8 ಎಕರೆ ಕಬ್ಬುಬೆಂಕಿಗಾಹುತಿ

ಗುತ್ತಲ: ಆಕಸ್ಮಿಕ ಬೆಂಕಿ ತಗುಲಿ 8 ಎಕರೆಯಲ್ಲಿ ಬೆಳೆದಿದ್ದ ಕಬ್ಬು ಸುಟ್ಟ ಘಟನೆ ಸಮೀಪದ ಬೆಳವಿಗಿ-ನೀರಲಗಿ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಸಂಭವಿಸಿದೆ.

ನೀರಲಗಿ ಗ್ರಾಮದ ಎಚ್.ಟಿ. ರಡ್ಡೇರಗೆ ಸೇರಿದ 5 ಎಕರೆ, ಬೆಳವಿಗಿ ಗ್ರಾಮದ ಶೇಖರಗೌಡ ಪಾಟೀಲ ಅವರ 3 ಎಕರೆಯಲ್ಲಿ ಬೆಳೆದಿದ್ದ ಕಬ್ಬಿನ ಬೆಳೆಗೆ ಆಕಸ್ಮಿಕ ಬೆಂಕಿ ತಗುಲಿದೆ. ಆಗ ರೈತರು ನೀರೆರಚಿ ಆರಿಸಿದರೂ ಗಾಳಿಗೆ ಬೆಂಕಿ ವ್ಯಾಪಿಸಿತು. ನಂತರ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿತು. ಇದರಿಂದ 8 ಎಕರೆಯಲ್ಲಿನ 560 ಟನ್ ಕಬ್ಬು ಸುಟ್ಟು 4 ಲಕ್ಷ ರೂ.ಗಿಂತ ಹೆಚ್ಚು ಹಾನಿಯಾಗಿದೆ.