ಮೊಬೈಲ್​ನಲ್ಲಿ ವಿಡಿಯೋ ಕಾಲ್​ ಮಾಡಿ, ಎಡಗೈನ ಮೂರು ಬೆರಳುಗಳನ್ನು ಕಳೆದುಕೊಂಡ ಯುವಕ

ಬೆಂಗಳೂರು: ಯುವಕ ಕೈಯಲ್ಲಿ ಹಿಡಿದಿದ್ದ ಮೊಬೈಲ್​ ಈಗ ಆತನ ಮೂರು ಬೆರಳುಗಳನ್ನೇ ಕಿತ್ತುಕೊಂಡ ದುರ್ಘಟನೆ ನಡೆದಿದೆ.

ಯುವಕ ಬಿಹಾರ ಮೂಲದವನಾಗಿದ್ದು ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದ. ಮೊಬೈಲ್​ ಚಾರ್ಜ್​ ಹಾಕಿಕೊಂಡು ತನ್ನ ಸಹೋದ್ಯೋಗಿ ಜತೆ ವಿಡಿಯೋ ಕಾಲ್​ನಲ್ಲಿ ತೊಡಗಿದ್ದ. ಈ ವೇಳೆ ಮೊಬೈಲ್​ ಸ್ಫೋಟಗೊಂಡು ಆ ಯುವಕನ ಎಡಗೈನ ಮೂರು ಬೆರಳುಗಳು ಛಿದ್ರವಾಗಿದೆ.

ಮೊಬೈಲ್​ ಸ್ಫೋಟಗೊಳ್ಳುತ್ತಿದ್ದಂತೆ ಆತನ ಸ್ನೇಹಿತರು ಶಾಕ್​ಗೆ ಒಳಗಾಗಿದ್ದಾರೆ. ಹಾಗೇ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಕೈಗೆ ಸರ್ಜರಿ ಮಾಡಿದರೂ ಆ ಮೂರು ಬೆರಳುಗಳು ಸರಿಯಾಗಿಲ್ಲ ಎನ್ನಲಾಗಿದೆ.
ಎಚ್​ಎಎಲ್​ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *