More

  ನಿರ್ಭಯಾ ಅತ್ಯಾಚಾರ ಅಪರಾಧಿಗಳಿಗೆ ಡೆತ್​ ವಾರಂಟ್​ ಜಾರಿ ಮಾಡಿದ ಪಟಿಯಾಲಾ ಕೋರ್ಟ್​; ಜ.22ರಂದು ಬೆಳಗ್ಗೆ 7ಕ್ಕೆ ಗಲ್ಲು

  ನವದೆಹಲಿ: ನಿರ್ಭಯಾ ಅತ್ಯಾಚಾರ ಪ್ರಕರಣದ ಎಲ್ಲ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಕಾಯಂಗೊಳಿಸಿ ಸುಪ್ರೀಂಕೋರ್ಟ್​ ಆದೇಶ ಹೊರಡಿಸಿದ್ದರೂ ಡೆತ್​ ವಾರಂಟ್​ ಜಾರಿ ಮಾಡಲು ಸಮಯ ಕಾಯ್ದಿರಿಸಿದ್ದ ದೆಹಲಿ ಪಟಿಯಾಲಾ ಕೋರ್ಟ್​ ಇಂದು ಮಹತ್ವದ ತೀರ್ಪು ನೀಡಿದೆ.

  ನಾಲ್ವರು ಅಪರಾಧಿಗಳಿಗೂ ಇಂದು ಡೆತ್​ ವಾರಂಟ್​ ಜಾರಿ ಮಾಡಿದ ದೆಹಲಿ ಪಟಿಯಾಲಾ ನ್ಯಾಯಾಲಯ, ಜನವರಿ 22ರಂದು ಬೆಳಗ್ಗೆ 7 ಗಂಟೆಗೆ ಅಪರಾಧಿಗಳಿಗೆ ಗಲ್ಲು ಶಿಕ್ಷೆ ನೀಡಲು ಆದೇಶ ಹೊರಡಿಸಿದೆ. ಪ್ರಕರಣ ನಡೆದ ಏಳುವರ್ಷಗಳ ಬಳಿಕ ಅಂತಿಮ ತೀರ್ಪು ಹೊರಬಿದ್ದಿದೆ.

  ಇಂದು ನಾಲ್ವರು ಅಪರಾಧಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶ ಸತೀಶ್​ ಕುಮಾರ್ ಅರೋರಾ ವಿಚಾರಣೆ ಮಾಡಿದರು.

  ಸುಪ್ರೀಂಕೋರ್ಟ್ ಎಲ್ಲ ಅಪರಾಧಿಗಳ ಮರುಪರಿಶೀಲನಾ ಅರ್ಜಿಯನ್ನೂ ವಜಾ ಮಾಡಿತ್ತು. ಅಪರಾಧಿಗಳಾದ ಪವನ್​, ವಿನಯ್​, ಅಕ್ಷಯ್​ ಹಾಗೂ ಮುಕೇಶ್​ಗೆ ಗಲ್ಲು ಶಿಕ್ಷೆ ಕಾಯಂ ಎಂದು ಡಿ.18ರಂದು ತೀರ್ಪು ನೀಡಿತ್ತು. ಅದರ ಬೆನ್ನಲ್ಲೇ ನಿರ್ಭಯಾ ಪಾಲಕರು, ಕೂಡಲೇ ಡೆತ್ ವಾರಂಟ್​ ಜಾರಿ ಮಾಡುವಂತೆ ದೆಹಲಿ ಪಟಿಯಾಲಾ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

  ಆದರೆ ಅಪರಾಧಿಗಳಿಗೆ ಕ್ಷಮಾದಾನಕ್ಕೆ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು ಎಂದು ಹೇಳಿದ್ದ ನ್ಯಾಯಾಧೀಶ ಸತೀಶ್​ ಕುಮಾರ್ ಅರೋರಾ ಅರ್ಜಿ ವಿಚಾರಣೆಯನ್ನು ಜನವರಿ 7 (ಇಂದು)ಕ್ಕೆ ಮುಂದೂಡಿದ್ದರು. (ಏಜೆನ್ಸೀಸ್​)

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts