21 C
Bengaluru
Thursday, January 23, 2020

ಬಡವರ ಬಂಧು ದಂಪತಿ; ತಮಗೇ ಬಡತನವಿದ್ದರೂ ಪರರ ಹಸಿವು ನೀಗಿಸುತ್ತಿರುವ ಜೋಡಿ

Latest News

ಮೊಕದ್ದಮೆ ಹಿಂಪಡೆಯಲು ಒತ್ತಾಯ

ಮೈಸೂರು: ಮಾನಸಗಂಗೋತ್ರಿಯಲ್ಲಿ ಎನ್‌ಆರ್‌ಸಿ, ಸಿಎಎ ವಿರೋಧಿಸಿ ನಡೆದ ಪ್ರತಿಭಟನೆ ಸಂದರ್ಭ ‘ಫ್ರೀ ಕಾಶ್ಮೀರ’ ಫಲಕ ಪ್ರದರ್ಶನಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಮೇಲೆ ಹೂಡಿರುವ ಮೊಕದ್ದಮೆ...

ವಿದ್ಯಾಭ್ಯಾಸದ ಸಂದರ್ಭ ಪ್ರತಿಭಟನೆ ಬೇಡ

ಮೈಸೂರು: ಶಿಕ್ಷಣಕ್ಕೆ ಸಂಬಂಧಿಸಿದ ಸಮಸ್ಯೆಗಳಿದ್ದಲ್ಲಿ ವಿಶ್ವವಿದ್ಯಾಲಯಗಳ ಒಳಗೆ ಬಗೆಹರಿಸಿಕೊಳ್ಳಬೇಕೇ ಹೊರತು, ವಿದ್ಯಾಭ್ಯಾಸದ ಸಂದರ್ಭದಲ್ಲಿ ಪ್ರತಿಭಟನೆಗಳಿಗೆ ಮುಂದಾಗಬಾರದು ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್...

ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ಜಾರಿಗೊಳಿಸಿ

ಮೈಸೂರು: ವಿಧಾನಸಭೆ, ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ. 50ರಷ್ಟು ಮೀಸಲಾತಿ ಜಾರಿಗೊಳಿಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು. ಕರ್ನಾಟಕ ಪ್ರದೇಶ ಮಹಿಳಾ...

ಕೇಂದ್ರದ ಬಿಜೆಪಿ ಸರ್ಕಾರ ಬಿದ್ದ ದಿನ ಪೌರತ್ವ ತಿದ್ದುಪಡಿ ಕಾಯ್ದೆಯೂ ರದ್ದಾಗುತ್ತದೆ: ನಿವೃತ್ತ ಐಎಎಸ್​ ಅಧಿಕಾರಿ ಕಣ್ಣನ್​ ಗೋಪಿನಾಥನ್​

ಧಾರವಾಡ: ಪೌರತ್ವ ತಿದ್ದುಪಡಿ ಕಾಯ್ದೆ ಇಡೀ ರಾಷ್ಟ್ರಕ್ಕೆ ಸಂಬಂಧಿಸಿದ ಹಿನ್ನೆಲೆಯಲ್ಲಿ ಎಲ್ಲ ರಾಜ್ಯಗಳಲ್ಲೂ ಹೋರಾಟ ತೀವ್ರಗೊಂಡಿದೆ ಎಂದು ನಿವೃತ್ತ ಐಎಎಸ್​ ಅಧಿಕಾರಿ ಕಣ್ಣನ್​...

ಕಾಲೇಜ್ ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ

ಹಾವೇರಿ: ಇಲ್ಲಿನ ಪಿಬಿ ರಸ್ತೆಯಲ್ಲಿರುವ ಜಿಎಚ್ ಕಾಲೇಜ್​ನಲ್ಲಿ ಹೆಜ್ಜೇನು ದಾಳಿಯಿಂದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಬುಧವಾರ ಮಧ್ಯಾಹ್ನ ಸಂಭವಿಸಿದೆ.

ಎಷ್ಟಿದ್ದರೂ ಸಾಲದು ಎನ್ನುವ ಮನಸ್ಥಿತಿ ಹೊಂದಿರುವ ಜನರಿಗೆ ಉತ್ತಮ ನಿದರ್ಶನವಾಗಿದ್ದಾರೆ ಹುಬ್ಬಳ್ಳಿಯ ಸಮಾಜಸೇವಕ ದಂಪತಿ. ತಾವೇ ಬಡತನದಲ್ಲಿದ್ದರೂ ಹಸಿವಿನಿಂದ ಸಾಯುತ್ತಿರುವ ನೂರಾರು ಜನರ ಹೊಟ್ಟೆ ತುಂಬಿಸುವ ಕಾರ್ಯ ಮಾಡುತ್ತಿದ್ದಾರೆ ಇವರು.

ಹಸಿವು ಎಂಬುದು ಬಡಜನರಿಗೆ ಶಾಪ. ಈ ಶಾಪಕ್ಕೆ ಅದೆಷ್ಟೋ ಜನ ಬಲಿಯಾಗಿದ್ದಾರೆ. ಒಂದು ಹೊತ್ತಿನ ಊಟವೂ ಸಿಗದೇ ನರಳಿ ಸಾಯುವವರ ಸಂಖ್ಯೆ ದಿನೇ ದಿನೇ ಏರುತ್ತಲೇ ಇದೆ. ಆದರೆ ಇಂಥವರ ಹಸಿವು ನೀಗಿಸುವ ಕೆಲಸ ಮಾತ್ರ ಆಗುತ್ತಿರುವುದು ತೀರಾ ಅಪರೂಪ.

ಅಂಥ ಅಪರೂಪದ ದಂಪತಿ ಹುಬ್ಬಳ್ಳಿಯ ಲಕ್ಷ್ಮೇಶ್ವರದ ಕರಿಯಪ್ಪ ಶಿರಹಟ್ಟಿ ಹಾಗೂ ಸುನಂದಾ. ಖುದ್ದು ಬಡತನದಲ್ಲಿದ್ದರೂ ನಿರ್ಗತಿಕ ಹಾಗೂ ನಿರಾಶ್ರಿತರಿಗೆ ಊಟ, ಬಟ್ಟೆ ನೀಡುತ್ತಿದ್ದಾರೆ. ಮೂಲತಃ ಗದಗ ಜಿಲ್ಲೆಯ ಲಕ್ಷ್ಮೇಶ್ವರದ ಕರಿಯಪ್ಪ ಶಿರಹಟ್ಟಿ ಹಾಗೂ ಸುನಂದಾ ಶಿರಹಟ್ಟಿ ದಂಪತಿ ಸದ್ಯ ಹುಬ್ಬಳ್ಳಿಯಲ್ಲಿ ನೆಲೆಯೂರಿದ್ದು, ಇಲ್ಲಿಯೇ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಹುಬ್ಬಳ್ಳಿಯ ಆನಂದ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಈ ದಂಪತಿ ಜೋಳದ ರೊಟ್ಟಿ, ಚಪಾತಿ ಮಾಡಿ, ತೆಂಗಿನ ಕಾಯಿ ಮಾರುವ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ. ಬಂದ ದುಡ್ಡಿನಲ್ಲಿ ಮನೆ ಖರ್ಚು ಭರಿಸಿ ಉಳಿದ ದುಡ್ಡಿನಲ್ಲಿ ಈ ಸಮಾಜ ಕಾರ್ಯ ಮಾಡುತ್ತಿದ್ದಾರೆ. ಯಾರ ಬಳಿ ಕೈ ಚಾಚದೇ ಸ್ವಂತ ಖರ್ಚಿನಲ್ಲೇ ಹೊಟ್ಟೆಯ ದಾಹ ತೀರಿಸಲು ಮುಂದಾಗಿದ್ದಾರೆ.

ಸಂಸ್ಥೆ ಮೂಲಕ ಸಮಾಜಮುಖಿ ಕಾರ್ಯಗಳು: ಕರಿಯಪ್ಪ ಶಿರಹಟ್ಟಿಯವರು ತಮ್ಮ ತಂದೆಯ ಹೆಸರಿನಲ್ಲಿ ನೀಲಪ್ಪ ಗುಡ್ಡಪ್ಪ ಶಿರಹಟ್ಟಿ ಸೇವಾ ಸಂಸ್ಥೆ ತೆರೆದು ಸಂಸ್ಥೆಯ ಮೂಲಕ ಸಾಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸುಮಾರು 15 ವರ್ಷಗಳಿಂದ ಒಂದಿಲ್ಲೊಂದು ಸಮಾಜಕಾರ್ಯ ಮಾಡುತ್ತಿರುವ ಕರಿಯಪ್ಪನವರು ಸದಾ ಬಗಲಲ್ಲಿ ಒಂದು ಚೀಲ ಹಾಕಿಕೊಂಡೇ ಇರುತ್ತಾರೆ. ಇದರಲ್ಲಿ ನಿರ್ಗತಿಕರಿಗೆ ಕೊಡಲು ಆಹಾರ ಪೊಟ್ಟಣ, ತಿಂಡಿ ತಿನಿಸು, ಕೊಬ್ಬರಿ ಎಣ್ಣೆ, ಶೇವಿಂಗ್ ಸೆಟ್, ಬಿಸ್ಕೆಟ್ಸ್, ಬಟ್ಟೆಗಳು ಮುಂತಾದ ವಸ್ತುಗಳೇ ತುಂಬಿರುತ್ತವೆ.

ಪ್ರಯಾಣದ ವೇಳೆ ದಾರಿ ಮಧ್ಯೆ ನಿರ್ಗತಿಕರು ಕಂಡರೆ ತಕ್ಷಣವೇ ಅವರಿಗೆ ಸ್ಪಂದಿಸುವಂತಹ ವ್ಯಕ್ತಿತ್ವ. ಅವರ ಮೈಮೇಲಿದ್ದ ಕೊಳಕು ಬಟ್ಟೆಯನ್ನು ತೆಗೆದು, ಹತ್ತಿರ ಎಲ್ಲಾದರೂ ನೀರಿದ್ದರೆ ಸ್ನಾನ ಮಾಡಿಸಿ ತಾವು ತಂದಿದ್ದ ಬಟ್ಟೆ ಹಾಕಿ, ಅವರಿಗೆ ಆಹಾರ ನೀಡುತ್ತಾರೆ. ನಿರ್ಗತಿಕರು ಅಂಗಹೀನರಾಗಿದ್ದರೆ ತಾವೇ ತಿನಿಸುತ್ತಾರೆ. ಸಂದರ್ಭ ಬಂದಾಗ ನಿರ್ಗತಿಕರ ಕೂದಲು ಕಟಿಂಗ್, ಶೇವಿಂಗ್ ಕೂಡ ಮಾಡುತ್ತಾರೆ. ಇವರು ಅಂಗವಿಕಲೆಯನ್ನು ಮದುವೆಯಾಗಿ ಸಮಾಜಕ್ಕೆ ಮಾದರಿಯಾಗಿದ್ದಾರೆ. ಸಮಾಜದ ತುಳಿತಕ್ಕೆ ಒಳಗಾಗಿರುವ ಪ್ರತಿಭಾವಂತರು, ಸಾಧಕರನ್ನು ಗುರುತಿಸಿ ತಮ್ಮ ಸಂಸ್ಥೆಯಿಂದ ಈ ದಂಪತಿ ಗೌರವಿಸುತ್ತಾರೆ. ಅನ್ಯಾಯಕ್ಕೆ ಒಳಗಾದವರ ಜತೆಯಾಗಿ ಜಯ ಸಿಗುವವರೆಗೂ ನಿಂತು ಹೋರಾಡುತ್ತಾರೆ.

ಇಂತಹ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಗಳಿಗೆ ಸಹಾಯ ಮಾಡುವ ಕೆಲಸ ಸಂಘ ಸಂಸ್ಥೆಗಳಿಂದ, ಜಿಲ್ಲಾಡಳಿತಗಳಿಂದ, ಸರ್ಕಾರದಿಂದ ಹಾಗೂ ಸಾರ್ವಜನಿಕರಿಂದ ಆಗಬೇಕಿದೆ. ಕರಿಯಪ್ಪನವರ ಸಂಪರ್ಕ ಸಂಖ್ಯೆ: 7411817986

| ನಾಮದೇವ ಕಾಗದಗಾರ, ರಾಣೆಬೆನ್ನೂರು

ವಿಡಿಯೋ ನ್ಯೂಸ್

VIDEO: ಮಾವುತನ ಊಟದ ಎಲೆಯಿಂದ ತುತ್ತು ಅನ್ನ ತಿಂದು, ನೆಟ್ಟಿಗರ...

ತಿರುವನಂತಪುರ: ಆನೆಗಳ ಆಟ, ದಾಳಿ, ಮರ ಹತ್ತುವುದು ಹೀಗೆ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ. ಆದರೆ ಈಗ ವೈರಲ್​ ಆಗಿರುವ ಆನೆಯ ವಿಡಿಯೋ ಸಾಮಾಜಿಕ ಬಳಕೆದಾರರ ಮನಸ್ಸು ಗೆದ್ದಿದೆ. ಹಸಿದ...

VIDEO| ರಾಷ್ಟ್ರಪತಿ ರಾಮನಾಥ್​ ಕೋವಿಂದ್​ರಿಂದ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ...

ನವದೆಹಲಿ: ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ...

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...