ಬೆಳಗಾವಿ: ನಗರದ ವಿವಿಧೆಡೆ ಗಾಂಜಾ ಅಡ್ಡೆಗಳ ಮೇಲೆ ದಾಳಿ ನಡೆಸಿರುವ ಪೊಲೀಸರು 9 ಜನರನ್ನು ಬಂಧಿಸಿ 650 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಬೆಳಗಾವಿ ತಾಲೂಕಿನ ಹಲಗಾ ಗ್ರಾಮದ ಪಿರಾಜಿ ಯೇಸುಚೆ, ಉದ್ಯಮಭಾಗ ಪವನ ಕುಮಾರ ಪಾಟೀಲ, ಅನುಜ ಪಾಟೀಲ, ಅನಗೋಳದ ಮುಲಾದ ಖಾನಾಪುರೆ, ಸಮರ್ಥ ನಗರದ ರಾಜು ಹುಬ್ಬಳ್ಳಿ, ಮಾರ್ಕಂಡೇಯ ನಗರದ ಯಲ್ಲಪ್ಪ ಪೆಂಡಾರಿ, ಕಂಗ್ರಾಳಿ ಗಲ್ಲಿಯ ಪ್ರಭಾಕರ ದರವಂದರ, ಮಾರುತಿ ಇಂಚಲ ಬಂಧಿತರು.
ಹಿರೇಬಾಗೇವಾಡಿ, ಉದ್ಯಮಭಾಗ, ಮಾರ್ಕೇಟ್ ಪೊಲೀಸ್ ಠಾಣೆ ವ್ಯಾಪ್ತಿ ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿರುವ ಕುರಿತು ಸಾರ್ವಜನಿಕರಿಂದ ಬಂದ ದೂರಿನ ಮೇಲೆ ದಾಳಿ ನಡೆಸಿ ತಪ್ಪಿತಸ್ಥರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಅಲ್ಲದೇ, 30 ಸಾವಿರ ರೂ. ಮೌಲ್ಯದ ಗಾಂಜಾ ವಶಪಡಿಸಿಕೊಂಡಿದ್ದೇವೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿವೆ ಎಂದು ನಗರ ಪೊಲೀಸ್ ಆಯುಕ್ತ ಬೋರಸೆ ಭೂಷಣ ಗುಲಾಬರಾವ್ ತಿಳಿಸಿದ್ದಾರೆ.