ಸಿನಿಮಾ

8 ಗಂಟೆಯಿಂದ ವೋಟ್ ಕೌಂಟಿಂಗ್ :ಸಕಲ ಸಿದ್ದತೆ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ

ಹಾಸನ: ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇಂದು ಬೆಳಿಗ್ಗೆ 7 ಗಂಟೆಗೆ ಸ್ಟ್ರಾಂಗ್ ರೂಂ ತೆರೆಯಲಿದ್ದು, 8 ಗಂಟೆಗೆ ಮತ ಎಣಿಕೆ ಕಾರ್ಯ ಪ್ರಾರಂಭವಾಗಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ತಿಳಿಸಿದರು.
ನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿಗೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ಮತ ಎಣಿಕೆ ಕೇಂದ್ರಗಳನ್ನು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿದ್ದು, ಪ್ರತಿ ಕ್ಷೇತ್ರಗಳ ಮತ ಎಣಿಕೆಗೆ 14 ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದೆ. ಅದೇ ರೀತಿ ಅಂಚೆ ಮತ ಇತರೆ ಮತ ಎಣಿಕೆಗೆ 2ರಿಂದ 3 ಟೇಬಲ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಅಂಚೆ ಮತದಾನ, ವಿಕಲ ಚೇತನರು, 80 ವರ್ಷ ಮೇಲ್ಪಟ್ಟವರು ಸೇವಾ ಮತದಾರರ ಮತ ಎಣಿಕೆಗೆ ಪ್ರತ್ಯೇಕ ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದೆ. ಶ್ರವಣಬೆಳಗೊಳ ಕ್ಷೇತ್ರದಲ್ಲಿ 273 ಮತಗಟ್ಟೆಗಳಿದ್ದು, 20 ಸುತ್ತಿನಲ್ಲಿ ಮತ ಎಣಿಕೆ ನಡೆಯಲಿದೆ. ಅದೇ ರೀತಿ ಅರಸೀಕೆರೆ ಕ್ಷೇತ್ರದಲ್ಲಿ 276 ಮತಗಟ್ಟೆ, ಬೇಲೂರು ಕ್ಷೇತ್ರದಲ್ಲಿ 273 ಮತಗಟ್ಟೆಗಳಿದ್ದು, ಹಾಸನ ಕ್ಷೇತ್ರದಲ್ಲಿ 276 ಮತಗಟ್ಟೆಗಳಿದ್ದು ಮೂರು ಮತ ಎಣಿಕೆ ಕೇಂದ್ರದಲ್ಲಿ 20 ಸುತ್ತಿನಲ್ಲಿ ಮತ ಎಣಿಕೆ ನಡೆಯಲಿದೆ. ಹೊಳೆನರಸೀಪುರ ಕ್ಷೇತ್ರದಲ್ಲಿ 325 ಮತಗಟ್ಟೆಗಳಿದ್ದು 23 ಸುತ್ತು, ಅರಕಲಗೂಡು ಕ್ಷೇತ್ರದಲ್ಲಿ 287 ಮತಗಟ್ಟೆಗಳಿದ್ದು 21 ಸುತ್ತು, ಸಕಲೇಶಪುರ ಕ್ಷೇತ್ರದಲ್ಲಿ 287 ಮತಗಟ್ಟೆಗಳಿದ್ದು 21 ಸುತ್ತಿನಲ್ಲಿ ಮತ ಎಣಿಕೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ 80 ವರ್ಷ ಮೇಲ್ಪಟ್ಟವರು ಹಾಗೂ ವಿಕಲ ಚೇತನರು ಸೇರಿ ಒಟ್ಟು 3905 ಮಂದಿ ಮತ ಚಲಾಯಿಸಿದ್ದು, ಅರಕಲಗೂಡು ಕ್ಷೇತ್ರದಲ್ಲಿ 722 ಜನರು, ಅರಸೀಕೆರೆ ಕ್ಷೇತ್ರದಲ್ಲಿ 528 ಜನರು, ಬೇಲೂರು ಕ್ಷೇತ್ರದಲ್ಲಿ 713 ಜನರು, ಹಾಸನ ಕ್ಷೇತ್ರದಲ್ಲಿ 193 ಜನರು, ಹೊಳೆನರಸೀಪುರ ಕ್ಷೇತ್ರದಲ್ಲಿ 511 ಜನರು, ಸಕಲೇಶಪುರ ಕ್ಷೇತ್ರದಲ್ಲಿ 492 ಜನರು, ಶ್ರವಣಬೆಳಗೊಳ ಕ್ಷೇತ್ರದಲ್ಲಿ 746 ಜನರು ಮತ ಚಲಾಯಿಸಿದ್ದಾರೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಎ.ವಿ.ಇ.ಎಸ್ ಮತದಾರರು ಒಟ್ಟು 1658 ಮಂದಿ ಮತ ಚಲಾಯಿಸಿದ್ದು, ಅರಕಲಗೂಡು ಕ್ಷೇತ್ರದಲ್ಲಿ 240 ಜನರು, ಅರಸೀಕೆರೆ ಕ್ಷೇತ್ರದಲ್ಲಿ 166 ಜನರು, ಬೇಲೂರು ಕ್ಷೇತ್ರದಲ್ಲಿ 204 ಜನರು, ಹಾಸನ ಕ್ಷೇತ್ರದಲ್ಲಿ 488 ಜನರು, ಹೊಳೆನರಸೀಪುರ ಕ್ಷೇತ್ರದಲ್ಲಿ 284 ಜನರು, ಸಕಲೇಶಪುರ ಕ್ಷೇತ್ರದಲ್ಲಿ 158 ಜನರು, ಶ್ರವಣಬೆಳಗೊಳ ಕ್ಷೇತ್ರದಲ್ಲಿ 118 ಜನರು ಮತ ಚಲಾಯಿಸಿದ್ದಾರೆ ಎಂದರು.
ಜಿಲ್ಲೆಯಲ್ಲಿ ವಿದ್ಯುನ್ಮಾನ ಅಂಚೆ ಮತ ಪತ್ರ (ಇಟಿಪಿಬಿಎಸ್) ಮತದಾರರು ಒಟ್ಟು 181 ಜನರು ಮತ ಚಲಾಯಿಸಿದ್ದು, ಅದರಲ್ಲಿ ಅರಕಲಗೂಡು ಕ್ಷೇತ್ರದಲ್ಲಿ 34, ಅರಸೀಕೆರೆಯಲ್ಲಿ 29, ಬೇಲೂರು ಕ್ಷೇತ್ರದಲ್ಲಿ 20, ಹಾಸನ ಕ್ಷೇತ್ರದಲ್ಲಿ 35, ಹೊಳೆನರಸೀಪುರ ಕ್ಷೇತ್ರದಲ್ಲಿ 27, ಸಕಲೇಶಪುರ ಕ್ಷೇತ್ರದಲ್ಲಿ 20, ಶ್ರವಣಬೆಳಗೊಳ ಕ್ಷೇತ್ರದಲ್ಲಿ 16 ಜನರು ಮತ ಚಲಾಯಿಸಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದರು.
ಜಿಲ್ಲೆಯಲ್ಲಿ ಒಟ್ಟಾರೆ 2668 ಅಂಚೆ ಮತದಾನವಾಗಿದೆ. ಅರಕಲಗೂಡು ಕ್ಷೇತ್ರದಲ್ಲಿ 391, ಅರಸೀಕೆರೆ ಕ್ಷೇತ್ರದಲ್ಲಿ 262, ಬೇಲೂರು ಕ್ಷೇತ್ರದಲ್ಲಿ 137, ಹಾಸನ ಕ್ಷೇತ್ರದಲ್ಲಿ 254 , ಹೊಳೆನರಸೀಪುರ ಕ್ಷೇತ್ರದಲ್ಲಿ 548, ಸಕಲೇಶಪುರ ಕ್ಷೇತ್ರದಲ್ಲಿ 312, ಶ್ರವಣಬೆಳಗೊಳ ಕ್ಷೇತ್ರದಲ್ಲಿ 764 ಮಂದಿ ಮತ ಚಲಾಯಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಸೇವಾ ಮತಗಟ್ಟೆಗಳಲ್ಲಿ ಒಟ್ಟಾರೆ 3814 ಮಂದಿ ಮತದಾನ ಮಾಡಿದ್ದು ಅರಕಲಗೂಡು ಕ್ಷೇತ್ರದಲ್ಲಿ 258 ಜನರು, ಅರಸೀಕೆರೆ ಕ್ಷೇತ್ರದಲ್ಲಿ 687 ಜನರು, ಬೇಲೂರು ಕ್ಷೇತ್ರದಲ್ಲಿ 402 ಜನರು, ಹಾಸನ ಕ್ಷೇತ್ರದಲ್ಲಿ 2185 ಮಂದಿ, ಹೊಳೆನರಸೀಪುರ ಕ್ಷೇತ್ರದಲ್ಲಿ 128 ಜನರು, ಸಕಲೇಶಪುರ ಕ್ಷೇತ್ರದಲ್ಲಿ 51 ಮಂದಿ, ಶ್ರವಣಬೆಳಗೊಳ ಕ್ಷೇತ್ರದಲ್ಲಿ 103 ಮಂದಿ ಮತ ಚಲಾಯಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.

Latest Posts

ಲೈಫ್‌ಸ್ಟೈಲ್