ನಿರ್ದೇಶಕರು ಪುಡಂಗಿ ಅಲ್ಲ, ಅವ್ರಿಗೆ ಕೊಂಬೂ ಇರಲ್ಲ.. ದಯವಿಟ್ಟು ಯೋಚಿಸಿ ಮಾತಾಡಿ: ದರ್ಶನ್​ಗೆ ಪ್ರೇಮ್​ ಎಚ್ಚರಿಕೆ

blank

ಬೆಂಗಳೂರು: ದರ್ಶನ್​ ಹೆಸರಲ್ಲಿ ವಂಚನೆ ಪ್ರಕರಣದ ಮೂಲಕ ಶುರುವಾದ ವಿವಾದ ನಿತ್ಯ ಒಂದಿಲ್ಲೊಂದು ರೀತಿಯಲ್ಲಿ ಸದ್ದು ಮಾಡುತ್ತಲೇ ಇದ್ದು, ಇಂದ್ರಜಿತ್​ ಲಂಕೇಶ್​ ಎಂಟ್ರಿಕೊಟ್ಟ ಬಳಿಕ ನಿದೇರ್ಶಕ ಉಮಾಪತಿ ಡಾ.ರಾಜ್​ಕುಮಾರ್​ ಪ್ರಾಪರ್ಟಿ ವಿಚಾರವನ್ನೂ ಮುನ್ನಲೆಗೆ ತಂದಿದ್ದರು. ಇದರ ಬೆನ್ನಲ್ಲೇ ನಿರ್ದೇಶಕ ‘ಜೋಗಿ’ ಪ್ರೇಮ್​, ‘ತೆರೆಮೇಲೆ ಒಬ್ಬ ನಟನನ್ನು ಹುಟ್ಹಾಕಿ ಅವ್ನಿಗ್ ಕೊಂಬು ಬರ್ಬೇಕಾದ್ರೆ ನಿರ್ದೇಶಕನ ಶ್ರಮ ಎಷ್ಟಿರುತ್ತೆ ಅಂತಾ ಪ್ರತಿಯೊಬ್ಬ ಕಲಾವಿದರಿಗೂ ಗೊತ್ತು. ಅದು ನಿಮ್ಗೂ ಗೊತ್ತು.. ದಯವಿಟ್ಟು ಇನ್ನೊಬ್ರ ಬಗ್ಗೆ ಮಾತಾಡ್ಬೇಕಾದ್ರೆ ಯೋಚಿಸಿ ಮಾತಾಡಿ ದರ್ಶನ್ ಅವರೇ…’ ಎಂದು ಎಚ್ಚರಿಸಿದ್ದಾರೆ.

ನಿರ್ದೇಶಕ ಉಮಾಪತಿ ನಿನ್ನೆ ಮಾಧ್ಯಮದವರ ಬಳಿ ಮಾತನಾಡುತ್ತಾ, ದರ್ಶನ್​ ಮತ್ತು ನನ್ನ ನಡುವೆ ಆಸ್ತಿ‌‌ ವಿಚಾರ ಬಂದಿದ್ದು ನಿಜ. ಆ ಆಸ್ತಿ ಪುನೀತ್ ರಾಜ್​ಕುಮಾರ್ ಹಾಗೂ ರಾಘವೇಂದ್ರ ರಾಜ್​ಕುಮಾರ್ ಅವರದ್ದು. ನಮ್ಮ ದೊಡ್ಮನೆಯವರ ಆಸ್ತಿ ಅದು. ಹಾಗಾಗಿ ಅದನ್ನು ನಾನು ಕೊಡೋದಿಲ್ಲ ಅಂದಿದ್ದೆ. ಅಲ್ಲಿಗೆ ದರ್ಶನ್ ಸುಮ್ಮನಾಗಿದ್ರು. ಆಸ್ತಿ ಕೊಟ್ಡಿಲ್ಲ ಅಂತ ದರ್ಶನ್ ಸರ್ ಕೋಪ ಮಾಡಿಕೊಂಡಿಲ್ಲ ಅಂತ ಅನ್ನಿಸ್ತಿದೆ ಎಂದಿದ್ದರು. ಇದೇ ವಿಚಾರವಾಗಿ ಮೈಸೂರಿನ ಫಾರ್ಮ್​ಹೌಸ್​ನಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ್ದ ದರ್ಶನ್​, ಉಮಾಪತಿಯನ್ನು ನನಗೆ ಪರಿಚಯ ಮಾಡಿಸಿದ್ದೇ ಜೋಗಿ ಪ್ರೇಮ್​. ಸಿನಿಮಾ ಮಾಡೋ ಉದ್ದೇಶದಿಂದ ನಾನು, ಉಮಾಪತಿ ಮತ್ತು ಜೋಗಿ ಪ್ರೇಮ್​ ಒಟ್ಟಾಗಿದ್ದೆವು. ನನ್ನ ಬಳಿ ಪ್ರೇಮ್​ 100 ದಿನ ಕಾಲ್​ಶೀಟ್​ ಕೇಳಿದರು. ನಾನು ಯಾವುದೇ ನಿರ್ದೇಶಕರಿಗಾದರೂ 70 ದಿನದ ಮೇಲೆ ಕಾಲ್​ಶೀಟ್​ ಕೊಡಲ್ಲ. ಪ್ರೇಮ್​ಗೆ 100 ದಿನ ಕಾಲ್​ಶೀಟ್​ ಕೊಡೋಕೆ ಅವರೇನು ದೊಡ್ಡ ಪುಡಂಗನೂ ಅಲ್ಲ, ಅವರಿಗೆ ಕೊಂಬು ಇಲ್ಲ ಎಂದಿದ್ದರು. ಇದಕ್ಕೆ ಟ್ವೀಟ್​ ಮೂಲಕ ಪ್ರೇಮ್​ ನಯವಾಗಿಯೇ ದರ್ಶನ್​ಗೆ ತಿರುಗೇಟು ಕೊಟ್ಟಿದ್ದಾರೆ.

‘ದರ್ಶನ್ ಅವ್ರೇ, ನಾನು ಕರಿಯ ಸಿನಿಮಾ ಮಾಡ್ಬೇಕಾದ್ರೆ ಯಾವ್ ಪುಡಂಗುನೂ ಅಲ್ಲಾ ನಂಗ್ ಕೊಂಬು ಇರ್ಲಿಲ್ಲ.. ನಾನೊಬ್ಬ ಸಾಮಾನ್ಯ ನಿರ್ದೇಶಕ. ರಾಜ್​ಕುಮಾರ್ ಅವರು, ಅಂಬರೀಷ್ ಅವರು, ವಿಷ್ಣುವರ್ಧನ್‌ರವರು ಹಾಗೂ ರಜಿನಿಕಾಂತ್‌ರು ಒಬ್ಬ ಒಳ್ಳೆಯ ನಿರ್ದೇಶಕ ಎಂದು ನನಗೆ ಬೆನ್ನು ತಟ್ಟಿದ್ರು. ಇಡೀ ಕರ್ನಾಟಕ ಜನತೆ ಹರಸಿ ಹಾರೈಸಿ ಹ್ಯಾಟ್ರಿಕ್ ನಿರ್ದೇಶಕ ಅಂತಾ ಬಿರುದು ಕೊಟ್ಟಾಗ್ಲೂ ನನಗ್ ಕೊಂಬು ಬರ್ಲಿಲ್ಲ. ನಾನು ನಂದೇ ಆದ್ ಸ್ಟೈಲ್‌ನಲ್ಲಿ ಸಿನಿಮಾ ಮಾಡ್ಕೊಂಡು ಬಂದೋವ್ನು. ಸುಮಾರು ನಿರ್ಮಾಪಕರು, ನಿಮ್ಮ ಅಭಿಮಾನಿಗಳು ಹಾಗೂ ನನ್ನ ಅಭಿಮಾನಿಗಳು ಪ್ರತಿ ಸಾರಿ ದರ್ಶನ್ ಮತ್ತು ನಿಮ್ಮ ಕಾಂಬಿನೇಶನ್‌ನಲ್ಲಿ ಯಾವಾಗ ಚಿತ್ರ ಮಾಡ್ತೀರಿ ಎಂದು ಕೇಳ್ತಾನೆ ಇದ್ರು. ಈ ಬಗ್ಗೆ ನಿಮಗೂ ಗೊತ್ತು, ನನಗೂ ಗೊತ್ತು. ಇಬ್ಬರು ಸೇರಿ ಸಿನಿಮಾ ಮಾಡೋದ್ರ ಬಗ್ಗೆ ಚೆರ್ಚೆ ಮಾಡಿದ್ವಿ. ನಾನು ನಮ್ ಬ್ಯಾನರ್‌ನಲ್ಲಿ ಸಿನಿಮಾ ಮಾಡಿ, ಇಲ್ಲಾ ನಿಮ್ ಬ್ಯಾನರ್​ನಲ್ಲಿ ಸಿನಿಮಾ ಮಾಡೋಣ ಅಂತಾ ಮತ್ತೆ ಚರ್ಚೆ ಮಾಡಿದ್ವಿ’ ಎಂದು ಪ್ರೇಮ್​ ನೆನಪಿಸಿದ್ದಾರೆ.

‘ಆದರೆ, ನನಗೆ ಉಮಾಪತಿಯವರು ನೀವು ಹಾಗೂ ದರ್ಶನ್ ಸೇರಿ ನಂಗ್ ಸಿನಿಮಾ ಮಾಡ್ಕೊಡಿ ಅಂತಾ ಅಂದ್ರು. ಅದಕ್ಕೆ ನಾನು ಉಮಾಪತಿ ಅವ್ರನ್ನ ನಿಮಗೆ ಪರಿಚಯ ಮಾಡಿ ಮೂರು ಜನ ಸೇರಿ ಸಿನಿಮಾ ಮಾಡೋಣ ಅಂತಾ ಡಿಸೈಡ್ ಮಾಡಿದ್ವಿ. ಆದ್ರೆ, ನನ್ ‘ದಿ ವಿಲ್ಲನ್’ ಸಿನಿಮಾ ಲೇಟ್ ಆದ ಕಾರಣ ನಾನೇ ಉಮಾಪತಿಯವರಿಗೆ ದರ್ಶನ್ ಅವ್ರ ಡೇಟ್ ಇದ್ದ ಕಾರಣ ಬೇರೆ ನಿರ್ದೇಶಕರನ್ನ ಹಿಡಿದು ಸಿನಿಮಾ ಮಾಡಿ ಅಂತಾ ಹೇಳಿದ್ದೆ. ನನ್ನ ಸಂಭಾವನೆಯನ್ನ ಉಮಾಪತಿಯವರಿಗೆ ವಾಪಸ್ ನೀಡಿ ‘ರಾಬರ್ಟ್’ ಸಿನಿಮಾಗೆ ಹಾರೈಸಿದವನು. ಅದೇ ರೀತಿ ರಾಬರ್ಟ್ ಚಿತ್ರ ಹಿಟ್ ಆಯ್ತು, ಎಲ್ಲರ ಹಾಗೇ ನಾನು ಖುಷಿ ಪಟ್ಟೆ.. ಇದ್ರ ಮಧ್ಯೆ ನನ್ ಹೆಸ್ರು ಯಾಕೆ?’ ಎಂದು ಪ್ರೇಮ್​ ಪ್ರಶ್ನಿಸಿದ್ದಾರೆ.

‘ದರ್ಶನ್ ಅವ್ರೇ ನಿರ್ದೇಶಕರು ಯಾವ್ ಪುಡಂಗಿಗಳು ಅಲ್ಲಾ, ಅವ್ರಿಗೆ ಕೊಂಬು ಇರಲ್ಲ. ತೆರೆಮೇಲೆ ಒಬ್ಬ ನಟನನ್ನ ಹುಟ್ಹಾಕಿ ಅವ್ನಿಗ್ ಕೊಂಬು ಬರ್ಬೇಕಾದ್ರೆ ನಿರ್ದೇಶಕನ ಶ್ರಮ ಎಷ್ಟಿರುತ್ತೆ ಅಂತಾ ಪ್ರತಿಯೊಬ್ಬ ಕಲಾವಿದರಿಗೂ ಗೊತ್ತು, ಅದು ನಿಮ್ಗೂ ಗೊತ್ತು.. ದಯವಿಟ್ಟು ಇನ್ನೊಬ್ರ ಬಗ್ಗೆ ಮಾತಾಡ್ಬೇಕಾದ್ರೆ ಯೋಚಿಸಿ ಮಾತಾಡಿ ದರ್ಶನ್ ಅವರೇ… Thank you for your kind words. ದೇವ್ರು ನಿಮಗೆ ಒಳ್ಳೇದ್ ಮಾಡ್ಲಿ’ ಎಂದು ಪ್ರೇಮ್​ ಟ್ವೀಟ್​ ಮಾಡಿದ್ದಾರೆ.

ಆ ಪ್ರಾಪರ್ಟಿ ದೊಡ್ಡಮನೆಯವರದ್ದು, ಹಾಗಾಗಿ ದರ್ಶನ್​ಗೆ ಆಸ್ತಿ ಕೊಡಲ್ಲ ಅಂದೆ…

ಅರುಣಾಕುಮಾರಿಯ ಪ್ರೇಮ್​ಕಹಾನಿ ಬಿಚ್ಚಿಟ್ಟ ನಟ ದರ್ಶನ್​! 9 ವರ್ಷ ಚಿಕ್ಕವನೊಂದಿಗೆ ಲವ್ವಿಡವ್ವಿ ಶುರು ಮಾಡಿದ್ದಳಂತೆ…

Share This Article

ಋತುಸ್ರಾವದ ಸಮಯದಲ್ಲಿ ಮೊಸರು ಸೇವಸಬಹುದೇ.. ಬೇಡವೇ; ಗೊಂದಲಕ್ಕೆ ಇಲ್ಲಿದೆ ಪರಿಹಾರ | Health Tips

ಮೊಸರು ಅಥವಾ ಉಪ್ಪಿನಕಾಯಿ ತಿನ್ನುವುದರಿಂದ ಋತುಸ್ರಾವದ ಸಮಯದಲ್ಲಿ ಸಮಸ್ಯೆಯಾಗುತ್ತದೆ ಎಂಬ ನಂಬಿಕೆಯಿದೆ. ಆದರೆ ಯಾವುದೇ ಆಹಾರವು…

ಉಸಿರಾಟದ ವ್ಯಾಯಾಮ ಗೊರಕೆ ಸಮಸ್ಯೆಗೆ ಪರಿಹಾರ; ಇದು ಸುಳ್ಳೋ-ಸತ್ಯವೋ.. ವೈದ್ಯರು ಹೇಳೋದೇನು? | Health Tips

ನಿದ್ರಿಸುವಾಗ ಗೊರಕೆ ಹೊಡೆಯುವ ವ್ಯಕ್ತಿಗೆ ಮಾತ್ರವಲ್ಲದೆ ಸುತ್ತಮುತ್ತಲಿನವರಿಗೂ ತೊಂದರೆಯ ಅನುಭವವಾಗುತ್ತದೆ. ಸಾಮಾನ್ಯವಾಗಿ ಇದನ್ನು ಲಘುವಾಗಿ ತೆಗೆದುಕೊಳ್ಳಲಾಗುತ್ತದೆ.…

Vastu Tips : ರಾತ್ರಿ ಮಲಗುವ ಮುನ್ನ ಈ ತಪ್ಪುಗಳನ್ನು ಮಾಡಬೇಡಿ!ಸಾಲದ ಸುಳಿಗೆ ಸಿಲುಕುತ್ತೀರಿ..!

Vastu Tips: ದೃಷ್ಟ ಚೆನ್ನಾಗಿದ್ದರೆ ಕೆಲವರು ರಾತ್ರೋರಾತ್ರಿ ಲಕ್ಷಾಧಿಪತಿಗಳಾಗುತ್ತಾರೆ. ಕೆಲವರು  ಐಷಾರಾಮಿ ಜೀವನ ನಡೆಸಲು ಕಷ್ಟಪಡುತ್ತಾರೆ. ಅವರು…