ಚಿರು ಪುತ್ರನಿಗೆ ಹುಟ್ಟುಹಬ್ಬದ ಸಂಭ್ರಮ: ಮಗನೇ ನೀನೇ ನನ್ನ ಪ್ರಪಂಚ, ಐ ಲವ್​ ಯೂ ಕಂದ… ಎಂದು ಬರೆದ ಮೇಘನಾ

ಬೆಂಗಳೂರು: ಸ್ಯಾಂಡಲ್​ವುಡ್​ ನಟ ದಿ. ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್​ ಅವರ ಪುತ್ರ ರಾಯನ್​ ರಾಜ್​ ಸರ್ಜಾನಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 2020ರ ಅಕ್ಟೋಬರ್​ 22ರಂದು ಬೆಳಗ್ಗೆ 11 ಗಂಟೆ 7 ನಿಮಿಷಕ್ಕೆ ಜನಿಸಿದ್ದ ರಾಯನ್​ ರಾಜ್​ ಸರ್ಜಾಗೆ ಒಂದು ವರ್ಷ ತುಂಬಿದೆ. 2017ರ ಅಕ್ಟೋಬರ್ 22ರಂದು ಚಿರು ಮತ್ತು ಮೇಘನಾರ ಮದುವೆ ನಿಶ್ಚಿತಾರ್ಥ ನಡೆದಿತ್ತು. ಅಪ್ಪ-ಅಮ್ಮನ ನಿಶ್ಚಿತಾರ್ಥದ ದಿನವೇ ಜೂನಿಯರ್ ಚಿರು ಆಗಮಿಸಿದ್ದು, ಸರ್ಜಾ ಮತ್ತು ಸುದರ್​ ರಾಜ್​ ಕುಟುಂಬದಲ್ಲಿ ಖುಷಿಯ ಹೂರಣ ಉಣಬಡಿಸುತ್ತಿದ್ದಾರೆ. … Continue reading ಚಿರು ಪುತ್ರನಿಗೆ ಹುಟ್ಟುಹಬ್ಬದ ಸಂಭ್ರಮ: ಮಗನೇ ನೀನೇ ನನ್ನ ಪ್ರಪಂಚ, ಐ ಲವ್​ ಯೂ ಕಂದ… ಎಂದು ಬರೆದ ಮೇಘನಾ