ಹೊಳೆಹೊನ್ನೂರು: ಭದ್ರಾವತಿ ತಾಲೂಕಿನ ನಾಗತಿಬೆಳಗಲಿನ ಸಮುದಾಯ ಭವನ ಭಾನುವಾರ ವಿಶೇಷ ವಿವಾಹಕ್ಕೆ ಸಾಕ್ಷಿಯಾಯಿತು. ಅಂಗವಿಕಲ ವಧು-ವರನನ್ನು ಹರಸಲು ಬಂದ ಅತಿಥಿಗಳಿಂದ ಕಲ್ಯಾಣ ಮಂಟಪ ಕಳೆಗಟ್ಟಿತ್ತು.
ಸಮೀಪದ ಅಗಸಹಳ್ಳಿಯ ಅರುಣ್‌ಕುಮಾರ್ ಹಾಗೂ ಕಡೂರು ತಾಲೂಕಿನ ಮಾಚೇನಹಳ್ಳಿಯ ಉಷಾ ಸಪ್ತಪದಿ ತುಳಿದರು. ವಿಶೇಷವೆಂದರೆ ವಧು-ವರ ಇಬ್ಬರಿಗೂ ಮಾತು ಬರುವುದಿಲ್ಲ, ಕಿವಿಯೂ ಕೇಳುವುದಿಲ್ಲ. ಅಗಸಹಳ್ಳಿಯ ಅರುಣ್‌ಕುಮಾರ್ ಮೈಸೂರಿನಲ್ಲಿ ಇಂಜಿನಿಯರ್ ವೃತ್ತಿ ಮಾಡುತ್ತಿದ್ದಾರೆ. ಅರುಣ್‌ಕುಮಾರ್ ಮನೆಯವರು ಮಾಚೇನಹಳ್ಳಿಯ ಉಷಾಳನ್ನು ನಿಶ್ಚಯಮಾಡಿ ನಿಶ್ಚಿತಾರ್ಥ ನೆರವೇರಿಸಿದ್ದರು. ಭಾನುವಾರ ನಾಗತಿಬೆಳಗಲಿನ ಕಲ್ಯಾಣ ಮಂಟಪದಲ್ಲಿ ಅದ್ದೂರಿಯಾಗಿ ವಿವಾಹ ಮಾಡಿ ಸಂತೋಷಪಟ್ಟಿದ್ದಾರೆ. ಈ ಜೋಡಿಗೆ ಸಂಬಂಧಿಗಳು, ಗೆಳೆಯರು, ಗ್ರಾಮಸ್ಥರು ಮನದುಂಬಿ ಶುಭಹಾರೈಸಿದರು.
ವಧು-ವರರ ಹಾವ-ಭಾವದ ಸಂಭಾಷಣೆಗಳಿಂದ ನೆರೆದಿದ್ದವರ ಕಣ್ತುಂಬಿ ಬಂದವು. ಬೆಂಗಳೂರು, ಮೈಸೂರು, ಚಿಕ್ಕಮಗಳೂರು ಭಾಗದಿಂದ ಬಂದಿದ 200ಕ್ಕೂ ಹೆಚ್ಚು ಅಂಗವಿಕಲ ಸ್ನೇಹಿತರ ಕಣ್ಸನ್ನೆ, ಮಾತುಕತೆ ಕಂಡು ಸ್ಥಳೀಯರು ಮೂಖವಿಸ್ಮಿತರಾದರು. ವಿವಾಹದ ಪ್ರತಿ ಹಂತದಲ್ಲೂ ವಧು-ವರರ ಜತೆಯಲ್ಲೇ ಇದ್ದ ವಿಕಲಾಂಗ ಸ್ನೇಹಿತರ ಗುಂಪು ವಧು-ವರರನ್ನು ಸನ್ನೆ ಮೂಲಕ ಕಿಚಾಯಿಸಿದ್ದು, ಸಂಬಂಧಿಗಳ ಮೆಚ್ಚುಗೆಗೆ ಪಾತ್ರವಾಯಿತು.
ಸಂಜೆ ವರನ ಊರು ಅಗಸಹಳ್ಳಿಯಲ್ಲಿ ಮನೆದುಂಬಿಸುವ ಶಾಸ್ತ್ರದವರೆಗೆ ಜತೆಗಿದ್ದ ಸ್ನೇಹಿತರು ತಮ್ಮದೇ ಶೈಲಿಯಲ್ಲಿ ವಿವಾಹಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಸ್ವ ಗ್ರಾಮಗಳಿಗೆ ತೆರಳಿದರು. ವಿಶೇಷ ವಿವಾಹ ಜರುಗುತ್ತಿರುವ ಸುದ್ದಿ ಹರಡಿ ವರನ ಸಂಬಂಧಿಕರು ಸೇರಿ ಸುತ್ತಮುತ್ತಲಿನ ಗ್ರಾಮಗಳ ಜನ ಕಲ್ಯಾಣ ಮಂಟಪಕ್ಕೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಸಪ್ತಪದಿ ತುಳಿದ ಅಂಗವಿಕಲ ಜೋಡಿ
You Might Also Like
ಚಳಿಗಾಲದಲ್ಲಿ ಈ ಒಂದು ಹಣ್ಣನ್ನು ತಿಂದರೆ ಸಾಕು.. ರೋಗಗಳೇ ಬರುವುದಿಲ್ಲ..fruits
fruits : ಚಳಿಗಾಲ ಬಂದಿದೆ ಎಂದರೆ ಕೆಮ್ಮು, ನೆಗಡಿ, ಜ್ವರ, ಗಂಟಲು ನೋವು, ಕೀಲು ನೋವು…
ಮಕರ ರಾಶಿಗೆ ಬುಧ ಪ್ರವೇಶ: ಈ 5 ರಾಶಿಯವರಿಗೆ ರಾಜಯೋಗ, ಖುಲಾಯಿಸಲಿದೆ ಅದೃಷ್ಟ! Zodiac Sign
Zodiac Sign : ಜ್ಯೋತಿಷ್ಯದ ಆಧಾರದ ಮೇಲೆ, ಒಬ್ಬರು ಜನಿಸಿದ ರಾಶಿ, ನಕ್ಷತ್ರ ಹಾಗೂ ಗ್ರಹಗಳ…
ಪೇನ್ ಕಿಲ್ಲರ್ ಮಾತ್ರೆ vs ಜೆಲ್… ಎರಡರಲ್ಲಿ ಯಾವುದು ಉತ್ತಮ? ಇಲ್ಲಿದೆ ಉಪಯುಕ್ತ ಮಾಹಿತಿ… Painkiller Tablet vs Gel
Painkiller Tablet vs Gel : ದೇಹವು ಗಾಯಗೊಂಡಾಗ ಅಥವಾ ಉಳುಕಿದಾಗ ನೋವು ಅನುಭವಿಸುವುದು ಸಹಜ.…