ನಿಯಂತ್ರಣ ತಪ್ಪಿ ಗುಡಿಸಲಿಗೆ ನುಗ್ಗಿದ ಟ್ರಕ್​: ಎಂಟು ಮಂದಿ ಸಾವು

ಲಖನೌ: ಟ್ರಕ್​ವೊಂದು ಗುಡಿಸಲಿಗೆ ನುಗ್ಗಿ ಎಂಟು ಮಂದಿ ಮೃತಪಟ್ಟಿರುವ ಘಟನೆ ಉತ್ತರಪ್ರದೇಶದ ವಾಂಡುಲಿ ಜಿಲ್ಲೆಯಲ್ಲಿ ನಡೆದಿದೆ.

ಟ್ರಕ್​ ಚಾಲಕ ನಿಯಂತ್ರಣ ಕಳೆದುಕೊಂಡು ಇಲಿಯಾ ಹಳ್ಳಿಯ ರಸ್ತೆಬದಿಯಲ್ಲಿದ್ದ ಗುಡಿಸಲಿಗೆ ನುಗ್ಗಿ ಈ ದುರಂತ ಸಂಭವಿಸಿದೆ. ಘಟನೆಯಲ್ಲಿ ಇನ್ನು ಅನೇಕರು ಗಾಯಗೊಂಡಿದ್ದಾರೆ ಎಂದು ಹಿರಿಯ ಪೊಲೀಸ್​ ಅಧಿಕಾರಿ ದೇವೇಂದ್ರ ನಾಥ್​ ತಿಳಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿ, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ಘಟನಾ ಸ್ಥಳ ಪರಿಶೀಲಿಸಿದ್ದಾರೆ. (ಏಜೆನ್ಸೀಸ್)