ಕೆರೂರ: ಪಟ್ಟಣದ ಶಕ್ತಿದೇವತೆ ಆರಾಧ್ಯದೈವ ಬನಶಂಕರಿ ದೇವಿಯ 87ನೇ ಜಾತ್ರಾ ಮಹೋತ್ಸವದ ಪ್ರಯುಕ್ತ ಶುಕ್ರವಾರ ಕಲಶದ ಮೆರವಣಿಗೆ ಸಂಭ್ರಮದಿಂದ ನಡೆಯಿತು.
ಬೆಳಗ್ಗೆ ಗೌಡರ ಮನೆತನಕ್ಕೆ ಸೇರಿದ ಗೋಪಾಲ ಶೇ. ಗೌಡರ ಮನೆಯಲ್ಲಿನ ಕಲಶವನ್ನು ಅವರ ಪರಿವಾರದವರು ಪೂಜೆ ಸಲ್ಲಿಸಿದ ಬಳಿಕ ಮಹಿಳೆಯರ ಕಲಶದಾರತಿ ಸಮೇತ ಸಕಲವಾದ್ಯಮೇಳಗಳೊಂದಿಗೆ ಕಲಶದ ಮೆರವಣಿಗೆ ನಡೆಯಿತು. ಪಾದಗಟ್ಟಿ, ಬಸರಿಗಿಡದ ಪೇಟೆ, ರಾಷ್ಟ್ರೀಯ ಹೆದ್ದಾರಿ ಮೂಲಕ ಹಾಯ್ದು ನೆಹರು ನಗರ, ಕಂಠಿಯವರ ಓಣಿ, ಭಾವಿಕಟ್ಟಿಯವರ ಓಣಿ ಸೇರಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ಮಾರ್ಗದುದ್ದಕ್ಕೊ ಮಹಿಳೆಯರು ಬಣ್ಣಬಣ್ಣದ ರಂಗೋಲಿ ಬಿಡಿಸಿ ಮೆರವಣಿಗೆಗೆ ಮೆರಗು ತಂದರು. ಯುವಕರು ಸೇರಿ ಹಿರಿಯರು ‘ತಾಯಿ ಬನಶಂಕರಿ ದೇವಿ ನಿನ್ನ ಪಾದಕ ಶಂಭೂಕೋ’ ಎಂದು ಪರಾಕು ಹಾಕುತ್ತಾ ಭಕ್ತಿ ಮೆರೆದರು.
ಮುದ್ದುಸಂಗಸ್ವಾಮಿ ದೇವಾಂಗಮಠ, ಯಂಕಣ್ಣ ಗುಡಿಸಾಗರ, ಸಂಕಣ್ಣ ಹೊಸಮನಿ, ಪಾಂಡಪ್ಪ ಅಂಕದ, ರಾಚೋಟೇಶ್ವರ ಕುದರಿ, ವಿಠ್ಠಲಗೌಡ ಗೌಡರ, ಶ್ರೀನಿವಾಸ ಹೆಬ್ಭಳ್ಳಿ, ಮಂಜುನಾಥ ಪತ್ತಾರ, ಎಲ್. ಎಚ್. ಕ್ವಾನ್ನೂರ, ನವೀನ ಕ್ವಾನ್ನೂರ, ಆನಂದ ಸೊಳಿಕೇರಿ, ಮಾರುತಿ ಪರದೇಶಿ ಇತರರಿದ್ದರು.