ಉತ್ತರ ಪ್ರದೇಶ: ಓದುವ ಆಸಕ್ತಿ ಇದ್ದರೆ ವಯಸ್ಸಿನ ಭೇದವಿಲ್ಲದೆ ಶಿಕ್ಷಣ ಪಡೆಯಬಹುದು. ಅನೇಕರು ಇಳಿ ವಯಸ್ಸಿನಲ್ಲಿ ಓದಿ ಸಾಬೀತು ಮಾಡಿದ್ದಾರೆ. ಈ ಪಟ್ಟಿಗೆ ಇತ್ತೀಚಿನ ಸೇರ್ಪಡೆಯಾಗಿದ್ದಾರೆ ಉತ್ತರ ಪ್ರದೇಶದ ಬುಲಂದ್‌ಶಹರ್‌ನ 92 ವರ್ಷದ ಅಜ್ಜಿ ಸಲೀಮಾ ಖಾನ್. ಈಗ ಈಕೆಯಿಂದ ಪ್ರೇರಿತರಾಗಿ ಇನ್ನೂ ಕೆಲವು ಮಹಿಳೆಯರು ಶಾಲೆಗೆ ಹೋಗುತ್ತಿದ್ದಾರೆ.
ಸಲೀಮಾ ಖಾನ್ 1931 ರಲ್ಲಿ ಜನಿಸಿದರು. ಅವಳು 14 ನೇ ವಯಸ್ಸಿನಲ್ಲಿ ಮದುವೆಯಾದಳು. ಓದುವ ಆಸೆಯಿದ್ದರೂ ಹಲವು ಕಾರಣಗಳಿಂದ ಆಕೆಗೆ ಓದಲಾಗಲಿಲ್ಲ.
ಈ ಕುರಿತಗಾಗಿ ಮಾತನಾಡಿದ ವೃದ್ಧೆ, ಈ ಹಿಂದೆ ತಮ್ಮ ಗ್ರಾಮದಲ್ಲಿ ಶಾಲೆ ಇರಲಿಲ್ಲ. ಆರು ತಿಂಗಳಿನಿಂದ ಶಾಲೆಗೆ ಹೋಗುತ್ತಿದ್ದೇನೆ. ತನಗೆ ಹಣ ಎಣಿಸುವುದೂ ಗೊತ್ತಿಲ್ಲ. ಹೀಗಾಗಿ ಮೊಮ್ಮಕ್ಕಳು ಕೆಲವು ತಂತ್ರಗಳನ್ನು ಬಳಸಿ ಹೆಚ್ಚು ಹಣವನ್ನು ತೆಗೆದುಕೊಳ್ಳುತ್ತಿದ್ದರು. ಈಗ ಆ ತಂತ್ರಗಳು ಕೆಲಸ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾಳೆ.
#WATCH | UP: A 92-year-old woman attends primary school in Bulandshahr pic.twitter.com/4Fuuf1LJAo
— ANI UP/Uttarakhand (@ANINewsUP) September 27, 2023
ಸ್ಥಳೀಯ ಶಿಕ್ಷಣಾಧಿಕಾರಿ ಲಕ್ಷ್ಮೀ ಪಾಂಡೆ ಮಾತನಾಡಿ, 92 ವರ್ಷದ ಅಜ್ಜಿ ಸಲೀಮಾ ಖಾನ್ ಅವರನ್ನು ಪ್ರಶಂಸಿಸಿದರು. ಸಲೀಮಾ ಖಾನ್ ಅವರ ಕಥೆ ಎಲ್ಲರಿಗೂ ಸ್ಫೂರ್ತಿಯಾಗಿದ್ದು, ಜ್ಞಾನ ಪಡೆಯಲು ವಯಸ್ಸು ಮುಖ್ಯವಲ್ಲ ಎಂಬುದನ್ನು ಅವರು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಆಕೆ ಶಾಲೆಗೆ ಹೋಗಲು ಆರಂಭಿಸಿದಾಗಿನಿಂದ ಆಕೆಯ ಗ್ರಾಮದ ಇತರ 25 ಮಹಿಳೆಯರೂ ಓದಲು ಬರುತ್ತಿದ್ದಾರೆ ಎಂದು ಸ್ಥಳೀಯ ಶಿಕ್ಷಕರು ತಿಳಿಸಿದ್ದಾರೆ ಎಂದಿದ್ದಾರೆ.
ಜಾಮೀನು ಸಿಕ್ಕರೂ 3 ವರ್ಷ ಜೈಲಿನಲ್ಲಿದ್ದ!; ಇಮೇಲ್ ನೋಡದ ಅಧಿಕಾರಿಗಳಿಗೆ ದಂಡ ವಿಧಿಸಿದ ಕೋರ್ಟ್..