ಸುಂಟಿಕೊಪ್ಪ: ಹರದೂರು ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಎ.ಎ.ಬೋಜಮ್ಮ ಆಯ್ಕೆಯಾಗಿದ್ದಾರೆ.
ಹರದೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿದ್ದ ಟಿ.ಪಿ.ಉಷಾ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ಉಷಾ ಕುಂಬಾರಬಾಣೆ ಮತ್ತು ಭೋಜಮ್ಮ ಅವರು ಕಣದಲ್ಲಿದ್ದು 11 ಸದಸ್ಯರನ್ನು ಒಳಗೊಂಡ ಈ ಗ್ರಾಮ ಪಂಚಾಯಿತಿಯಲ್ಲಿ ಅತ್ಯಂತ ಜಿದ್ದಾಜಿದ್ದಿಯಿಂದ ಕೂಡಿದ್ದ ಗ್ರಾಮಸ್ಥರಲ್ಲಿ ತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿತ್ತು.
ಬಿಜೆಪಿ ಬೆಂಬಲಿತ 7 ಸದಸ್ಯ ಬಲವನ್ನು ಹೊಂದಿದೆ. ಕಾಂಗ್ರೆಸ್ ಬೆಂಬಲಿತ 4 ಸದಸ್ಯರನ್ನು ಹೊಂದಿರುವ ಪಂಚಾಯಿತಿಯಲ್ಲಿ ತೀವ್ರ ಸ್ಪರ್ಧೆಯು ಏರ್ಪಟ್ಟಿತ್ತು ಬೋಜಮ್ಮ ಅವರು ಪ್ರತಿಸ್ಪರ್ಧಿ ಉಷಾ ಅವರು ಕ್ರಮವಾಗಿ 6-5 ಮತಗಳನ್ನು ಗಳಿಸಿದರು. ಆರು ಮತ ಪಡೆದ ಬೋಜಮ್ಮ ಜಯಗಳಿಸಿ ಅಧ್ಯಕ್ಷರಾಗಿ ಆಯ್ಕೆಗೊಂಡರು.
ಚುನಾವಣಾ ಅಧಿಕಾರಿಯಾಗಿ ಸೋಮವಾರಪೇಟೆ ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾದ ಪುನೀತ್ ಅವರು ಕಾರ್ಯನಿರ್ವಹಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಸಂದೇಶ್, ಬಿಜೆಪಿ ಪ್ರಮುಖರಾದ ನಾಪಂಡ ಉಮೇಶ್, ಬೂತ್ ಅಧ್ಯಕ್ಷ ನಂದಕುಮಾರ್, ಶಕ್ತಿ ಕೇಂದ್ರದ ಅಧ್ಯಕ್ಷ ಪದ್ಮನಾಭ ಮತ್ತಿತರ ಬಿಜೆಪಿ ಪ್ರಮುಖರು ಉಪಸ್ಥಿತರಿದ್ದರು.