10 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ 99 ವರ್ಷದ ವ್ಯಕ್ತಿ

ಚೆನ್ನೈ: ಹತ್ತು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿದಕ್ಕೆ 99 ವರ್ಷದ ವೃದ್ಧನನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಸರ್ಕಾರಿ ಶಾಲೆಯ ನಿವೃತ್ತ ಪ್ರಾಂಶುಪಾಲ ಕೆ. ಪುರುಷೋತ್ತಮನ್​ ತಮ್ಮ ಮನೆಯಲ್ಲಿ ಬಾಡಿಗೆಗಿದ್ದ ಮಗುವಿನ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈತನಿಗೆ ಏಳು ಜನ ಮಕ್ಕಳು, ಮೊಮ್ಮಕ್ಕಳು ಹಾಗೂ ಮರಿಮಕ್ಕಳಿದ್ದು, ಐದು ಮನೆಗಳ ಮಾಲೀಕ.

ಸುಮಾರು ಎರಡು ವರ್ಷಗಳಿಂದ ಬಾಲಕಿಯ ಕುಟುಂಬ ಈತನ ಮನೆಯಲ್ಲಿ ಬಾಡಿಗೆಗಿದ್ದು, ಮಗಳು ಹೊಟ್ಟೆ ನೋವು ಎಂದಾಗ ಪಾಲಕರು ಆಕೆ ಏನಾದರೂ ಸೇವಿಸಿದ್ದಾಳೆಯೇ ಎಂದು ಕೇಳಿದ್ದಾರೆ. ಈ ರೀತಿ ವಿಚಾರಿಸಿದಾಗ ಮನೆ ಮಾಲೀಕ ಬಾಲಕಿಗೆ ಮಾಡಿದ ಲೈಂಗಿಕ ದೌರ್ಜನ್ಯವನ್ನು ಪಾಲಕರಿಗೆ ವಿವರಿಸಿದ್ದಾಳೆ ಎಂದು ಪೊಲೀಸ್​ ಅಧಿಕಾರಿ ಪ್ರಕರಣದ ಕುರಿತು ತಿಳಿಸಿದ್ದಾರೆ.

ತನ್ನ ಮಗಳು ಹೇಳಿದ್ದನ್ನು ಕೇಳಿದ ಕೂಡಲೇ ಪಾಲಕರು ಮನೆ ಮಾಲೀಕನ ವಿರುದ್ಧ ನಮಗೆ ದೂರು ನೀಡಿದಾಗ ಆತನ ಮನೆಯಿಂದಲೇ ಮಾಲೀಕನನ್ನು ಬಂಧಿಸಿದೆವು. ವಿಚಾರಣೆ ವೇಳೆ ಆತ ತಪ್ಪೊಪ್ಪಿಕೊಂಡಿದ್ದು, ಆತನ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ ಎಂದರು. (ಏಜೆನ್ಸೀಸ್​)