More

  ಮೃತ ಮಗನ ಶವದೊಂದಿಗೆ ವೃದ್ಧೆ ವಾಸ! ಶಂಕಿಸಿ ಮನೆ ಬಾಗಿಲು ಒಡೆದಾಗ ಕಾದಿತ್ತು ಬೆಚ್ಚಿಬೀಳಿಸುವ ಸಂಗತಿ

  ಅಗರ್ತಲಾ: ಹಾಸಿಗೆ ಹಿಡಿದಿದ್ದ 82 ವರ್ಷದ ವೃದ್ಧೆಯೊಬ್ಬರು ಬರೋಬ್ಬರಿ ಎಂಟು ದಿನಗಳ ಕಾಲ ತಮ್ಮ ಮೃತ ಮಗನ ಶವದೊಂದಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ನಿವಾಸದ ಮತ್ತೊಂದು ಕೋಣೆಯಲ್ಲಿ ಮಹಿಳೆಯ ಪುತ್ರ ಶವವಾಗಿ ಪತ್ತೆಯಾಗಿರುವುದು ಪೊಲೀಸರಿಗೆ ಭಾರಿ ಅಚ್ಚರಿ ತಂದಿದೆ. ಇದಕ್ಕೆ ಅಸಲಿ ಕಾರಣವೇನು ಎಂಬುದು ಪೊಲೀಸರ ತನಿಖೆಯಲ್ಲಿ ಹೊರಬಿದ್ದಿದೆ.

  ಇದನ್ನೂ ಓದಿ: ಭಾರತದ ಮೊದಲ ನೀರೊಳಗಿನ ಮೆಟ್ರೋ ಉದ್ಘಾಟನೆಗೆ ದಿನಾಂಕ ಫಿಕ್ಸ್​; ಹೀಗಿದೆ ಸುರಂಗದ ವಿಶೇಷತೆ

  ಅಗರ್ತಲಾದ ಶಿವನಗರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯರಲ್ಲಿ ಭಾರೀ ಆತಂಕವನ್ನು ಸೃಷ್ಟಿಮಾಡಿದೆ. ಮೂರು ವರ್ಷಗಳ ಹಿಂದೆ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಸೊಸೆ ಮನೆ ಬಿಟ್ಟು ಹೋದ ನಂತರ ಕಲ್ಯಾಣಿ ಸುರ್ ಚೌಧರಿ ತನ್ನ ಮಗ ಸುಧೀರ್ (54) ಜತೆಯೇ ವಾಸಿಸುತ್ತಿದ್ದರು. ಆದರೆ, ಹಾಸಿಗೆ ಹಿಡಿದ ವೃದ್ಧೆಗೆ ಮಗನ ಬೆಳವಣಿಗೆ ಗಮನಿಸಲು ಅಸಾಧ್ಯವಾಗಿದೆ. ಪತ್ನಿಯೊಂದಿಗೆ ಉಂಟಾದ ಕಲಹದಿಂದ ಬೇಸತ್ತ ಸುಧೀರ್​, ಅಧಿಕ ಪ್ರಮಾಣದಲ್ಲಿ ಮದ್ಯ ಸೇವನೆ ಮಾಡಿದ್ದಾರೆ. ಅವರ ಮನೆಯಿಂದ ದುರ್ವಾಸನೆ ಬರಲಾರಂಭಿಸಿದಾಗ ಅಕ್ಕಪಕ್ಕದವರು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

  “ನಾವು ಮಾಹಿತಿಯ ಮೇರೆಗೆ ಸ್ಥಳಕ್ಕೆ ಆಗಮಿಸಿದಾಗ ಮಧ್ಯಾಹ್ನ 3 ಗಂಟೆಯಾಗಿತ್ತು. ನಮ್ಮ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಅವರ ಸಮ್ಮುಖದಲ್ಲಿ ನಿವಾಸಕ್ಕೆ ಹೋದೆವು. ಅಲ್ಲಿ ತನ್ನ ಹಾಸಿಗೆಯ ಮೇಲೆ ಸುಧೀರ್​ ಶವ ಪತ್ತೆಯಾಯಿತು” ಎಂದು ಮಹಾರಾಗಂಗ್ ಬಜಾರ್ ಪೊಲೀಸ್ ಔಟ್‌ಪೋಸ್ಟ್‌ನ ಪ್ರಭಾರ ಅಧಿಕಾರಿ (OC) ಮೃಣಾಲ್ ಪಾಲ್ ತಿಳಿಸಿದರು.

  ಇದನ್ನೂ ಓದಿ: ಈ ರಾಶಿಯವರಿಗೆ ಉತ್ತಮ ಅವಕಾಶಗಳು ಪ್ರಾಪ್ತಿಯಾಗುವ ಸಾಧ್ಯತೆ: ನಿತ್ಯಭವಿಷ್ಯ

  ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಸಮೀಪದ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದ್ದು, ಮನೆಯ ಇನ್ನೊಂದು ಕೋಣೆಯಲ್ಲಿ ಇವರು ವಾಸಿಸುತ್ತಿದ್ದರು. ಶವ ಪತ್ತೆಯಾದ ಕೊಠಡಿಯಲ್ಲಿ ಬಿದ್ದಿದ್ದ ಸಾಕಷ್ಟು ಮದ್ಯದ ಖಾಲಿ ಬಾಟಲಿಗಳನ್ನು ಸದ್ಯ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

  “ದೇಹದ ಮೇಲೆ ಯಾವುದೇ ಗಾಯದ ಗುರುತು ಇರಲಿಲ್ಲ. ವೈವಾಹಿಕ ವಿವಾದದ ಕಾರಣ ಮಾನಸಿಕವಾಗಿ ನೊಂದಿದ್ದ ವ್ಯಕ್ತಿ ಅತಿಯಾದ ಮದ್ಯ ಸೇವನೆಯಿಂದ ಸಾವನ್ನಪ್ಪಿದ್ದಾನೆ ಎಂದು ನಾವು ಶಂಕಿಸುತ್ತೇವೆ. ಈಗಾಗಲೇ ಪ್ರಕರಣದ ತನಿಖೆಯನ್ನು ಪ್ರಾರಂಭಿಸಿದ್ದೇವೆ” ಎಂದು ಹಿರಿಯ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ,(ಏಜೆನ್ಸೀಸ್).

  ‘ಗೊಂದಲ, ಹೋರಾಟ, ಪ್ರಯತ್ನ’….: ವಿಚ್ಛೇದನ ನೆನೆದು ಸಾನಿಯಾ ಭಾವುಕ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts