ಚಿಂತಾಮಣಿಯಲ್ಲಿ ಎರಡು ಮಕ್ಕಳ ತಂದೆ ಜತೆ 16 ವರ್ಷದ ಬಾಲೆಗೆ ಮದ್ವೆ: 3 ತಿಂಗಳ ಬಳಿಕ ಸಿಕ್ಕಿಬಿದ್ರು

ಚಿಂತಾಮಣಿ: ಎರಡು ಮಕ್ಕಳ ತಂದೆಯ ಜತೆ 16 ವರ್ಷದ ಬಾಲಕಿಗೆ ಮದುವೆ ಮಾಡಿರುವ ಪ್ರಕರಣ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಬಾಲಕಿಯ ಪಾಲಕರು ಹಾಗೂ ಮದ್ವೆ ಗಂಡನ್ನು ಪೊಲೀಸರು ಬಂಧಿಸಿದ್ದಾರೆ. ಚಿಂತಾಮಣಿ ತಾಲೂಕಿನ ಕೆಂಚಾರ್ಲಹಳ್ಳಿ ವ್ಯಾಪ್ತಿಯ ಬುರುಡುಗುಂಟೆ ಗ್ರಾಮದ ವ್ಯಕ್ತಿಯೊಬ್ಬನ ಜತೆ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಬುಡ್ಗಜಂಗಮ ಗ್ರಾಮದ ಬಾಲಕಿಗೆ ಆಂಜನೇಯಸ್ವಾಮಿ ದೇವಾಲಯದಲ್ಲಿ 3 ತಿಂಗಳ ಹಿಂದೆ ಮದುವೆ ಮಾಡಲಾಗಿತ್ತು. ಬಾಲಕಿಯನ್ನು ಮದುವೆ ಆದ ವ್ಯಕ್ತಿಗೆ ಈಗಾಗಲೇ ಬೇರೊಂದು ಮದುವೆ ಆಗಿದ್ದು, ಇಬ್ಬರು ಮಕ್ಕಳಿದ್ದು, … Continue reading ಚಿಂತಾಮಣಿಯಲ್ಲಿ ಎರಡು ಮಕ್ಕಳ ತಂದೆ ಜತೆ 16 ವರ್ಷದ ಬಾಲೆಗೆ ಮದ್ವೆ: 3 ತಿಂಗಳ ಬಳಿಕ ಸಿಕ್ಕಿಬಿದ್ರು