ಮೂವರು ಕಾಶ್ಮೀರಿ ಪ್ರತ್ಯೇಕತಾವಾದಿಗಳನ್ನು ಬಂಧಿಸಿದ ರಾಷ್ಟ್ರೀಯ ತನಿಖಾ ದಳ

ನವದೆಹಲಿ: ಮೂವರು ಕಾಶ್ಮೀರಿ ಪ್ರತ್ಯೇಕತಾವಾದಿ ಮುಖಂಡರನ್ನು ದೆಹಲಿ ನ್ಯಾಯಾಲಯ 10 ದಿನಗಳ ಕಾಲ ರಾಷ್ಟ್ರೀಯ ತನಿಖಾ ದಳದ ವಶಕ್ಕೆ ನೀಡಿದೆ.

2017ರಲ್ಲಿ ಜಮಾತ್ ಉದ್‌ ದಾವಾ ಉಗ್ರ ಸಂಘಟನೆ ಮುಖ್ಯಸ್ಥ ಹಫೀಜ್ ಸಯೀದ್‌ಗಾಗಿ ದೇಣಿಗೆ ಸಂಗ್ರಹಿಸುತ್ತಿದ್ದ ಆರೋಪಕ್ಕೆ ಸಂಬಂಧಪಟ್ಟ ಪ್ರಕರಣದ ವಿಚಾರಣೆ ನಡೆಸಿದ ರಾಷ್ಟ್ರೀಯ ತನಿಖಾ ದಳದ ವಿಶೇಷ ನ್ಯಾಯಾಧೀಶ ರಾಕೇಶ್​ ಸ್ಯಾಲ್​ ಪ್ರತ್ಯೇಕತಾವಾದಿಗಳಾದ ಮಸ್ರತ್​ ಅಲಂ, ಆಸಿಯಾ ಅಂದ್ರಾಬಿ ಮತ್ತು ಶಬಿರ್​ ಶಾನನ್ನು 10 ದಿನಗಳ ಕಾಲ ಎನ್​ಐಎ ವಶಕ್ಕೆ ಕಳಿಸಿ ಆದೇಶ ನೀಡಿದ್ದಾರೆ. ಪ್ರಕರಣದ ವಿಚಾರಣೆಗಾಗಿ ಈ ಮೂವರನ್ನು 15 ದಿನಗಳ ಕಾಲ ತಮ್ಮ ವಶಕ್ಕೆ ನೀಡಬೇಕು ಎಂದು ರಾಷ್ಟ್ರೀಯ ತನಿಖಾ ದಳ ಮನವಿ ಮಾಡಿತ್ತು. ಶಬಿರ್​ ಶಾ ಮತ್ತು ಅಂದ್ರಾಬಿ ಇಬ್ಬರೂ ಬೇರೆ ಕೆಲವು ಪ್ರಕರಣಕ್ಕೆ ಸಂಬಂಧಪಟ್ಟಂತೆ ದೆಹಲಿಯಲ್ಲಿ ಬಂಧನದಲ್ಲಿ ಇದ್ದರು. ಆಲಂನನ್ನು ವಿಚಾರಣೆಗೋಸ್ಕರ ಜಮ್ಮು ಮತ್ತು ಕಾಶ್ಮೀರದಿಂದ ಕರೆತರಲಾಗಿತ್ತು. ಸದ್ಯ ಇವರೆಲ್ಲರನ್ನೂ ತಿಹಾರ್​ ಜೈಲಿನಲ್ಲಿ ಇಡಲಾಗಿದೆ.

ಜಮ್ಮುಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳನ್ನು ನಡೆಸಲು ಅಕ್ರಮವಾಗಿ ಹಣ ಸಂಗ್ರಹಣೆ ಮಾಡುತ್ತಿದ್ದ ಆರೋಪದಡಿ 26/11ರ ಮುಂಬೈ ದಾಳಿಯ ಮಾಸ್ಟರ್​ ಮೈಂಡ್​ ಹಫೀಜ್​ ಸೈಯದ್​ ಸೇರಿ ಈ ಮೂವರು ಪ್ರತ್ಯೇಕತಾವಾದಿಗಳ ವಿರುದ್ಧ ಎನ್​ಐಎ ಪ್ರಕರಣ ದಾಖಲಿಸಿತ್ತು. 2018ರಲ್ಲಿ ಹಿಜಬುಲ್​ ಮುಜಾಹಿದ್ದೀನ್​ ಸಂಘಟನೆ ಮುಖ್ಯಸ್ಥ ಸೈಯದ್​ ಸಲಾಹುದ್ದೀನ್​, ಉದ್ಯಮಿ ಜಹೂರ್​ ಅಹ್ಮದ್​ ಶಾ ವಾಟಾಲಿ ಮತ್ತು ಸೈಯದ್​​​​​ ನ ವಿರುದ್ಧ ಪ್ರಕರಣ ದಾಖಲಿಸಿತ್ತು. 

Leave a Reply

Your email address will not be published. Required fields are marked *