22.5 C
Bengaluru
Sunday, January 19, 2020

ಡಬ್ಬಿಂಗ್ ಕನ್ನಡ ಚಲನಚಿತ್ರೋದ್ಯಮಕ್ಕೆ ಅಪಾಯ: ಮುಖ್ಯಮಂತ್ರಿ ಚಂದ್ರು ಕಳವಳ

Latest News

ವೇಮನ ಒಬ್ಬ ಸಮಾಜ ಸುಧಾರಕ

ವಿಜಯಪುರ : ಜೀವನವೆಂಬ ಸಂತೆಯೊಳಗಿದ್ದುಕೊಂಡೇ ಸಂತನಾಗಿ ಬೆಳೆದ ಮಹಾಯೋಗಿ ವೇಮನ ಅವರು ಒಬ್ಬ ಸಮಾಜ ಸುಧಾರಕ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಹೇಳಿದರು. ನಗರದ ಕಂದಗಲ್...

ಪ್ರಾಚಾರ್ಯರ ಧೋರಣೆ ಖಂಡಿಸಿ ಪ್ರತಿಭಟನೆ

ಬಸವನಬಾಗೇವಾಡಿ: ಕಾಲೇಜಿನಲ್ಲಿ ವಿವೇಕಾನಂದರ ಜಯಂತಿ ಆಚರಣೆಗೆ ನಿರಾಕರಿಸಿದ್ದನ್ನು ಖಂಡಿಸಿ ಎಬಿವಿಪಿ ಕಾರ್ಯಕರ್ತರ ನೇತೃತ್ವದಲ್ಲಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ವಿದ್ಯಾರ್ಥಿಗಳು ಶನಿವಾರ...

ಹೆಲ್ಮೆಟ್ ಕಡ್ಡಾಯವಾಗಿ ಧರಿಸಿ: ಜಿಲ್ಲಾಧಿಕಾರಿ ಪಾಟೀಲ ಅಭಿಮತ

ವಿಜಯಪುರ : ಸರ್ಕಾರಿ ನೌಕರರು ಮತ್ತು ಶಾಲಾ ಕಾಲೇಜುಗಳಿಗೆ ಮಕ್ಕಳನ್ನು ಬಿಡಲು ಬರುವ ಪಾಲಕರು, ಕಾಲೇಜು ವಿದ್ಯಾರ್ಥಿಗಳು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವ ಕುರಿತಂತೆ...

ಪೋಲಿಯೋ ಲಸಿಕಾ ಕಾರ್ಯಕ್ರಮ

ರಾಣೆಬೆನ್ನೂರ: ಪೋಲಿಯೋ ಮುಕ್ತ ಭಾರತವನ್ನಾಗಿ ಮಾಡುವ ಉದ್ದೇಶದಿಂದ ಸಾರ್ವಜನಿಕರು ಆರೋಗ್ಯ ಇಲಾಖೆಯೊಂದಿಗೆ ಕೈ ಜೋಡಿಸಬೇಕು. ಮಕ್ಕಳಿಗೆ ತಪ್ಪದೇ ಪೋಲಿಯೋ ಲಸಿಕೆ ಹಾಕಿಸಬೇಕು ಎಂದು...

ಇಬ್ಬರು ಮನೆಗಳ್ಳರು ಖಾಕಿ ಬಲೆಗೆ

ಗದಗ: ಮನೆ ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಬಂಧಿಸುವಲ್ಲಿ ಗದಗ ಗ್ರಾಮೀಣ ಪೊಲೀಸರು ಯಶಸ್ವಿಯಾಗಿದ್ದಾರೆ. ನಗರದ ಸೆಟ್ಲಮೆಂಟ್ ನಿವಾಸಿಗಳಾದ ಸುರೇಶ...

ಧಾರವಾಡ: ಪರಭಾಷೆ ಚಲನಚಿತ್ರಗಳ ಡಬ್ಬಿಂಗ್, ರಿಮೇಕ್ ಮಾಡುವುದು ಭಾಷೆ, ಸಂಸ್ಕೃತಿಯ ಹಿತದೃಷ್ಟಿಯಿಂದ ಸರಿಯಲ್ಲ. ಚಿತ್ರರಂಗ ವ್ಯವಸ್ಥೆಯಲ್ಲಿ ಡಬ್ಬಿಂಗ್ ಹಾಗೂ ರಿಮೇಕ್ ಮಾಡುವುದರಿಂದ ಭಾಷೆಯ ಮೇಲೆ ಯಾವ ರೀತಿ ದುಷ್ಪರಿಣಾಮ ಬೀರಲಿದೆ ಎಂಬುವುದನ್ನು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶನಿವಾರ ಜರುಗಿದ ಕನ್ನಡ ಚಲನಚಿತ್ರ ಮತ್ತು ಕಿರುತೆರೆ’ ಗೋಷ್ಠಿಯಲ್ಲಿ ಅನಾವರಣಗೊಂಡಿತು.

“ಚಲನಚಿತ್ರ: ಹೊಸಬರು ತೋರಿದ ದಾರಿ” ಕುರಿತು ವಿಷಯ ಮಂಡಣೆ ಮಾಡಿದ ಬಿ.ಎಸ್. ಲಿಂಗದೇವರು, ಸಾಹಿತ್ಯ ಮತ್ತು ಸಿನಿಮಾ ಜೊತೆಗೆ ನಡೆದಿವೆ. ಆದರೂ, ಸಿನಿಮಾವನ್ನು ಜನರು ಸಾಹಿತ್ಯದ ಭಾಗ ಎಂದು ಒಪ್ಪಿಕೊಳ್ಳುತ್ತಿಲ್ಲ. ಆರಂಭದಲ್ಲಿ ಸಾಕಷ್ಟು ಕನ್ನಡ ಚಲನಚಿತ್ರಗಳು ಬೇರೆ ಭಾಷೆಗೆ ಡಬ್ಬಿಂಗ್, ರಿಮೇಕ್ ಆದವು. ಇದರಿಂದ ಕನ್ನಡ ಸಂಸ್ಕೃತಿ ಪಸರಿಸಿತ್ತು. 1995ರಿಂದ ಹಿಂಸೆಯನ್ನು ಬಿಂಬಿಸುವ ಚಿತ್ರಗಳು ಹೆಚ್ಚಾದವು. ಕೆಲ ತಂತ್ರಜ್ಞಾನದಿಂದ ಸಿನಿಮಾಗಳು ಬಿಡುಗಡೆಯಾಗುವ ಮೊದಲೇ ಪ್ರೇಕ್ಷರ ಕೈಸೇರುತ್ತಿವೆ. ಡಿಜಿಟಲ್ ತಂತ್ರಜ್ಞಾನದಿಂದ ಹೊಸ ಪ್ರೇಕ್ಷಕರು ಸಿಗುತ್ತಿದ್ದಾರೆ. ಇದರಿಂದ ಜಗತ್ತಿನ ಯಾವುದೇ ಭಾಗದಲ್ಲಿದ್ದರೂ ಸಿನಿಮಾ ವೀಕ್ಷಿಸಬಹುದಾಗಿದೆ. ಇತ್ತೀಚೆಗೆ ಸಿನಿಮಾದಲ್ಲಿ ಕಥೆ ಹೇಳುವ ರೀತಿ ಬದಲಾಗಿದೆ. ವ್ಯಾಪಾರ ಮತ್ತು ಪರ್ಯಾಯ ವರ್ಗವಾಗಿ ವಿಂಗಡಿಸಲಾಗಿದೆ ಎಂದರು.

ಜನರ ಹಿತದೃಷ್ಟಿಯನ್ನಿಟ್ಟುಕೊಂಡು ಸಿನಿಮಾ ಪ್ರದರ್ಶನ ಕಾಣಬೇಕು. ನಾನು ಅವನಲ್ಲ ಅವಳು ಸಿನಿಮಾ ವಿಶಿಷ್ಟ ರೀತಿಯಲ್ಲಿ ಮೂಡಿಬಂದಿದೆ. ಇದನ್ನು ಯುವಕರು ಸಹ ಒಪ್ಪಿಕೊಂಡರು. ಬದಲಾದ ಪರಿಸ್ಥಿತಿಗೆ ತಕ್ಕಂತೆ ಆಧುನಿಕ ತಂತ್ರಜ್ಞಾನಕ್ಕೆ ಹೊಂದಿಕೊಂಡು ಪ್ರಾದೇಶಿಕ ಭಾಷೆಯನ್ನು ರಕ್ಷಣೆ ಮಾಡುವ ದೃಷ್ಟಿಯಿಂದ ಚಿತ್ರ ನಿರ್ವಿುಸಬೇಕು ಎಂದು ಲಿಂಗದೇವರು ಕಿವಿಮಾತು ಹೇಳಿದರು.

ಕಿರುತೆರೆ ಮತ್ತು ಸಾಮಾಜಿಕ ಸ್ವಾಸ್ಥ್ಯತೆ ವಿಷಯದ ಬಗ್ಗೆ ಪಿ. ಶೇಷಾದ್ರಿ ಮಾತನಾಡಿ, ಸಿನಿಮಾವನ್ನು ನೋಡದ ಜನರು ನಮ್ಮ ನಡುವೆ ಇದ್ದಾರೆ. ಆದರೆ, ಟಿವಿ ಮಾಧ್ಯಮವನ್ನು ನೋಡದವರು ಯಾರೂ ಇಲ್ಲ. ಟಿವಿ ಬಂದು ಕೇವಲ 35 ವರ್ಷದಲ್ಲೇ ಜನಪ್ರಿಯತೆ ಗಳಿಸಿತು. ಆದ್ದರಿಂದ ಟಿವಿಯಲ್ಲಿ ಸಾಮಾಜಿಕ ಜವಬ್ದಾರಿ ಅರಿತು ಕಾರ್ಯಕ್ರಮ ಮಾಡುತ್ತಿದ್ದಾರೆ. ಜತೆಗೆ ಕಲಾವಿದರಿಗೂ ಸಾಮಾಜಿಕ ಜವಾಬ್ದಾರಿ ಇರುತ್ತದೆ. ಧಾರಾವಾಹಿಗಳ ಪ್ರಭಾವದಿಂದ ಮಹಿಳೆಯರನ್ನು ದೃಶ್ಯ ಮಾಧ್ಯಮಗಳು ಟಿಆರ್​ಪಿ ಸರಕನ್ನಾಗಿ ಮಾಡಿಕೊಂಡಿವೆ. ಮೊದಲು 13 ಕಂತಿನ ಧಾರಾವಾಹಿಗಳಿದ್ದವು. ಈಗ ಸಾವಿರ ಕಂತಿನವರೆಗೂ ಧಾರಾವಾಹಿಗಳು ನಡೆಯುತ್ತವೆ. ಇವುಗಳನ್ನು ವೀಕ್ಷಿಸುತ್ತಿರುವ ಜನರಲ್ಲಿ ಸಂಬಂಧಗಳ ಭಾವನೆ ಸಹ ಬದಲಾಗಿದೆ. ಆದ್ದರಿಂದ ಟಿವಿ ಮತ್ತು ಮೊಬೈಲ್​ಗಳ ನಡುವೆ ಸಾಧ್ಯವಾದಷ್ಟು ಅಂತರ ಕಾಯ್ದುಕೊಳ್ಳುವುದು ಉತ್ತಮ ಎಂದು ಶೇಷಾದ್ರಿ ತಿಳಿಸಿದರು.

ಎನ್.ಆರ್. ನಂಜುಂಡೇಗೌಡ ಡಬ್ಬಿಂಗ್, ರಿಮೇಕ್ ಪ್ರದರ್ಶನ ಮಂದಿರಗಳು ಇತ್ಯಾದಿ: ಸವಾಲುಗಳು ಬಗ್ಗೆ ವಿಷಯ ಮಂಡಿಸಿದರು. ಡಬ್ಬಿಂಗ್​ನಿಂದ ಭಾಷೆಯ ಸಂಸ್ಕೃತಿ ಕೆಡುತ್ತದೆ ಎಂದು ಅದನ್ನು ವಿರೋಧಿಸಲಾಯಿತು. ಡಬ್ಬಿಂಗ್​ಗೆ ಕಾನೂನಿನ ಬಲ ಇರುವುದರಿಂದ ಅದರ ಹಾವಳಿ ಹೆಚ್ಚಿದೆ. ಡಬ್ಬಿಂಗ್​ನಿಂದ ಪ್ರಾದೇಶಿಕ ಭಾಷೆಗೆ ಧಕ್ಕೆಯಾಗುವ ಸಾಧ್ಯತೆಯಿದೆ. ಅಷ್ಟೇ ಅಲ್ಲ, ಕನ್ನಡ ಚಲನಚಿತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಲಾವಿದರು ನಿರುದ್ಯೋಗಿಗಳಾಗುತ್ತಾರೆ. ಈ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತನೆ ಮಾಡಬೇಕಿದೆ. ರಿಮೇಕ್​ನಿಂದ ತವರು ಭಾಷೆಯನ್ನು ಮಾತನಾಡುವ ಪದ್ಧತಿ ಬದಲಾಗಿದೆ. ಆದ್ದರಿಂದ ರಿಮೇಕ್ ಚಿತ್ರಗಳು ಬೇಡ ಎಂದು ಸಲಹೆ ನೀಡಿ, ಸರ್ಕಾರ ಸಣ್ಣ ಚಿತ್ರಮಂದಿರ ಸ್ಥಾಪನೆಗೆ ಸಬ್ಸಿಡಿ ನೀಡುತ್ತಿದೆ. ಇದರ ಸದುಪಯೋಗವನ್ನು ಜನತೆ ಪಡೆದುಕೊಳ್ಳಬೇಕೆಂದು ನಂಜುಂಡೇಗೌಡ ಹೇಳಿದರು.

ಗೋಷ್ಠಿ ಅಧ್ಯಕ್ಷತೆ ವಹಿಸಿ ಮುಖ್ಯಮಂತ್ರಿ ಚಂದ್ರು ಮಾತನಾಡಿ, ಸಾಹಿತ್ಯವಿಲ್ಲದೆ ಸಿನಿಮಾ ಮಾಡಲು ಸಾಧ್ಯವಿಲ್ಲ. ಸಿನಿಮಾಗಳನ್ನು ಒಗ್ಗಟ್ಟಿನಿಂದ ಮಾಡಬೇಕು. ಜನರು ನಾವು ಕೊಟ್ಟಿದ್ದನ್ನು ಸ್ವೀಕರಿಸಿ, ಅಳವಡಿಸಿಕೊಳ್ಳುತ್ತಾರೆ. ಆದ್ದರಿಂದ ಎಚ್ಚರದಿಂದ ಸಿನಿಮಾ ಮಾಡಬೇಕು. ಡಬ್ಬಿಂಗ್, ರಿಮೇಕ್ ವಿಷಯ ಕೋರ್ಟ್​ನಲ್ಲಿ ಇರುವುದರಿಂದ ಅದನ್ನು ವಿರೋಧಿಸುವುದು ಕಷ್ಟವಾಗಿದೆ. ರಿಮೇಕ್ ಪದ್ಧತಿ ನಮ್ಮ ಸಂಪ್ರದಾಯವನ್ನು ಕೊಲೆ ಮಾಡುತ್ತದೆ. ನಾಟಕ, ಜಾತ್ರೆಯ ಸಂಸ್ಕೃತಿ ಮರೆಯಾಗಿದೆ. ದೇಶದಲ್ಲಿ ಪ್ರತಿವರ್ಷ 3500 ಚಲನಚಿತ್ರ ಬಿಡುಗಡೆಯಾಗುತ್ತವೆ. ಅದರಲ್ಲಿ 500 ಡಬ್ಬಿಂಗ್ ಚಿತ್ರಗಳೇ ಆಗಿವೆ. ಡಬ್ಬಿಂಗ್ ಬಗ್ಗೆ ರ್ಸಾಜನಿಕರ ಅಭಿಪ್ರಾಯ ಮತ್ತು ಕೇಂದ್ರ ಸರ್ಕಾರದ ಮಧ್ಯಸ್ಥಿಕೆ ಅಗತ್ಯವಿದೆ. ದೃಶ್ಯ ಮಾಧ್ಯಮದಲ್ಲಿ ಬರುವ ರಿಯಾಲಿಟಿ ಶೋಗಳಿಂದ ಉದಯೋನ್ಮುಖ ಪ್ರತಿಭೆಗಳು ಸಮಾಜದಲ್ಲಿ ಮುನ್ನೆಲೆಗೆ ಬರಲು ಸಾಧ್ಯವಾಗಿದೆ ಎಂದರು.

ಕಾನೂನು ಬಾಹಿರ ಹಣಗಳಿಕೆ ಅಪಾಯ

ಅಧಿಕ ಹಣ ಬರುತ್ತದೆ ಎಂದು ಕೆಲವರು ಲೆಕ್ಕಾಚಾರ ಹಾಕಿ ಡಬ್ಬಿಂಗ್ ಸಿನಿಮಾಗಳಲ್ಲಿ ನಟಿಸುತ್ತಾರೆ. ಕಲಾವಿದರು ಹಣದ ವ್ಯಾಮೋಹಕ್ಕೆ ಒಳಗಾಗುವುದರಿಂದ ತೆರಿಗೆ ಪಾವತಿಸಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಐಟಿ ಅಧಿಕಾರಿಗಳ ಕಣ್ಣು ಕಲಾವಿದರ ಮನೆಗಳ ಮೇಲೆ ಬೀಳುತ್ತದೆ. ಹೀಗಾಗಿ ಸಮಯಕ್ಕೆ ಸರಿಯಾಗಿ ನಿಗದಿತ ತೆರಿಗೆ ಮೊತ್ತ ಪಾವತಿಸಿದರೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಮುಖ್ಯಮಂತ್ರಿ ಚಂದ್ರು ಹೇಳುವ ಮೂಲಕ ಸ್ಯಾಂಡಲ್​ವುಡ್ ನಟರು, ನಿರ್ವಪಕರ ಮನೆ ಮೇಲಿನ ಐಟಿ ದಾಳಿಯನ್ನು ಪರೋಕ್ಷವಾಗಿ ಕುಟುಕಿದರು.

ವಿಡಿಯೋ ನ್ಯೂಸ್

Fact Check| ಮಹಿಳೆ, ಮಕ್ಕಳ ಮೇಲೆ ಪೊಲೀಸ್​ ದೌರ್ಜನ್ಯ: ವೈರಲ್...

ನವದೆಹಲಿ: ಪುರುಷ, ಮಹಿಳೆ ಹಾಗೂ ಮಕ್ಕಳ ಮೇಲೆ ಪೊಲೀಸ್​ ಸಿಬ್ಬಂದಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ರಾಷ್ಟ್ರೀಯ ಪೌರತ್ವ ನೋಂದಣಿ ಅಡಿಯಲ್ಲಿ ಜನರನ್ನು ಮನೆಯಿಂದ ಒಕ್ಕಲೆಬ್ಬಿಸಲಾಗುತ್ತಿದೆ ಎಂದು...

VIDEO| ಉಪಮುಖ್ಯಮಂತ್ರಿಗಳ ಕೈಬಿಡುವ ವಿಚಾರ ವರಿಷ್ಠರಿಗೆ ಬಿಟ್ಟದ್ದು, ಸಿಎಂ ವಾಪಸ್​...

ಬೆಂಗಳೂರು: ಹಾಲಿ ಇರುವ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಕೈ ಬಿಟ್ಟು ಹೊಸ ಡಿಸಿಎಂಗಳ ನೇಮಕ ವಿಚಾರವಾಗಿ ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಡಿಸಿಎಂ ಡಾ. ಅಶ್ವತ್ಥ...

VIDEO| ವಂದೇ ಮಾತರಂ ಹೇಳದವರಿಗೆ ಭಾರತದಲ್ಲಿ ಬದುಕುವುದಕ್ಕೆ ಹಕ್ಕಿಲ್ಲ: ಕೇಂದ್ರ...

ಅಹಮದಾಬಾದ್​: ಒಂದೊಮ್ಮೆ ನೀವು ವಂದೇಮಾತರಂ ಹೇಳುವುದಿಲ್ಲ ಎಂದಾದರೆ ಭಾರತದಲ್ಲಿ ಬದುಕುವ ಹಕ್ಕು ಇರುವುದಿಲ್ಲ ಎಂದು ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ಸೂರತ್​ನಲ್ಲಿ ಹೇಳಿದ್ದು ಈಗ ವಿವಾದಕ್ಕೀಡಾಗಿದೆ.    ಅವರು ಶನಿವಾರ ಪೌರತ್ವ...

VIDEO| ಜಮ್ಮು-ಕಾಶ್ಮೀರದ ಉಧಂಪುರದಲ್ಲೊಂದು ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ !

ಉಧಂಪುರ: ಜಮ್ಮು-ಕಾಶ್ಮೀರದ ಉಧಂಪುರದಲ್ಲಿ ಇದೇ ಮೊದಲ ಬಾರಿಗೆ ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ ಕಾರ್ಯಾಚರಣೆ ಆರಂಭಿಸಿದೆ. ಈ ವಿಶೇಷ ಜುವೆನಿಲ್ ಪೊಲೀಸ್ ಘಟಕವನ್ನು ಭಾನುವಾರ ಉದ್ಘಾಟಿಸಲಾಗಿದೆ. ಮಕ್ಕಳಲ್ಲಿ ಪೊಲೀಸ್ ಠಾಣೆ...

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...