More

  ಪರೀಕ್ಷೆ ಬರೆಯಲು ಹೋದ ಮಗಳು ಮನೆಗೆ ಬರಲೇ ಇಲ್ಲ: ದೆಹಲಿ ಹಿಂಸಾಚಾರದಿಂದಾಗಿ ಬಾಲಕಿ ನಾಪತ್ತೆ

  ನವದೆಹಲಿ: ಈಶಾನ್ಯ ದೆಹಲಿಯಲ್ಲಿ ಸಿಎಎ, ಎನ್​ಆರ್​ಸಿ ಪರ ವಿರೋಧದ ಹೋರಾಟದ ಕಿಚ್ಚು ಹೆಚ್ಚಿದ್ದು, ಹಿಂಸಾಚಾರದಿಂದಾಗಿ 28ಕ್ಕೂ ಹೆಚ್ಚು ಜನ ಮೃತರಾಗಿದ್ದಾರೆ. ಹೋರಾಟಗಾರರು ಮಾತ್ರವಲ್ಲದೆ ಜನಸಾಮಾನ್ಯರನ್ನು ಕೂಡ ಹಿಂಸೆಗೆ ಗುರುಪಡಿಸಿಕೊಳ್ಳಲಾಗಿದ್ದು 13 ವರ್ಷದ ಬಾಲಕಿ ಕಾಣೆಯಾಗಿರುವುದು ವರದಿಯಾಗಿದೆ.

  ಸೋನಿಯಾ ವಿಹಾರದ ಬಳಿ ವಾಸಿಸುತ್ತಿರುವ ಕುಟುಂಬದ 13 ವರ್ಷದ ಹೆಣ್ಣು ಮಗಳು ಸೋಮವಾರದಂದು ಖಜುರಿ ಖಾಸ್​ನಲ್ಲಿರುವ ಶಾಲೆಯಲ್ಲಿ ಪರೀಕ್ಷೆ ಬರೆಯುವುದಕ್ಕಾಗಿ ತೆರಳಿದ್ದಳು. 8ನೇ ತರಗತಿ ಓದುತ್ತಿರುವ ಆ ಬಾಲಕಿಯನ್ನು ಸಂಜೆ 5.20ಕ್ಕೆ ಆಕೆಯ ತಂದೆ ಮನೆಗೆ ಕರೆತರಬೇಕಿತ್ತು. ಆದರೆ ಆ ಸಮಯಕ್ಕೆ ಅಲ್ಲಿ ಮಿತಿ ಮೀರಿದ ಹೋರಾಟ ನಡೆಯುತ್ತಿದ್ದುದ್ದರಿಂದಾಗಿ ಅವರು ಹೋಗಲಾಗಿಲ್ಲ. ಆ ಸಮಯದಿಂದ ಮಗಳು ಕಾಣೆಯಾಗಿದ್ದು ಇದುವರೆಗೂ ಆಕೆಯ ಸುಳಿವು ಸಿಕ್ಕಿಲ್ಲ ಎಂದು ಆಕೆಯ ತಂದೆ ತನ್ನ ಅಳಲನ್ನು ತೋಡಿಕೊಂಡಿದ್ದಾರೆ.

  ಸದ್ಯ ಪೊಲೀಸರು ದೂರನ್ನು ದಾಖಲಿಸಿಕೊಂಡಿದ್ದು ಬಾಲಕಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. (ಏಜೆನ್ಸೀಸ್​)

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts