ಪದವಿ ಗಳಿಸಿದರೆ ಸಾಲದು, ಪೂರಕ ಕೌಶಲ ಅಗತ್ಯ: ಎಐಸಿಟಿಇ ಅಧ್ಯಕ್ಷ ಪ್ರೊ. ಜಿ.ಟಿ. ಸೀತಾರಾಮ್

blank

ಬೆಂಗಳೂರು: ಬೆಂಗಳೂರು ಐಟಿ ರಾಜಧಾನಿಯಾಗಿ ಹೊರಹೊಮ್ಮಿದ್ದು, ನಾವೀಗ ಕೌಶಲ, ಸುಧಾರಿತ ಕೌಶಲ ಮತ್ತು ಮರು ಕೌಶಲಗಳನ್ನು ನಿರಂತರವಾಗಿ ಮೈಗೂಡಿಸಿಕೊಳ್ಳಬೇಕು. ಇಂದು ಪದವಿ ಗಳಿಸಿದರೆ ಸಾಲದು ಪೂರಕ ಶಿಕ್ಷಣ ಕಲಿಕೆ ಅಗತ್ಯವಾಗಿದೆ ಎಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತಿನ (ಎಐಸಿಟಿಇ) ಅಧ್ಯಕ್ಷ ಪ್ರೊ. ಜಿ.ಟಿ. ಸೀತಾರಾಮ್ ಹೇಳಿದರು.

ಬಸವನಗುಡಿ ನ್ಯಾಷನಲ್ ಕಾಲೇಜಿನ 10ನೇ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದ ಅವರು, ಆಧುನಿಕ ಯುಗದಲ್ಲಿ ಕೃತಕ ಬುದ್ದಿಮತ್ತೆ ನಿರ್ಣಾಯಕ ಪಾತ್ರ ವಹಿಸಲಿದ್ದು, 2025 ಕೃತಕ ಬುದ್ದಿಮತ್ತೆ ವರ್ಷವಾಗಿ ವಿಜೃಂಭಿಸಲಿದೆ ಎಂದು ಹೇಳಿದರು.

ಡೀಪ್ ಫೇಕ್ ಬಗ್ಗೆಯೂ ಇದೇ ರೀತಿಯ ಕಳವಳ ವ್ಯಕ್ತವಾಗಿತ್ತು. 2022ರ ನವೆಂಬರ್‌ನಲ್ಲಿ ಚಾಟ್ ಜಿಟಿಪಿ ಬಂದಾಗಲೂ ಭೀತಿಯ ವಾತಾವರಣ ಇತ್ತು. ಚಾಟ್ ಜಿಟಿಪಿ ತಂತ್ರಜ್ಞಾನದಲ್ಲಿ ಕೇವಲ 20 ಸೆಕೆಂಡ್‌ಗಳಲ್ಲಿ ಕನ್ನಡ ಕವನವನ್ನು ಸಹ ಹೊರ ತರಬಹುದು. ಇದೇ ರೀತಿ ಕೃತಕ ಬುದ್ದಿಮತ್ತೆಯಿಂದ ನೈಜವಾಗಿ ಸಂಗೀತ ಸಂಯೋಜನೆ ಮಾಡಬಹುದಾಗಿದೆ. ಹೀಗಾಗಿ, ಕಲಾವಿದರು, ಕವಿಗಳು ಒಳಗೊಂಡಂತೆ ಹಲವು ಹುದ್ದೆಗಳನ್ನು ತಂತ್ರಜ್ಞಾನ ಕಸಿಯಲಿದೆ ಎಂಬ ಆತಂಕವಿದೆ ಎಂದರು.

1980ರ ಸಮಯದಲ್ಲಿ ಕಂಪ್ಯೂಟರ್ ಬಂದಾಗ ಬ್ಯಾಂಕ್ ಸಿಬ್ಬಂದಿ ನಮ್ಮ ಉದ್ಯೋಗಕ್ಕೆ ಕುತ್ತು ಬರಲಿದೆ ಎಂದು ತೀವ್ರ ಹೋರಾಟ ಮಾಡಿದ್ದರು. ಆದರೆ, ಈಗ ಎಐ ತಂತ್ರಜ್ಞಾನದಿಂದಲೂ ಕೆಲವು ಉದ್ಯೋಗಗಳು ನಷ್ಟವಾಗಬಹುದು. ಆದರೆ, ಸುಧಾರಿತ ತಂತ್ರಜ್ಞಾನ ಅನಿವಾರ್ಯ ಎಂದು
ಅಧ್ಯಯನಕ್ಕೆ ಕೊನೆಯಿಲ್ಲ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ನಿರಂತರ ಓದಿಗೆ ಒತ್ತು ನೀಡಲಾಗಿದೆ. ತಂತ್ರಜ್ಞಾನ ವ್ಯಾಪಕವಾಗಿ ಬೆಳೆಯುತ್ತಿದ್ದು, ವಿದ್ಯಾರ್ಥಿಗಳು ಹೊಸ ವಿಚಾರಗಳನ್ನು ಕಲಿತು ಭವ್ಯ ಭವಿಷ್ಯ ರೂಪಿಸಿಕೊಳ್ಳಬೇಕು. ಕೃತಕ ಬುದ್ದಿಮತ್ತೆಗೆ ಪರ್ಯಾಯವಿಲ್ಲ. ಎಲ್ಲ ಪೀಳಿಗೆಗೆ ಬೇಕಾಗುವ ಬುದ್ದಿಮತ್ತೆ ಇದೀಗ ಲಭ್ಯವಿದೆ. ಇದನ್ನು ಕ್ರೌಡ್ ಇಂಟಲಿಜೆನ್ಸಿ ಎಂದು ಕರೆಯಲಾಗುತ್ತದೆ ಎಂದು ಪ್ರೊ. ಜಿ.ಟಿ. ಸೀತಾರಾಮ್ ಹೇಳಿದರು.

ಶಾಸಕ ಡಾ. ಉದಯ್ ಗರುಡಾಚಾರ್ ಮಾತನಾಡಿ, ನ್ಯಾಷನಲ್ ಕಾಲೇಜು ವಿಶ್ವದ ಅತ್ಯುತ್ತಮ ಶಿಕ್ಷಣ ಸಂಸ್ಥೆ. ಇಲ್ಲಿ ಕಲಿಕೆಗೆ ವ್ಯಾಪಕ ಅವಕಾಶಗಳಿದ್ದು, ಇದನ್ನು ವಿದ್ಯಾರ್ಥಿ ಸಮುದಾಯ ಸದ್ಬಳಕೆ ಮಾಡಿಕೊಳ್ಳಬೇಕು. ಶಿಕ್ಷಣ ಶಿಲ್ಪಿ ಡಾ. ಎಚ್.ನರಸಿಂಹಯ್ಯ ಅವರ ನೆನಪುಗಳು ಇಲ್ಲಿ ಅಚ್ಚಳಿಯದೇ ಉಳಿದಿವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಿಕ್ಷಣ ಸಂಸ್ಥೆಯ ಗೌರವ ಅಧ್ಯಕ್ಷ ಡಾ. ಎಚ್. ಎನ್. ಸುಬ್ರಮಣ್ಯ, ಉಪಾಧ್ಯಕ್ಷ ಜಿ.ವೈ. ಮಧುಸೂಧನ್, ಗೌರವ ಕಾರ್ಯದರ್ಶಿ ಬಿ.ಎಸ್. ಅರುಣ್ ಕುಮಾರ್, ಖಜಾಂಚಿ ತಲ್ಲಂ ಆರ್. ದ್ವಾರಕಾನಾಥ್ ಸೇರಿ ಹಲವರು ಉಪಸ್ಥಿತರಿದ್ದರು.

577 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
9 ಚಿನ್ನದ ಪದಕ, ತಲಾ 9 ಮಂದಿಗೆ ಬೆಳ್ಳಿ ಮತ್ತು ಕಂಚಿನ ಪದಕ ಸೇರಿ 577 ವಿದ್ಯಾರ್ಥಿಗಳಿಗೆ ಪದವಿ ಪದವಿ ಪ್ರದಾನ ಮಾಡಲಾಯಿತು.

ರಾಷ್ಟ್ರ ನಿರ್ಮಾಣದ ಶಿಕ್ಷಣದ ಮೂಲಕ ಶೈಕ್ಷಣಿಕ ವಲಯಕ್ಕೆ ನ್ಯಾಷನಲ್ ಕಾಲೇಜು ಬಹುದೊಡ್ಡ ಕೊಡುಗೆ ನೀಡುತ್ತಿದೆ. ಎಲ್ಲ ಮೌಲ್ಯಗಳನ್ನು ಪ್ರತಿಪಾದಿಸುವ, ನೈತಿಕ ಆಡಳಿತವಿರುವ ಮಹೋನ್ನತ ಸಂಸ್ಥೆ.
– ವಿ. ವೆಂಕಟಶಿವಾ ರೆಡ್ಡಿ , ನ್ಯಾಷನಲ್ ಎಜುಕೇಷನ್ ಸೊಸೈಟಿ ಗೌರವ ಕಾರ್ಯದರ್ಶಿ

Share This Article

ಬೇಸಿಗೆಯಲ್ಲಿ ಕೋಳಿ ಅಥವಾ ಮೀನು?; ತಿನ್ನಲು ಯಾವ ಮಾಂಸ ಉತ್ತಮ? ಇಲ್ಲಿದೆ ಮಾಹಿತಿ.. | Meat

Meat : ಸಾಮಾನ್ಯವಾಗಿ ಬೇಸಿಗೆಯಲ್ಲಿ ಅಧಿಕ ಜನರು ತಂಪುಪಾನಿಯಗಳನ್ನು ಸೇವಿಸುತ್ತಾರೆ. ಈ ಸಮಯದಲ್ಲಿ ಹೆಚ್ಚಿನವರು ಹಗುರವಾದ(ಮೃದುವಾದ)…

ಹಗಲಿನಲ್ಲಿ ನಿದ್ದೆ ಮಾಡ್ತೀರಾ? Daytime Sleeping ಒಳ್ಳೆಯದೋ… ಕೆಟ್ಟದೋ..? sleeping

sleeping: ಸಾಮಾನ್ಯವಾಗಿ, ಅನೇಕ ಜನರು ಹಗಲಿನಲ್ಲಿ ಮಲಗುವ ಅಭ್ಯಾಸವನ್ನು ಹೊಂದಿರುತ್ತಾರೆ. ಕೆಲವರಿಗೆ ಎಷ್ಟೇ ಪ್ರಯತ್ನಿಸಿದರೂ ಹಗಲಿನಲ್ಲಿ…

ಪ್ರತಿದಿನ ಬೆಳಗ್ಗೆ ಎಳನೀರು ಕುಡಿಯುತ್ತೀರಾ? ಹಾಗಿದ್ರೆ ಇದು ನಿಮಗೆ ಗೊತ್ತಿರಲಿ…coconut water

coconut water: ಬೇಸಿಗೆಯಲ್ಲಿ ದೇಹವನ್ನು ಹೈಡ್ರೀಕರಿಸಲು ನೀರಿನ ಜತೆ ನೈಸರ್ಗಿಕ ಆರೋಗ್ಯಕರ ಪಾನೀಯಗಳನ್ನು ಕುಡಿಯುವುದು ಒಳ್ಳೆಯದು.…