ಗುರು ಕಾರುಣ್ಯದಿಂದ ಅರಳುವುದು ಶಿಷ್ಯನ ಮನ: ರಂಭಾಪುರಿಶ್ರೀ

rambapuri sree programme

ಶಿವಮೊಗ್ಗ: ಮಾನವ ಜೀವನ ಸುಖ ದುಃಖಗಳಿಂದ ಕೂಡಿದೆ. ಶಿವಜ್ಞಾನ ಮತ್ತು ಪೂಜಾದಿಗಳಿಂದ ನಿರತರಾದವರಿಗೆ ಯಾವುದರ ಭಯ ಭೀತಿಯಿಲ್ಲ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ತಿಳಿಸಿದರು.

ಸೊರಬ ತಾಲೂಕಿನ ಬಂಕಸಾಣ ಹೊಳೆಲಿಂಗೇಶ್ವರ ಜಾಗೃತ ಕ್ಷೇತ್ರದಲ್ಲಿ ಗುರುವಾರ ಅಖಿಲ ಕರ್ನಾಟಕ ವೀರಶೈವ ಪುರೋಹಿತ ಮಹಾಸಭಾದ ಸೊರಬ ತಾಲೂಕು ಘಟಕದ ಆಶ್ರಯದಲ್ಲಿ ಆಯೋಜಿಸಿದ್ದ ಮಹಾರುದ್ರ ಯಜ್ಞ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಜಗದ್ಗುರುಗಳು, ವಿಶ್ವ ಶಕ್ತಿಗೆ ಮೂಲ ಶಿವಶಕ್ತಿ. ಪರಶಿವ ತತ್ವಕ್ಕಿಂತ ಮಿಗಿಲಾದ ತತ್ವ ಈ ಜಗದಲ್ಲಿ ಮತ್ತೊಂದಿಲ್ಲ ಎಂದರು.
ವೀರಶೈವ ಧರ್ಮದಲ್ಲಿ ಪಂಚ ಯಜ್ಞಗಳನ್ನು ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ್ದಾರೆ. ಶಿವನಿಗೆ ಸಮರ್ಪಿತವಾದ ಪತ್ರ ಪುಷ್ಪಫಲಗಳನ್ನು ಸ್ವೀಕರಿಸುವುದರಿಂದ ಸರ್ವ ಪಾಪ ತಾಪಗಳು ಪರಿಹಾರವಾಗುತ್ತವೆ. ವಿಶ್ವವನ್ನು ಬೆಳಗುವ ಪೂರ್ಣಾಹಂತಾತ್ಮಕವಾದ ಸ್ವಾತ್ಮ ತೇಜದಲ್ಲಿ ಈ ದೃಶ್ಯ ರೂಪವೆಲ್ಲವನ್ನು ಕಾಣಬಹುದು ಎಂದರು.
ರವಿ ಕಿರಣದಿಂದ ಕಮಲ ಅರಳುವಂತೆ ಗುರು ಕಾರುಣ್ಯದಿಂದ ಶಿಷ್ಯನ ಮನ ಅರಳುವುದು. ಸದ್ಗುಣಶೀಲನಾದ ಗುರುವು ಪ್ರಬೋಧಿಸಿ ಪ್ರೇರಣೆ ನೀಡಲು ಶಿಷ್ಯನ ಜೀವ ಭಾವ ತೊಲಗಿ ಜೀವನ್ಮುಕ್ತನಾಗುವನು. ಸರ್ವ ಜನರ ಸಂಕಲ್ಪ ಸಿದ್ಧಿಗಾಗಿ ಶಾಂತಿ ಸಂತೃಪ್ತಿಯ ಪ್ರಾಪ್ತಿಗಾಗಿ ಕೈಕೊಂಡ 3 ದಿನಗಳ ಮಹಾರುದ್ರ ಯಜ್ಞ ತಾಲೂಕಿನ ಇತಿಹಾಸದಲ್ಲಿ ಇದೇ ಮೊದಲಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ದುಗ್ಲಿ-ಕಡೇನಂದಿಹಳ್ಳಿ ಶ್ರೀ ರೇವಣಸಿದ್ಧೇಶ್ವರ ಶಿವಾಚಾರ್ಯ, ಶ್ರೀ ಶಾಂತಪುರ ಶಿವಾನಂದ ಶಿವಾಚಾರ್ಯ, ಜಡೆ ಶ್ರೀ ಡಾ. ಮಹಾಂತ ಸ್ವಾಮೀಜಿ, ಕ್ಯಾಸನೂರು ತೊಗರ್ಸಿಯ ಶ್ರೀ ಗುರಬಸವ ಪಂಡಿತಾರಾಧ್ಯ ಶಿವಾಚಾರ್ಯ, ಕಣ್ವಕುಪ್ಪೆ ಶ್ರೀ ಶಾಂತಲಿಂಗ ಶಿವಾಚಾರ್ಯ, ಲಕ್ಕವಳ್ಳಿ ಸ್ವಸ್ತಿ ಶ್ರೀ ವೃಷಭಸೇನ ಸ್ವಾಮೀಜಿ ಆಶೀರ್ವಚನ ನೀಡಿದರು. ಹಲವು ವೇದ ವಿದ್ವಾಂಸರಿಗೆ, ದಾನಿಗಳಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡಿದರು.
ಅರೆತಲಗಡ್ಡಿ ವಿದ್ವಾನ್ ಶಿವಕುಮಾರ ಶಾಸ್ತ್ರಿಗಳು ಪ್ರಾಸ್ತಾವಿಕವಾಗಿ ಮಾತನಾಡಿದರು. ಅಖಿಲ ಕರ್ನಾಟಕ ವೀರಶೈವ ಪುರೋಹಿತ ಮಹಾಸಭಾದ ಅಧ್ಯಕ್ಷ ಚನ್ನೇಶ ಶಾಸ್ತ್ರಿ, ಶ್ರೀ ಹೊಳೆಲಿಂಗೇಶ್ವರ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಜಪ್ಪಗೌಡ ಬಂಕಸಾಣ, ಜಡೆ ಗ್ರಾಪಂ ಅಧ್ಯಕ್ಷ ಅಮಿತಗೌಡ, ಸೊರಬದ ಮಲ್ಲಿಕಾರ್ಜುನಸ್ವಾಮಿ ಅರಮನೆಮಠ, ಬಂಕವಳ್ಳಿ ವೀರೇಂದ್ರ ಪಾಟೀಲ ಇದ್ದರು.
ಮಾರನಬೀಡ ಇಂದ್ರಯ್ಯ ಹಿರೇಮಠ ಭಕ್ತಿಗೀತೆ, ಹರತಾಳು ವಿಶ್ವಕರ್ಮ ಚಂಡೆ ಬಳಗ, ತೆಲಗುಂದ ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆ ಮತ್ತು ಆನವಟ್ಟಿ ಕಲಾಕಾರ್ ನೃತ್ಯ ಶಾಲೆ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಕಾರ್ಯಕ್ರಮಕ್ಕೂ ಮುನ್ನ ವರದಾ ನದಿ ತಟದಲ್ಲಿರುವ ಶ್ರೀ ವೀರಭದ್ರಸ್ವಾಮಿ ದೇವಾಲಯದಿಂದ ಹೊಳೆಲಿಂಗೇಶ್ವರ ದೇವಸ್ಥಾನದವರಗೆ ಪೂರ್ಣಕುಂಭ ಮಂಗಲ ವಾದ್ಯಗಳೊಂದಿಗೆ ಶ್ರೀ ರಂಭಾಪುರಿ ಜಗದ್ಗುರುಗಳನ್ನು ಬರ ಮಾಡಿಕೊಂಡರು. ಆಗಮಿಸಿದ ಸಹಸ್ರಾರು ಭಕ್ತರಿಗೆ ಅನ್ನ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.

Share This Article

ನಿಮ್ಮ ಅಂಗೈನಲ್ಲಿ ಈ ಚಿಹ್ನೆ ಇದೆಯಾ ಚೆಕ್​ ಮಾಡಿ ನೋಡಿ… ಇದ್ರೆ ನೀವು ರಾಜಯೋಗ ಅನುಭವಿಸುತ್ತೀರಿ!

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…

ನಿಮ್ಮ ಮನೆಯಲ್ಲಿ ಮರಿ ಹಲ್ಲಿ ಇದ್ರೆ ಈ ಒಂದು ತಪ್ಪು ಮಾತ್ರ ಮಾಡ್ಬೇಡಿ: ಮಾಡಿದ್ರೆ ಈ ಗಂಡಾಂತರ ಫಿಕ್ಸ್!

ಸಾಮಾನ್ಯವಾಗಿ ಹಿಂದು ಪುರಾಣದಲ್ಲಿ ಹಲ್ಲಿಗಳನ್ನು ಅದೃಷ್ಟದ ಸಂಕೇತ ಎಂದು ಕರೆಯಲಾಗಿದೆ. ಹಲ್ಲಿಗಳು ಲೊಚಗುಡುವುದು ಶುಭ ಸೂಚನೆ…

ಮಧ್ಯಾಹ್ನ, ರಾತ್ರಿ ಊಟದಲ್ಲಿ ಜಾಸ್ತಿ ಉಪ್ಪು ಸೇವಿಸಿದ್ರೆ ಕ್ಯಾನ್ಸರ್‌ ಬರೋದು ಪಕ್ಕಾ! ಇರಲಿ ಎಚ್ಚರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…