ಪೊಲೀಸರಿಂದಲೇ ಆಟೋ ತಳ್ಳಿಸಿದ ಭೂಪ! ಆಟೋ ಸ್ಟಾರ್ಟ್​ ಮಾಡಲ್ಲ… ಎಂದು ರೋಡಲ್ಲೇ ಚಾಲಕ ಕಿರಿಕ್​

ಚನ್ನಪಟ್ಟಣ: ಮದ್ಯ ಸೇವಿಸಿ ಆಟೋ ಚಲಾಯಿಸುತ್ತಿದ್ದ ಚಾಲಕನೊಬ್ಬ ಪೊಲೀಸರೊಂದಿಗೆ ಗಲಾಟೆ ಮಾಡಿದ್ದು ಮಾತ್ರವಲ್ಲ, ಪೊಲೀಸರಿಂದಲೇ ಆಟೋವನ್ನ ತಳ್ಳಿಸಿದ್ದಾನೆ! ಇಂತಹ ಘಟನೆ ರಾಮನಗರ ಜಿಲ್ಲೆ ಚನ್ನಪಟ್ಟಣ ನಗರದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ. ಕೆಂಗೇರಿ ಮೂಲದ ಕುಮಾರ್​ ಎಂಬಾತ ಸ್ನೇಹಿತರೊಂದಿಗೆ ಕಬ್ಬಾಳು ದೇವಸ್ಥಾನಕ್ಕೆ ಬಂದಿದ್ದ. ವಾಪಸ್​ ಹೋಗುವಾಗ ಆಟೋ ಅಡ್ಡಗಟ್ಟಿದ ಸಂಚಾರ ಪೊಲೀಸರೊಂದಿಗೆ ಕುಮಾರ್​ ಗಲಾಟೆ ಮಾಡಿದ್ದಾನೆ. ಆಟೋ ವಶಕ್ಕೆ ತೆಗೆದುಕೊಳ್ಳಲು ಮುಂದಾದ ಪೊಲೀಸರೊಂದಿಗೆ ಕೆಲಹೊತ್ತು ಸಂಘರ್ಷಕ್ಕಿಳಿದಿದ್ದಾನೆ. ಆಟೋ ಸ್ಟಾರ್ಟ್​ ಮಾಡಲ್ಲ ಎಂದು ಪೊಲೀಸರ ಕೈಯಲ್ಲೇ ಠಾಣೆವರೆಗೂ ಆಟೋ ತಳ್ಳಿಸಿದ್ದಾನೆ. … Continue reading ಪೊಲೀಸರಿಂದಲೇ ಆಟೋ ತಳ್ಳಿಸಿದ ಭೂಪ! ಆಟೋ ಸ್ಟಾರ್ಟ್​ ಮಾಡಲ್ಲ… ಎಂದು ರೋಡಲ್ಲೇ ಚಾಲಕ ಕಿರಿಕ್​