ಚಾಮರಾಜನಗರ ದೀನಬಂಧು ಶಾಲೆಯ 29 ಮಕ್ಕಳಿಗೆ ಕರೊನಾ ಪಾಸಿಟಿವ್​

ಚಾಮರಾಜನಗರ: ನಗರದ ದೀನಬಂಧು ಆಶ್ರಮ ಶಾಲೆಯ 29 ಮಕ್ಕಳು ಹಾಗೂ ನಾಲ್ವರು ಸಿಬ್ಬಂದಿ ಸೇರಿ 33 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸದ್ಯ ಶಾಲೆಯ ವಸತಿ ಸಮುಚ್ಛಯವನ್ನು ಕಂಟೋನ್ಮೆಂಟ್ ವಲಯ ಮಾಡಲಾಗಿದ್ದು, ಸೋಂಕಿತರೆಲ್ಲರನ್ನೂ ಹೋಂ ಐಸೋಲೇಷನ್​ನಲ್ಲಿ ಇಡಲಾಗಿದೆ. ಭಾನುವಾರ(ಮೇ 23) ಆರು ವಿದ್ಯಾರ್ಥಿಗಳು ಸೇರಿ 10 ಮಂದಿಗೆ ಕರೊನಾ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಶ್ರಮ ಶಾಲೆಯ ಎಲ್ಲರನ್ನೂ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಬಳಿಕ ಸೋಮವಾರ 23 ಮಂದಿಗೆ ಕರೊನಾ ದೃಢಪಟ್ಟಿದ್ದು ಮಕ್ಕಳ ಸಂಖ್ಯೆಯೇ ಅಧಿಕವಿದೆ … Continue reading ಚಾಮರಾಜನಗರ ದೀನಬಂಧು ಶಾಲೆಯ 29 ಮಕ್ಕಳಿಗೆ ಕರೊನಾ ಪಾಸಿಟಿವ್​