97ರಲ್ಲೂ ಡ್ರೖೆವಿಂಗ್ ಲೈಸೆನ್ಸ್ ನವೀಕರಣ

ದುಬೈ: ಹಳೆಯ ತಲೆಮಾರಿನ ಎಷ್ಟೋ ಜನ ಸ್ವಾವಲಂಬಿಗಳು. ಇದು ಕೂಡ ಅಂಥ ಒಂದು ನಿದರ್ಶನ. ದುಬೈನಲ್ಲಿ ವಾಸವಾಗಿರುವ ಕೀನ್ಯಾ-ಭಾರತೀಯ ಮೂಲದ 97 ವರ್ಷದ ತೆಹಮ್ನ್ ಹೋಮಿ ಧುನ್​ಜೀಭಾಯ್ ಮೆಹ್ತಾ ಇತ್ತೀಚೆಗೆ ತಮ್ಮ ಡ್ರೖೆವಿಂಗ್ ಲೈಸೆನ್ಸ್ ನವೀಕರಿಸಿದ್ದಾರೆ. 1922ರಲ್ಲಿ ಜನಿಸಿದ ಅವರು 1980ರಿಂದ ದುಬೈನಲ್ಲಿ ಉದ್ಯೋಗಿಯಾಗಿದ್ದರು. 2002ರಲ್ಲಿ ಅನಿವಾರ್ಯವಾಗಿ ನಿವೃತ್ತಿ ಪಡೆದ ಅವರು ಅವಿವಾಹಿತರು. ‘ಕಾರುಗಳು ಮನುಷ್ಯನನ್ನು ಸೋಮಾರಿಯನ್ನಾಗಿ ಮಾಡುತ್ತವೆ’ ಎನ್ನುವ ಅವರಿಗೆ ನಡೆಯುವುದರಲ್ಲೇ ಹೆಚ್ಚು ಆಸಕ್ತಿ.