8 ವರ್ಷದ ಬಾಲಕಿ ಮೇಲೆ 5 ಅಪ್ರಾಪ್ತರಿಂದ ಸಾಮೂಹಿಕ ಅತ್ಯಾಚಾರ

ಡೆಹರಾಡೂನ್‌(ಉತ್ತರಾಖಂಡ್) : 8 ವರ್ಷದ ಬಾಲಕಿ ಮೇಲೆ ಐವರು ಅಪ್ರಾಪ್ತರು ಅತ್ಯಾಚಾರ ಎಸಗಿರುವ ಘಟನೆ ಡೆಹರಾಡೂನ್‌ನ ಸಾಹಸ್‌ಪುರದಲ್ಲಿ ನಡೆದಿದೆ.

ಜೂ. 12ರಂದು ಮನೆಯಿಂದ ಹೊರಗಡೆ ಅಪ್ರಾಪ್ತೆ ಆಟವಾಡುತ್ತಿದ್ದಾಗ ಪಾಲಕರು ಮನೆಯ ಒಳಗಡೆ ಕೆಲಸದಲ್ಲಿ ಮಗ್ನರಾಗಿರುವುದನ್ನು ಗಮನಿಸಿದ ಐವರು ಆರೋಪಿಗಳು ಅಪ್ರಾಪ್ತೆಯನ್ನು ಫುಸಲಾಯಿಸಿ ಬೇರೆ ಸ್ಥಳಕ್ಕೆ ಕರೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

ಈ ಕುರಿತು ಬಾಲಕಿ ಪಾಲಕರಿಗೆ ವಿಷಯ ತಿಳಿಸಿದಾಗ ಆರೋಪಿಗಳ ವಿರುದ್ಧ ದೂರನ್ನು ದಾಖಲಿಸಲಾಗಿದೆ. ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ಕೈಗೊಂಡಿದ್ದಾರೆ. (ಏಜೆನ್ಸೀಸ್)