ಶಿಕ್ಷಕನಿಂದ ಒದೆ ತಿಂದ 8 ವರ್ಷದ ಬಾಲಕ ಸಾವು

ಬಾಂದಾ: ಖಾಸಗಿ ಶಾಲೆಯೊಂದರಲ್ಲಿ 8 ವರ್ಷದ ವಿದ್ಯಾರ್ಥಿಯನ್ನು ಹೊಡೆದ ಬಳಿಕ ಆತ ಮೃತಪಟ್ಟಿದ್ದು, ಶಿಕ್ಷಕನ ವಿರುದ್ಧ ದೂರು ದಾಖಲಾಗಿದೆ.

ಸಾದಿಮಾದಾನ್‌ಪುತ್‌ ಗ್ರಾಮದಲ್ಲಿ ಅರ್ಬಾಜ್‌ ಎಂಬ ವಿದ್ಯಾರ್ಥಿಗೆ ಶಿಕ್ಷಕ ಜೈರಾಜ್‌ ಎಂಬವರು ಹೊಡೆದಿದ್ದಾರೆ. ಇದರಿಂದ ಅಸ್ವಸ್ಥನಾಗಿದ್ದ ಬಾಲಕನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಶುಕ್ರವಾರ ಮೃತಪಟ್ಟಿದ್ದಾನೆ ಎಂದು ಹಿರಿಯ ಪೊಲೀಸ್‌ ಅಧಿಕಾರಿ ಎಲ್‌. ಬಿ.ಕುಮಾರ್‌ ಪಾಲ್‌ ತಿಳಿಸಿದ್ದಾರೆ.

ಪಾಲಕರು ಈ ಕುರಿತು ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ. (ಏಜೆನ್ಸೀಸ್)