More

    ಟ್ರಾೃಕ್ಟರ್ ಹಿಂಬದಿ ಚಕ್ರ ಹರಿದು ಮಗು ಸಾವು

    ಬೆಂಗಳೂರು: ಟ್ರಾೃಕ್ಟರ್ ರಿವರ್ಸ್ ತೆಗೆಯುವಾಗ ಹಿಂಬದಿ ಚಕ್ರ ಹರಿದು ಆಟವಾಡುತ್ತಿದ್ದ ನಾಲ್ಕು ವರ್ಷದ ಮಗು ಮೃತಪಟ್ಟಿರುವ ಘಟನೆ ಕೆ.ಆರ್.ಪುರ ಸಮೀಪದ ಆನಂದಪುರದಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.
    ಆನಂದಪುರ ನಿವಾಸಿ ಡಿಯಾನ್ ಪ್ರಜ್ವಲ್(೪) ಮೃತ ಮಗು. ಕೃತ್ಯ ಎಸಗಿದ ಟ್ರಾೃಕ್ಟರ್ ಚಾಲಕ ವಿಶ್ವನಾಥ್‌ನನ್ನು ಬಂಧಿಸಲಾಗಿದೆ. ನ.೪ರಂದು ಬೆಳಗ್ಗೆ ೯ ಗಂಟೆ ಸುಮಾರಿಗೆ ಆನಂದಪುರ ೫ನೇ ಕ್ರಾಸ್‌ನ ರಸ್ತೆಯಲ್ಲಿ ಮನೆ ಮುಂದೆ ಪ್ರಜ್ವಲ್ ಆಟವಾಡುತ್ತಿದ್ದ. ಅದೇ ವೇಳೆ ವಿಶ್ವನಾಥ್ ಟ್ರಾೃಕ್ಟರ್ ಅನ್ನು ರಿವರ್ಸ್ ತೆಗೆಯುತ್ತಿದ್ದು, ಅಜಾಗರೂಕತೆಯಿಂದ ಪ್ರಜ್ವಲ್‌ಗೆ ಟ್ರಾೃಕ್ಟರ್‌ನ ಹಿಂದಿನಿಂದ ಡಿಕ್ಕಿ ಹೊಡೆದಿದ್ದು, ಚಕ್ರಗಳು ಆತನ ಮೇಲೆ ಹರಿದಿದೆ. ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ. ಕೆ.ಆರ್.ಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ರಾಜ್ಯೋತ್ಸವ ರಸಪ್ರಶ್ನೆ - 28

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts