ನಗರಸಭೆ ಚುನಾವಣೆ: ಅತೀ ಹೆಚ್ಚು ಮತ ಪಡೆದು ಗೆದ್ದಾಕೆ ಬದುಕೇ ಇಲ್ಲ! ಮತ ಎಣಿಕೆ ಮುನ್ನಾ ದಿನವೇ ಕರೊನಾಗೆ ಬಲಿ

ರಾಮನಗರ: ಏ.27ರಂದು ನಡೆದಿದ್ದ ರಾಮನಗರ ನಗರಸಭೆ ಚುನಾವಣೆಯ ಫಲಿತಾಂಶ ಇಂದು ಪ್ರಕಟಗೊಂಡಿದ್ದು, 4ನೇ ವಾರ್ಡ್​ನಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಲೀಲಾ ಗೋವಿಂದರಾಜು ಭಾರಿ ಅಂತರದ ಮತ ಪಡೆದು ಜಯಶೀಲರಾಗಿದ್ದಾರೆ. ಆದರೆ, ಗೆಲುವಿನ ಸಂಭ್ರಮ ಆಚರಿಸಲು ಅವರೇ ಬದುಕಿಲ್ಲ! ಮತ ಎಣಿಕೆ ಮುನ್ನಾ ದಿನವಾದ ಗುರುವಾರವೇ ಲೀಲಾ ಗೋವಿಂದರಾಜ್(42) ಕೋವಿಡ್​ಗೆ ಬಲಿಯಾಗಿದ್ದಾರೆ. ಲೀಲಾ ಅವರಲ್ಲಿ ಇತ್ತೀಚಿಗೆ ಕರೊನಾ ಸೋಂಕು ತಗುಲಿತ್ತು. ಅವರನ್ನ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ನಿನ್ನೆ ಕೊನೆಯುಸಿರೆಳೆದಿದ್ದರು. ನಗರಸಭೆ ಚುನಾವಣೆಯ ಫಲಿತಾಂಶ ಬರುವ … Continue reading ನಗರಸಭೆ ಚುನಾವಣೆ: ಅತೀ ಹೆಚ್ಚು ಮತ ಪಡೆದು ಗೆದ್ದಾಕೆ ಬದುಕೇ ಇಲ್ಲ! ಮತ ಎಣಿಕೆ ಮುನ್ನಾ ದಿನವೇ ಕರೊನಾಗೆ ಬಲಿ