More

    3ನೇ ಅಲೆ ತಡೆಗೆ ಜನರು ಸ್ವಲ್ಪ ತ್ಯಾಗ ಮಾಡಲೇಬೇಕು: ಸಚಿವ ಡಾ.ಕೆ.ಸುಧಾಕರ್​

    ಬೆಂಗಳೂರು: ಕರೊನಾ ಸೋಂಕಿನ 2ನೇ ಅಲೆ ನಿಯಂತ್ರಣದ ಜತೆಗೆ 3ನೇ ಅಲೆ ತಡೆಯುವುದಕ್ಕೆ ಜನರು ಸ್ವಲ್ಪಮಟ್ಟಿಗೆ ತ್ಯಾಗ ಮಾಡಬೇಕಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

    ಸದಾಶಿವನಗರದ ತಮ್ಮ ನಿವಾಸದ ಬಳಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸುಧಾಕರ್​, ಸೋಂಕಿನ ಸರಪಳಿ ತುಂಡರಿಸುವುದಕ್ಕಾಗಿ ತಜ್ಞರ ಸಲಹೆಯಂತೆ 14 ದಿನ ಕಠಿಣ ಕ್ರಮ ಜಾರಿಗೊಳಿಸಿದ್ದು, ಜನರು ಸಹಕರಿಸಬೇಕು. ಅಲ್ಲದೆ, 3ನೇ ಅಲೆ ತಡೆಗಾಗಿ ದೊಡ್ಡಮಟ್ಟದ ಸಿದ್ಧತೆ ಮಾಡಿಕೊಳ್ಳಬೇಕಾಗಿದೆ. ಅಗತ್ಯ ಸೇವೆಗೆ ಕಾಲಮಿತಿಯ ಅವಕಾಶ ಕಲ್ಪಿಸಿದ್ದು, ಜನರು ಅಗತ್ಯ ವಸ್ತುಗಳ ಬಗ್ಗೆ ಆತಂಕಕ್ಕೆ ಸಿಲುಕಬೇಕಿಲ್ಲ, ಹೋಟೆಲ್​ಗಳಲ್ಲಿ ಪಾರ್ಸೆಲ್ ಸೇವೆ ಇರಲಿದೆ. ಆದರೆ ಜನರ ಅನಗತ್ಯ ಓಡಾಟಕ್ಕೆ ಸಂಪೂರ್ಣ ನಿರ್ಬಂಧ ವಿಧಿಸಿದ್ದು, ಸಾರ್ವಜನಿಕ ಸಾರಿಗೆ ಸ್ಥಗಿತವಾಗಿರಲಿದೆ, ಜನರಿಗೆ ಕಷ್ಟವಾದರೂ ಕರೊನಾ 2ನೇ ಅಲೆಯ ಸಂಪರ್ಕ ಕೊಂಡಿ ಕಳಚಲು ಇದು ಅನಿವಾರ್ಯ ಎಂದು ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು.

    ವದಂತಿಗೆ ಕಿವಿಗೊಡಬೇಡಿ: ಲಸಿಕೆ ಕೊಡುವುದರ ಬಗ್ಗೆ ಅನೇಕ ವದಂತಿಗಳಿವೆ. ಅವಕ್ಕೆಲ್ಲ ಜನರು ಕಿವಿಗೊಡಬಾರದು. ಮಾರ್ಗಸೂಚಿ ಬಿಡುಗಡೆ ಬಳಿಕ ಚಟುವಟಿಕೆ ನಿರ್ಬಂಧವಿರುತ್ತದೆ. ಹಾಗಾಗಿ ಲಸಿಕೆ ಸಿಗಲ್ಲ ಅಂತ ಕೆಲವರು ಸುಳ್ಳು ಹೇಳಿದ್ದಾರೆ. ಅಗತ್ಯ ಸೇವೆಗಳು ಅಬಾಧಿತವಾಗಿರಲಿದೆ. ಲಸಿಕೆ ಪಡೆಯುವುದೂ ಅಗತ್ಯ ಸೇವೆಗೆ ಒಳಪಡಲಿದೆ. ಲಸಿಕೆ ಕೊಡುವುದನ್ನ ಮುಂದುವರಿಸುತ್ತೇವೆ. ಹೆಸರು ನೋಂದಣಿ ಮಾಡಿಕೊಂಡು ಕೊಡುತ್ತೇವೆ. ಲಸಿಕೆ ಒಂದೇ ನಮಗೆ ಕರೊನಾದಿಂದ ತಪ್ಪಿಸಿಕೊಳ್ಳಲು ಇರುವ ಉಪಾಯವಾಗಿದ್ದು, ಪ್ರತಿಯೊಬ್ಬರು ಎರಡು ಡೋಸ್ ಲಸಿಕೆ ಪಡೆಯಿರಿ ಎಂದು ಸಚಿವ ಸುಧಾಕರ್​ ಮನವಿ ಮಾಡಿದರು.

    ಕೊರತೆಯಿಲ್ಲ: 18 ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ಪಡೆಯಬೇಕು. ಇಲ್ಲಿವರೆಗೂ ಲಸಿಕೆ ಕೊರತೆಯಾಗಿಲ್ಲ. ಎಲ್ಲ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ. ಕೇಂದ್ರ ಸರ್ಕಾರ ಸಮಾನವಾಗಿ, ಜನಸಂಖ್ಯೆ ಆಧಾರದ ಮೇಲೆ ಲಸಿಕೆ ಪೂರೈಸುತ್ತಿದೆ. ಲಸಿಕೆ ಪಡೆಯುವುದರಿಂದ ಭವಿಷ್ಯದಲ್ಲಿ ಕರೊನಾ ಸೋಂಕಿನಿಂದ ತಪ್ಪಿಸಿಕೊಳ್ಳಬಹುದು. ಲಸಿಕೆ ಬಗ್ಗೆ ಯಾವುದೇ ಅನುಮಾನ ಇಟ್ಟುಕೊಳ್ಳದೆ ಎಲ್ಲರೂ ಲಸಿಕೆ ಪಡೆಯಬೇಕು ಎಂದು ಸುಧಾಕರ್​ ಹೇಳಿದರು.

    ತಡರಾತ್ರಿ ಕೋಲಾರ ಭೇಟಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಸುಧಾಕರ್, ಕೋಲಾರದಲ್ಲಿ 40 ವೆಂಟಿಲೇಟರ್ ಬೆಡ್ ನೀಡಲಾಗಿತ್ತು. ಆಕ್ಸಿಜನ್ ಪೈಪ್‌ನಲ್ಲಿ ಬರುವಾಗ ಸಮಸ್ಯೆ ಇದ್ದು ಅದನ್ನ ಸರಿಪಡಿಸಬೇಕು. ಅದರಲ್ಲಿರೋ ಸಮಸ್ಯೆಯನ್ನ ಸರ್ಕಾರದ ಗಮನಕ್ಕೆ ತರಬೇಕಿತ್ತು. ಇದರಲ್ಲಿ ನಿರ್ಲಕ್ಷ್ಯ ಕಂಡುಬಂದಿದೆ. ಹೀಗಾಗಿ ಇಬ್ಬರು ಅಧಿಕಾರಿಗಳನ್ನು ರಾತ್ರಿಯೇ ಸಸ್ಪೆಂಡ್ ಮಾಡಿದ್ದೇನೆ. ಕರೊನಾ ವಾರ್ ರೂಮಿನಲ್ಲಿ ಅಟೆಂಡರ್​ ಅನ್ನು ಬಿಟ್ಟಿದ್ದರು. ಎಲ್ಲರ ವಿರುದ್ಧ ಕ್ರಮ ಕೈಗೊಂಡಿದ್ದೇನೆ. ಕೆಲವರ ಅಸಡ್ಡೆಯಿಂದ ಎಲ್ಲರ ಮೇಲೆ ಅಪವಾದ ಬರುತ್ತಿದೆ. ವೈದ್ಯರ ಪರಿಶ್ರಮ ಎಷ್ಟೋ ಜನರ ಪ್ರಾಣ ಉಳಿಸುತ್ತಿದೆ. ಈ ಹಿನ್ನೆಲೆಯಲ್ಲಿ ಲೋಪಗಳಾಗದಂತೆ ಎಚ್ಚರಿಕೆ ವಹಿಸುವುದು ಅಗತ್ಯ ಎಂದರು.

    ಕಾರಿನಲ್ಲೇ ಟಿವಿ ಸೀರಿಯಲ್​ ನಟಿಯ ಬೆತ್ತಲೆ ದೃಶ್ಯ ಸೆರೆ! ಮುಂದೆ ಆಗಿದ್ದೆಲ್ಲವೂ ಅವಾಂತರ

    ಮಾಲಾಶ್ರೀ ಪತಿ, ನಿರ್ಮಾಪಕ ರಾಮು ಮೃತಪಟ್ಟದ್ದು ಕರೊನಾದಿಂದಲ್ಲ! ಸಾವಿಗೆ ಬೇರೆ ಕಾರಣ ಇದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts