ಯಲ್ಲಾಪುರ: ತಾಲೂಕಿನ ಕುಂದರಗಿ ಸಮೀಪದ ಸೊಡ್ಲೆಮಟ್ಟಿ ಕೆರೆಯಲ್ಲಿ ವ್ಯಕ್ತಿಯೊಬ್ಬನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಭರತನಹಳ್ಳಿಯ ವಿನಾಯಕ ರಾಮಾ ನಾಯ್ಕ (40) ಮೃತ ವ್ಯಕ್ತಿ. ಈತ ಮೃತಪಟ್ಟು 2-3 ದಿನಗಳೇ ಕಳೆದಿರಬಹುದೆಂದು ಅಂದಾಜಿಸಲಾಗಿದೆ. ಕೆರೆಯ ಸಮೀಪದಲ್ಲಿ ಈತನ ಚಪ್ಪಲಿ, ಮೊಬೈಲ್ ಹಾಗೂ ಬಟ್ಟೆ ಪತ್ತೆಯಾಗಿದೆ. ಮೀನು ಹಿಡಿಯುವಾಗ ಕಾಲು ಜಾರಿ ಬಿದ್ದು, ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.