ಪುಟಾಣಿಗಳೇ ರೆಡಿಯಾಗಿ… ಶೀಘ್ರವೇ 1-5ನೇ ತರಗತಿ ಶಾಲೆ ಆರಂಭ

1 Min Read
ಪುಟಾಣಿಗಳೇ ರೆಡಿಯಾಗಿ... ಶೀಘ್ರವೇ 1-5ನೇ ತರಗತಿ ಶಾಲೆ ಆರಂಭ

ಶಿವಮೊಗ್ಗ: 1ರಿಂದ 5ನೇ ತರಗತಿವರೆಗೆ ಶಾಲೆ ಆರಂಭಿಸುವ ಕುರಿತು ಶೀಘ್ರವೇ ತಾಂತ್ರಿಕ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.

ಶಿವಮೊಗ್ಗದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, 6ರಿಂದ 8ನೇ ತರಗತಿಗಳನ್ನು ನಮ್ಮ ಶಿಕ್ಷಕರು ಚೆನ್ನಾಗಿ ನಡೆಸಿದ್ದಾರೆ. ಆ ರೀತಿ ನೋಡಿ ತುಂಬ ಸಂತೋಷವಾಗಿದೆ. ಸದ್ಯದಲ್ಲೇ 1ರಿಂದ 5 ರವರೆಗೆ ಶಾಲೆ ತೆರೆಯುವ ಬಗ್ಗೆ ತಾಂತ್ರಿಕ ಸಮಿತಿ ಮುಂದೆ ಚರ್ಚೆ ಮಾಡುತ್ತೇವೆ. ತಾಂತ್ರಿಕ ಸಮಿತಿ ಸಭೆ ಅನುಮತಿ ನೀಡಿದ ಬಳಿಕ ಆರಂಭಿಸುತ್ತೇವೆ ಎಂದರು.

ಪಠ್ಯ ಕಡಿತಗೊಳಿಸುವ ಕುರಿತು ಬ್ರಿಡ್ಜ್ ಕೋರ್ಸ್ ಮಾಡುತ್ತಿದ್ದೇವೆ. ಸಿಲಬಸ್ ಪೂರ್ತಿ ಮಾಡಿದರೆ ಮಕ್ಕಳಿಗೆ ಲಾಭ. ಮಕ್ಕಳು ಒಂದೂವರೆ ವರ್ಷ ಶಾಲೆಯಿಂದ ದೂರ ಉಳಿದಿದ್ದಾರೆ. ಅದನ್ನು ಬ್ರಿಡ್ಜ್ ಕೋರ್ಸ್​ನಲ್ಲಿ ಪೂರ್ಣಗೊಳಿಸಬೇಕಿದೆ.ಈ ವರ್ಷವೂ ಪಠ್ಯ ಕಡಿತಗೊಳಿಸಿದರೆ ಮುಂದಿನ ತರಗತಿಗಳಿಗೆ ತೊಂದರೆಯಾಗುತ್ತದೆ. ಹೀಗಾಗಿ ಆ ಬಗ್ಗೆ ಇನ್ನು ಯಾವ ನಿರ್ಣಯ ಕೈಗೊಂಡಿಲ್ಲ ಎಂದು ಹೇಳಿದರು.

ಶಿಕ್ಷಕರ ರಜೆ ಕಡಿಮೆ ಮಾಡಿ ಸಿಲೆಬಸ್ ಪೂರ್ಣಗೊಳಿಸಬಹುದಾ? ಎಂಬ ಬಗ್ಗೆ ಯೋಚನೆ ಇದೆ. ಈ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಮುಂದಿನ‌ ದಿನಗಳಲ್ಲಿ ಶಿಕ್ಷಕರ ಸಹಕಾರ ನೋಡಿ, ಅವಶ್ಯಕತೆ ಬಿದ್ದರೆ ನಿರ್ಣಯ ಕೈಗೊಳ್ಳುತ್ತೇವೆ. ಪಠ್ಯ ಕಡಿತಗೊಳಿಸುವ ಬಗ್ಗೆ ಪ್ರಯತ್ನ ಮಾಡುತ್ತೇವೆ ಎಂದರು.

ಕೇರಳದಲ್ಲಿ ಕರೊನಾ ಹೆಚ್ಚಾಗುತ್ತಿದೆ. ಮಂಗಳೂರು, ಉಡುಪಿಯಲ್ಲಿ ಕಡಿಮೆ ಆಗುತ್ತಿದೆ. ಶಾಲೆ ಪ್ರಾರಂಭ ಮಾಡಿರುವ ಸರ್ಕಾರಕ್ಕೆ ಕರೊನಾ ಹೆಚ್ಚಳವಾದರೆ ತಕ್ಷಣ ನಿಲ್ಲಿಸುವ ಅವಕಾಶ ಇದೆ. ಈ ಬಗ್ಗೆ ಕರೊನಾ ಹೆಚ್ಚಾದ ಸಂದರ್ಭದಲ್ಲಿ ನಿರ್ಣಯ ಕೈಗೊಳ್ಳುತ್ತೇವೆ ಎಂದರು.

ಆ ಚುಚ್ಚುಮಾತನ್ನ ಸಹಿಸಲಾಗ್ತಿಲ್ಲ, ನನ್ನ ಸಾವಿಗೆ ಅಪ್ಪ-ಅಮ್ಮನೇ ಕಾರಣ… ಮಗನ ಸಾವಿನ ಬಳಿಕ ಹೆತ್ತವರು ಎಸ್ಕೇಪ್​

ಆತ್ಮ ಅತೃಪ್ತಿಗೊಂಡು ಭಂಗವಾಗಿ ಕಾಡುತ್ತವೆ, ಸಾವುಗಳು ಹೆಚ್ಚುತ್ತವೆ: ಭವಿಷ್ಯ ನುಡಿದ ಕೋಡಿಶ್ರೀ

See also  ಸಮುದ್ರಕ್ಕೆ ನೆಗೆದ ರಾಹುಲ್​ ಗಾಂಧಿ; ಬಲೆ ಹಾಕುತ್ತಿದ್ದ ಮೀನುಗಾರರೊಂದಿಗೆ ನೀರಲ್ಲಿ ಮೋಜು
Share This Article