85 ಪ್ರಕರಣ ಇತ್ಯರ್ಥ

ವಿರಾಜಪೇಟೆ: ಇಲ್ಲಿನ ಸಮುಚ್ಚಯ ನ್ಯಾಯಾಲಯ ಆವರಣದಲ್ಲಿ ಜು.1ರಿಂದ ಈವರೆಗೆ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಒಟ್ಟು 85 ಪ್ರಕರಣಗಳು ಇತ್ಯರ್ಥಗೊಂಡಿವೆ.

ವಿವಾಹ, ಮೋಟಾರು ಕಾಯ್ದೆ, ಹಣಕಾಸು ವಿಚಾರ, ಚೆಕ್ ಬೌನ್ಸ್, ರಾಷ್ಟ್ರೀಯ ಬ್ಯಾಂಕ್‌ಗಳ ಸಾಲದಲ್ಲಿ ಬಡ್ಡಿ ರಿಯಾಯಿತಿ ಪ್ರಕರಣವೂ ಇದರಲ್ಲಿ ಸೇರಿದ್ದು, ರಾಜಿ ಸಂಧಾನದ ಮೂಲಕ ಇತ್ಯರ್ಥ ಮಾಡಲಾಗಿದೆ.

ಅದಾಲತ್‌ನಲ್ಲಿ ಒಟ್ಟು 260 ಕಡತಗಳು ಬಂದಿದ್ದು, ಈ ಪೈಕಿ ನ್ಯಾಯ ಮಂಡಳಿ ಪ್ರಯತ್ನದಿಂದ 85 ಪ್ರಕರಣ ಮಾತ್ರ ಇತ್ಯರ್ಥಗೊಂಡಿವೆ. ಹಿರಿಯ, ಕಿರಿಯ ಶ್ರೇಣಿಯ ನ್ಯಾಯಾಧೀಶರು ಹಾಗೂ ವಕೀಲರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *