More

    80620 ಕ್ಯೂಸೆಕ್ ನೀರು ಕೃಷ್ಣೆಗೆ

    ಕೊಡೇಕಲ್: ಸತತವಾಗಿ 15 ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಬಸವಸಾಗರ ಜಲಾಶಯಕ್ಕೆ ಒಳಹರಿವು ಹೆಚ್ಚಾದ ಕಾರಣ ಜಲಾಶಯದ 13 ಮುಖ್ಯ ಗೇಟ್ಗಳ ಮೂಲಕ ಸೋಮವಾರ 80620 ಕ್ಯೂಸೆಕ್ ನೀರು ಬಿಡಲಾಯಿತು.

    ಅಣೆಕಟ್ಟು ವಿಭಾಗದ ಅಧಿಕಾರಿಗಳು ಜಲಾಶಯದ ನೀರಿನ ಸಂಗ್ರಹ ಮಟ್ಟ ಕಾಯ್ದುಕೊಳ್ಳುವ ಮೂಲಕ ನದಿಗೆ ನೀರು ಹರಿಸುತ್ತಿದ್ದರು. 5ರಂದು ಜಲಾಶಯಕ್ಕೆ ನೀರಿನ ತೀರಾ ಕಡಿಮೆಯಾಗಿದ್ದರಿಂದ ನದಿಗೆ ಹರಿಸುವ ನೀರು ಸ್ಥಗಿತಗೊಳಸಲಾಗಿತ್ತು. ಆದರೆ ನಾಲ್ಕು ದಿನಗಳಿಂದ ಜಲಾಶಯದ ಹಿನ್ನೀರಿನ ವ್ಯಾಪ್ತಿಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಹಾಗೂ ಆಲಮಟ್ಟಿ ಜಲಾಶಯದಿಂದ ನೀರು ಹರಿಸುತ್ತಿರುವ ಕಾರಣ ಬಸವಸಾಗರಕ್ಕೆ ಭಾನುವಾರ ರಾತ್ರಿಯಿಂದ 10 ಕ್ಯೂಸೆಕ್ ಒಳಹರಿವು ಹೆಚ್ಚಳವಾಗಿದೆ.

    492.25 ಮೀ. ಗರಿಷ್ಠ ನೀರಿನ ಸಂಗ್ರಹವಿರುವ ಜಲಾಶಯದ ನೀರಿನ ಸಂಗ್ರಹ 491.76ಮೀ ತಲುಪಿದೆ ಇದರಿಂದಾಗಿ ಜಲಾಶಯದಲ್ಲಿ 31.05 ಟಿಎಂಸಿ ನೀರು ಸಂಗ್ರಹವಾಗಿದೆ.
    ಜಲಾಶಯಕ್ಕೆ ಒಳಹರಿವು ಹೆಚ್ಚಾಗುತ್ತಿರುವ ಕಾರಣ ಕೃಷ್ಣೆಗೆ ಬಿಡುವ ನೀರಿನಲ್ಲಿ ಕೂಡ ಹೆಚ್ಚಳವಾಗಲಿದೆ. ಇದರಿಂದ ನದಿ ತೀರದ ಗ್ರಾಮಸ್ಥರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಅಣೆಕಟ್ಟು ವಿಭಾಘದ ಪ್ರಭಾರಿ ಕಾರ್ಯನಿವರ್ಾಹಕ ಅಭಿಯಂತರ ಎಂ.ಪ್ರಕಾಶ ಮನವಿ ಮಾಡಿದ್ದಾರೆ. ಅಲ್ಲದೆ ಯಾವುದೇ ಕಾರಣಕ್ಕೂ ಮೀನುಗಾರರು ನದಿಗೆ ಇಳಿಯದಂತೆ ಎಚ್ಚರಿಕೆ ನೀಡಿದ್ದಾರೆ.

    ಆಲಮಟ್ಟಿಯಿಂದ 1ಲಕ್ಷ ಕ್ಯೂಸೆಕ್ ನೀರು ಬಿಡುವ ಸಾಧ್ಯತೆ ಇರುವುದರಿಂದ ಬಸವಸಾಗರ ಜಲಾಶಯದಲ್ಲೂ ಕೂಡ ಒಳಹರಿವು ಗಮನಿಸಿ ಕೃಷ್ಣಾ ನದಿಗೆ ಬಿಡುವ ನೀರಿನಲ್ಲಿ ರಾತ್ರಿ 10 ಗಂಟೆ ನಂತರ 1 ಲಕ್ಷ ಕ್ಯೂಸೆಕ್ ನೀರು ಬಿಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts