ಅಕ್ಷರ ಜಾತ್ರೆ 2019| ವಿಜಯವಾಣಿ ವಿಶೇಷ ಸಂಚಿಕೆ ‘ನುಡಿ ತೇರು’ ಬಿಡುಗಡೆ ಮಾಡಿದ ಸಮ್ಮೇಳನಾಧ್ಯಕ್ಷ ಕಂಬಾರ

ಧಾರವಾಡ: 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ವಿಜಯವಾಣಿ ವತಿಯಿಂದ ಹೊರತಂದಿರುವ ನುಡಿ ತೇರು ವಿಶೇಷ ಸಂಚಿಕೆಯನ್ನು ಸಮ್ಮೇಳನ ಸರ್ವಾಧ್ಯಕ್ಷ ಚಂದ್ರಶೇಖರ ಕಂಬಾರ ಅವರು ಶುಕ್ರವಾರ ಬಿಡುಗಡೆ ಮಾಡಿದರು.

ನಗರದ ಖಾಸಗಿ ಹೋಟೆಲ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಚಿಕೆ ಬಿಡುಗಡೆ ಮಾಡಿದ ಕಂಬಾರ ಅವರು, “ಸಂಚಿಕೆ ಅತ್ಯಂತ ಉತ್ತಮವಾಗಿ ಮೂಡಿ ಬಂದಿದೆ. ಜಿಲ್ಲೆಯ ಸಮಗ್ರ ಮಾಹಿತಿ ಒಳಗೊಂಡ ಈ ಸಂಚಿಕೆ ಸಂಗ್ರಹಣೆಗೆ ಯೋಗ್ಯವಾಗಿದೆ,” ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಧಾರವಾಡ ಜಿಲ್ಲಾ ವರದಿಗಾರ ಮಂಜುನಾಥ ಅಂಗಡಿ, ವರದಿಗಾರ ವಿಕ್ರಮ ನಾಡಿಗೇರ, ಜಾಹೀರಾತು ವಿಭಾಗದ ಹಿರಿಯ ಅಧಿಕಾರಿ ಶಿವಕುಮಾರ ಕೆರೂರ, ರಾಹುಲ್ ಸೊಗಲದ ದಿಗ್ವಿಜಯ ಜಿಲ್ಲಾ ವರದಿಗಾರ ಡಿ.ವಿ. ಕಮ್ಮಾರ, ಪ್ರಸಾರಂಗ ವಿಭಾಗದ ರಾಜು ಕುಂಬಾರ, ದಿಗ್ವಿಜಯ ನ್ಯೂಸ್​ನ ಮುಖ್ಯ ಆ್ಯಂಕರ್ ಶ್ರೀಲಕ್ಷ್ಮೀ ರಾಜಕುಮಾರ ಇತರರು ಇದ್ದರು.