಡಿದರು. ಸರ್ಕಾರ ಏನ್​ ಮಾಡ್ತಿದ್ದಾರೆ ಎಂದು ನಾವೂ ನೋಡ್ತೀವಿ. ಸಿಎಂಗೆ ಬದ್ಧತೆ ಇದ್ರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

  ಡಿಕೆಶಿ ಆರೋಪಕ್ಕೆ ವಿಧಾನಸೌಧದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸಚಿವ ಅಶ್ವತ್ಥ​ ನಾರಾಯಣ, ಒಬ್ಬನೇ ಒಬ್ಬ ವ್ಯಕ್ತಿಗೂ ಪಿಎಸ್​ಐ ಎಕ್ಸಾಂನಲ್ಲಿ ಯಾವುದೇ ರೀತಿಯ ಸಹಾಯ ಮಾಡಿ ಎಂದು ಹೇಳಿಲ್ಲ. ಬಾಯಿಗೆ ಬಂದಂತೆ ಆಪಾದನೆ ಮಾಡುವುದು ಸರಿಯಲ್ಲ. ಅವರವರ ಅರ್ಹತೆ, ಜವಾಬ್ದಾರಿಯುತವಾಗಿ ಹೇಳಿಕೆ ಕೊಡಬೇಕು. ಯಾರಿಗೋ ಒಬ್ಬರಿಗೆ ಮಸಿ ಬಳೀಬೇಕು ಅನ್ನುವಂತೆ ಗಾಳಿಯಲ್ಲಿ ಗುಂಡು ಹಾರಿಸಬಾರದು. ನಾಯಕನಾಗ್ತಿದ್ದಾನೆ, ಅದನ್ನ ತಡೆಯಬೇಕು ಅಂತ ಇಂಥ ಕೀಳುಮಟ್ಟದ ಹೇಳಿಕೆ ಕೊಡ್ತಿದ್ದಾರೆ. ತನಿಖೆ ವರದಿ ಬರಬೇಕು. ಈ ಅಕ್ರಮದಲ್ಲಿ ಯಾರೇ ಇದ್ದರೂ ಕ್ಷಮಿಸೋ ಪ್ರಶ್ನೆ ಬರಬಾರದು. ಯಾರಿಗೂ ತಪ್ಪಿಸಿಕೊಳ್ಳಲು ಅವಕಾಶ ಸಿಗಬಾರದು ಎಂದರು.

  ನಿನ್ನಿಂದ ಅಪ್ಪ ಕೂಡ ಜೈಲಿಗೆ ಹೋಗುವಂತಾಯ್ತು.. ಎಲ್ಲವನ್ನೂ ಟಿವಿಯಲ್ಲಿ ನೋಡಿದೆ… ಮಗನ ಮಾತಿಗೆ ಕಣ್ಣೀರಿಟ್ಟ ದಿವ್ಯಾ

  ದಿವ್ಯಾ ಹಾಗರಗಿಗೆ ಸಿಕ್ಕಿತ್ತು ಕಾಂಗ್ರೆಸ್​ ಶ್ರೀರಕ್ಷೆ! ತಲೆಮರೆಸಿಕೊಳ್ಳಲು ಸಹಾಯ ಮಾಡಿದ್ದು ಯಾರೆಂದು ಉಲ್ಲೇಖಸಿದ ಸಿಐಡಿ

  ಇಡೀ ರಾತ್ರಿ ಗಂಡನ ಶವದ ಪಕ್ಕ ಮಲಗಿ ಹೈಡ್ರಾಮ… ಒಳ ಉಡುಪಲ್ಲಿ ಪತ್ನಿ ಬಚ್ಚಿಟ್ಟುಕೊಂಡ ಮಾಂಗಲ್ಯದ ಹಿಂದಿತ್ತು ಸ್ಫೋಟಕ ರಹಸ್ಯ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts