ಕದ್ದ ಆಭರಣದ ವಾಟ್ಸ್‌ಆ್ಯಪ್ ಡಿಪಿ ಇಟ್ಟು ಸಿಕ್ಕಿ ಬಿದ್ದ ಕಳ್ಳಿ

ಬೆಂಗಳೂರು: ತಾನು ಕೆಲಸ ಮಾಡುವ ಮಾಲೀಕರ ಮನೆಯಲ್ಲೇ ಚಿನ್ನಾಭರಣ ಕಳವು ಮಾಡಿದ್ದ ಮಹಿಳೆ ವಾಟ್ಸ್‌ಆ್ಯಪ್ ಡಿಪಿಯಿಂದ ಸಿಕ್ಕಿ ಬಿದ್ದಿದ್ದಾಳೆ.
ಮಾರತಹಳ್ಳಿಯ ಮುನೇಕೊಳಲು ನಿವಾಸಿ ರೇಣುಕಾ(೩೮) ಬಂಧಿತೆ. ಈಕೆಯಿಂದ ಸುಮಾರು ೫ ಲಕ್ಷ ರೂ. ಮೌಲ್ಯದ ೮೦ ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಮಾರತಹಳ್ಳಿಯ ಅಪಾರ್ಟ್‌ಮೆಂಟ್ ನಿವಾಸಿ ಬ್ರಿಜೇಶ್ ದಾಮಿ ಎಂಬುವವರು ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಗರಿಬೊಮ್ಮನಹಳ್ಳಿ ಮೂಲದ ಆರೋಪಿ ರೇಣುಕಾ ಕಳೆದ ಎರಡು ವರ್ಷಗಳಿಂದ ಮಾರತಹಳ್ಳಿಯ ಬ್ರಿಜೇಶ್ ದಾಮಿ ಎಂಬುವವರ ಮನೆಯಲ್ಲಿ ಕೆಲಸ ಮಾಡುತ್ತಿದ್ದಳು. ಬ್ರಿಜೇಶ್ ದಾಮಿ ಅವರ ಅವರ ಪತ್ನಿ ಕಳೆದ ನವೆಂಬರ್‌ನಲ್ಲಿ ಚಿನ್ನಾಭರಣಗಳನ್ನು ಬ್ಯಾಗ್‌ವೊಂದಕ್ಕೆ ಹಾಕಿ ಕಬೋರ್ಡ್‌ನಲ್ಲಿ ಇರಿಸಿದ್ದರು. ಮಾ. ೨೯ರಂದು ಕಬೋರ್ಡ್ ತೆರೆದು ಬ್ಯಾಗ್ ಪರಿಶೀಲನೆ ಮಾಡಿದಾಗ ನಕ್ಲೇಸ್ ಸೇರಿ ೬೫ ಗ್ರಾಂ ತೂಕದ ಚಿನ್ನಾಭರಣ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಈ ವೇಳೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ರೇಣುಕಾ ಸೇರಿ ನಾಲ್ವರ ಕೆಲಸಗಾರರ ಮೇಲೆ ಅನುಮಾನಗೊಂಡು ವಿಚಾರಿಸಿದಾಗ ನಾವು ಕಳವು ಮಾಡಿಲ್ಲ ಎಂದು ಹೇಳಿದ್ದಾರೆ. ಈ ಬಳಿಕ ದಾಮಿ ಅವರು ಎಚ್‌ಎಎಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ವೇಳೆ ನಾಲ್ವರು ಕೆಲಸಗಾರರನ್ನು ಠಾಣೆಗೆ ಕರೆಸಿ ಪೊಲೀಸರು ವಿಚಾರಣೆ ಮಾಡಿದಾಗಲೂ ನಾವು ಕಳ್ಳತನ ಮಾಡಿಲ್ಲ ಎಂದು ಹೇಳಿದ್ದಾರೆ.

ನಕ್ಲೇಸ್ ಧರಿಸಿರುವ ಫೋಟೋ ಡಿಪಿಗೆ ಇಟ್ಟಿದ್ದಳು:
ಮನೆಯಲ್ಲಿ ಚಿನ್ನಾಭರಣ ಕಳ್ಳತನವಾದ ಬಳಿಕ ದಾಮಿ ನಾಲ್ವರು ಕೆಲಸಗಾರರನ್ನು ಕೆಲಸದಿಂದ ತೆಗೆದು ಹಾಕಿದ್ದರು. ಇದಾದ ಕೆಲವು ತಿಂಗಳ ಬಳಿಕ ರೇಣುಕಾ ನಕ್ಲೇಸ್ ಧರಿಸಿರುವ ಫೋಟೋವನ್ನು ಮೊಬೈಲ್‌ನ ವಾಟ್ಸಾಪ್ ಡಿಪಿ (ಡಿಸ್‌ಪ್ಲೇ ಫೋಟೋ)ಗೆ ಹಾಕಿಕೊಂಡಿದ್ದಳು. ಇದನ್ನು ಗಮನಿಸಿದ ದಾಮಿಗೆ ರೇಣುಕಾ ಧರಿಸಿದ್ದ ನಕ್ಲೇಸ್ ತಮ್ಮ ಪತ್ನಿಯದು ಎಂಬುದು ಗೊತ್ತಾಗಿದೆ. ಬಳಿಕ ಈ ಸಂಬಂಧ ಎಚ್‌ಎಎಲ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರು ರೇಣುಕಾಳನ್ನು ವಶಕ್ಕೆ ಪಡೆದು ಡಿಪಿ ಫೋಟೋದಲ್ಲಿ ಧರಿಸಿದ್ದ ನಕ್ಲೇಸ್ ಬಗ್ಗೆ ವಿಚಾರಣೆ ಮಾಡಿದಾಗ ದಾಮಿ ಅವರ ಮನೆಯಲ್ಲಿ ಕಳ್ಳತನ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಅಂತೆಯೆ ಅಭಿಷೇಕ್ ಸಿಂಗ್ ಎಂಬುವರರ ಮನೆಯಲ್ಲಿಯೂ ತಾನೇ ಚಿನ್ನಾಭರಣ ಕಳವು ಮಾಡಿದ್ದಾಗಿ ಬಾಯ್ಬಿಟ್ಟಿದ್ದಾಳೆ. ಈಕೆ ನೀಡಿದ ಮಾಹಿತಿ ಮೇರೆಗೆ ಈ ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ ೮೦ ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share This Article

ಬಿಕ್ಕಳಿಕೆ ಏಕೆ ಬರುತ್ತದೆ? ಕಿರಿಕಿರಿ ಉಂಟುಮಾಡುವ ಅದನ್ನು ನಿಯಂತ್ರಿಸುವುದು ಹೇಗೆ?

 ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…

ಈ ದಿನಾಂಕದಂದು ಜನಿಸಿದವರು ದಾನದಲ್ಲಿ ಕರ್ಣನನ್ನು ಮೀರಿಸುತ್ತಾರೆ! ನೀವೂ ಹುಟ್ಟಿದ್ದು ಇದೇ ದಿನಾನಾ?

ಜ್ಯೋತಿಷ್ಯಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಇದರ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು ಅವನ ವ್ಯಕ್ತಿತ್ವದ ಬಗ್ಗೆ ಮತ್ತು…

ಗೋಲ್ಡನ್ ಅವರ್ ರಹಸ್ಯ: ಮುಂಜಾನೆ ಬೇಗ ಏಳುವುದರಿಂದ ಇದೆ 6 ಪ್ರಯೋಜನಗಳು

 ಬೆಂಗಳೂರು: ಮನೆಯಲ್ಲಿ ಕೆಲವರು ಸೂರ್ಯೋದಯಕ್ಕೂ ಮೊದಲೇ ಏಳುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಮುಂಜಾನೆ ಬೇಗ ಏಳುವುದನ್ನು ರೂಢಿ…