ಜಯಂತಿ ಆಡಂಬರಕ್ಕೆ ಸೀಮಿತಗೊಳ್ಳದಿರಲಿ

ಯಾದಗಿರಿ: ಜನರಲ್ಲಿ ಜಾಗೃತಿ ಬರಲಿ ಎಂಬ ಉದ್ದೇಶದಿಂದ ಮಹಾತ್ಮರ ಜಯಂತಿಗಳನ್ನು ಸರ್ಕಾರದಿಂದಲೇ ಆಚರಿಸಲಾಗುತ್ತಿದ್ದು, ಈ ಜಯಂತಿಗಳು ಕೇವಲ ಆಡಂಬರಕ್ಕೆ ಸೀಮಿತವಾಗದೆ ಮಹಾತ್ಮರ ವಿಚಾರಧಾರೆಗಳನ್ನು ಯುವ ಪೀಳಿಗೆ ಅರಿಯುವಂತಾಗಬೇಕಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಸದಸ್ಯ ಶರಣಪ್ಪ ಡಿ.ಮಾನೆಗಾರ ಹೇಳಿದರು.

ತಾಲೂಕಿನ ಯರಗೋಳ ಗ್ರಾಮದಲ್ಲಿ ಬುಧುವಾರ ಸಂಜೆ ಮಾದಿಗ ಮೀಸಲಾತಿ ಹೋರಾಟ ಸಮಿತಿಯಿಂದ ಏರ್ಪಡಿಸಿದ ಹಸಿರುಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನರಾಮ್ರ 112ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಉತ್ತಮ ಸಂಸದೀಯ ಪಟುಗಳಾಗಿದ್ದ ಡಾ.ಬಾಬು ಜಗಜೀವನ್ ರಾಮ್ ದೇಶದ ರೈತರಿಗೆ ಕೃಷಿ ಮಹತ್ವವನ್ನು ಸಾರಿದವರು. ಅವರ ಚಿಂತನೆಗಳಿಂದ ಪ್ರಭಾವಿತರಾದ ದೇಶದ ರೈತ ವರ್ಗ ಕೃಷಿಯಲ್ಲಿ ದೊಡ್ಡ ಕ್ರಾಂತಿಯನ್ನೇ ಮಾಡಿದ್ದು ಈಗ ಇತಿಹಾಸ. ಅಂತೆಯೇ ಬಾಬೂಜಿ ಅವರನ್ನು ಹಸಿರುಕ್ರಾಂತಿ ಹರಿಕಾರ ಎಂದು ಕರೆಯಲಾಗುತ್ತದೆ ಎಂದರು.

ಕಲಬುರಗಿ ಕೇಂದ್ರಿಯ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ನಿದರ್ೇಶಕಿ ಡಾ. ಶಿವಗಂಗಾ ರುಮ್ಮಾ ಮಾತನಾಡಿ, ದೇಶದಲ್ಲಿ ಮಾದಿಗರು ಮೊದಲಿಗರು ಎಂದು ಇತಿಹಾಸ ಹೇಳುತ್ತದೆ. 8ಮತ್ತು 10ನೇ ಶತಮಾನದಲ್ಲಿ ಮಾದಿಗರು ರಾಜರಿಗೆ ತೆರಿಗೆ ಕಟ್ಟುತ್ತಿದ್ದರು. ಬಾಬೂಜಿ ಬಾಲ್ಯದಿಂದಲೆ ಶೊಷಣೆ ವಿರುದ್ಧ ಪ್ರತಿಭಟಿಸುತ್ತ ಬಂದವರು ಎಂದು ಹೇಳಿದರು.

ಗುರುಮಠಕಲ್ ಖಾಸಾಮಠದ ಶ್ರೀಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮುಖಂಡರಾದ ಮಲ್ಲಣ್ಣ ದಾಸನಕೇರಿ, ಶಾಂತರಾಜ ಮೋಟನಳ್ಳಿ, ಡಾ.ಭೀಮರಾಯ ಲಿಂಗೇರಿ, ಡಾ.ಮಲ್ಲಪ್ಪ ಹಾದಿಮನಿ, ದೇವಿಂದ್ರನಾಥ ನಾದ್, ಲಿಂಗಪ್ಪ ಹತ್ತಿಮನಿ, ಶಾಂತಪ್ಪ ಖಾನಳ್ಳಿ, ಹಣಮಂತ ಅಚ್ಚೋಲಾ, ಸಾಯಿಬಣ್ಣ ಚಿಕ್ಕಬಾನರ್, ಶರಣಗೌಡ ಗುತ್ತೇದಾರ, ಭೀಮಾಶಂಕರ, ಮಾರ್ಥಂಡಪ್ಪ ಮಾನೆಗಾರ, ಮರಲಿಂಗ ಚೋಟಾ, ದೇವಿಂದ್ರಪ್ಪ ತಾತನೋರ, ಮರಿಲಿಂಗ ರಂಗಾನೋರ, ಅಯ್ಯಪ್ಪ ಉದಾನೋರ, ಸಾಬಣ್ಣ ಹಲಗಿ, ಶರಣಪ್ಪ ಬಡಿಗೇರಾ, ದೇವಪ್ಪ ಮಟ್ಟಿ, ಮಲ್ಲಪ್ಪ ತಳಗೇರಿ, ಮಲ್ಲಿಕಾಜರ್ುನ ಕುಂಬಾರಹಳ್ಳಿ ಇದ್ದರು

Leave a Reply

Your email address will not be published. Required fields are marked *