ಶಿವಮೊಗ್ಗ: ಮನೆ ಬಿಟ್ಟು ಬಂದಿದ್ದ ಹಾಸನ ಜಿಲ್ಲೆ ಬೇಲೂರಿನ ಪ್ರೇಮಿಗಳು ಶಿವಮೊಗ್ಗ ಜಿಲ್ಲೆಯ ರಿಪ್ಪನ್ಪೇಟೆಯಲ್ಲಿ ಪತ್ತೆಯಾಗಿದ್ದಾರೆ.
ಬೇಲೂರಿನ ಮುಜಾಯಿದ್ದೀನ್ ಎಂಬ ಯುವಕ ಅಪ್ರಾಪ್ತೆಯನ್ನು ಪ್ರೀತ್ತಿದ್ದ. ಇವರ ಪ್ರೀತಿಗೆ ಎರಡೂ ಮನೆಯಲ್ಲಿ ವಿರೋಧ ಇತ್ತು. ಹಾಗಾಗಿ ಇಬ್ಬರೂ ಮನೆ ಬಿಟ್ಟು ಶಿವಮೊಗ್ಗ ಜಿಲ್ಲೆಯ ರಿಪ್ಪನ್ಪೇಟೆಗೆ ಬಂದಿದ್ದರು. ಮಗಳು ನಾಪತ್ತೆಯಾಗುತ್ತಿದ್ದಂತೆ ಪಾಲಕರು ಬೇಲೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಸಿದ್ದರು. ಪೊಲೀಸರು ಮೊಬೈಲ್ ಕರೆ ಆಧರಿಸಿ ತನಿಖೆ ಕೈಗೊಂಡಾಗ ಪ್ರೇಮಿಗಳು ರಿಪ್ಪನ್ಪೇಟೆಯಲ್ಲಿ ಇರುವ ಮಾಹಿತಿ ಲಭ್ಯವಾಗಿತ್ತು.
ಹೀಗಾಗಿ ರಿಪ್ಪನ್ಪೇಟೆಗೆ ಆಗಮಿಸಿದ ಬೇಲೂರು ಪೊಲೀಸರು ಅವರನ್ನು ಸೋಮವಾರ ವಶಕ್ಕೆ ಪಡೆದು ಕರೆದೊಯ್ಯುವಾಗ ಶಿವಮೊಗ್ಗ ಹೊರವಲಯದ ಹರಿಗೆ ಬಳಿ ವಾಹನ ಸ್ವಲ್ಪ ನಿಧಾನವಾಗಿ ಸಾಗುತ್ತಿದ್ದ ಸಂದರ್ಭದಲ್ಲಿ ಯುವಕ ವಾಹನದಿಂದ ಕೆಳಕ್ಕೆ ಹಾರಿದ್ದಾನೆ. ಯಾರೋ ಕಳ್ಳ ಪೊಲೀಸರಿಂದ ತಪ್ಪಿಸಿಕೊಳ್ಳುತ್ತಿದ್ದಾನೆ ಎಂದು ಭಾವಿಸಿದ ಸಾರ್ವಜನಿಕರು ಆತನನ್ನು ಹಿಡಿದಿದ್ದಾರೆ.
ಈ ವೇಳೆ ಹೈಡ್ರಾಮ ಮಾಡಿದ ಅಪ್ರಾಪ್ತೆ, ನಾವಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದೇವೆ. ನಮ್ಮನ್ನು ಬದುಕಲು ಬಿಡಿ ಎಂದು ಅಂಗಾಲಾಚಿದ್ದಾಳೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿ ಅವರಿಬ್ಬರನ್ನೂ ಬೇಲೂರು ಪೊಲೀಸರೊಂದಿಗೆ ಕಳುಹಿಸಿಕೊಟ್ಟಿದ್ದಾರೆ.
ಕೈಯಲ್ಲಿ ಮಚ್ಚು ಹಿಡಿದು, ಗ್ರಾಪಂ ಸದಸ್ಯೆಯನ್ನ ಹೊತ್ತೊಯ್ದ ಚಿಕ್ಕಪ್ಪ! ಕತ್ತಲಲ್ಲಿ ನಡೆಯಿತು ಘೋರ ದುರಂತ
ಪದೇಪದೆ ಸರ್ಪಗಳು ಬರುತ್ತಿವೆ… ಎಂದು ಮನೆಯಲ್ಲಿ ಬಾವಿ ತೋಡಿದ ದಂಪತಿ! ವಾರದ ಬಳಿಕ ಕಾದಿತ್ತು ಶಾಕ್
ನನ್ನ ತಂದೆಗೆ ಹಲವು ಕಾಲ್ಗರ್ಲ್ ಜತೆ ಸಂಪರ್ಕ ಇತ್ತು, ಅವನೊಬ್ಬ ಕಾಮುಕ, ಮಹಿಳೆಯರನ್ನ ಟ್ರ್ಯಾಪ್ ಮಾಡ್ತಿದ್ದ…