780 ಕಿ.ಮೀ. ಸೈಕಲ್ ಸವಾರಿ

ಕಾರವಾರ: ಭಾರತೀಯ ನೌಕಾಸೇನೆಯ 8 ಸಿಬ್ಬಂದಿ 780 ಕಿ.ಮೀ. ಸೈಕಲ್ ಸವಾರಿ ಮಾಡಿ ಕಾರವಾರ ತಲುಪಿ ಸಾಹಸ ಮೆರೆದಿದ್ದಾರೆ.

ಸಾಹಸದ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ‘ವೀಲ್ಸ್ ಆನ್ ಕೋಸ್ಟ್’ ಎಂಬ ಶೀರ್ಷಿಕೆಯಡಿ ಸೈಕಲ್ ಯಾನ ಆಯೋಜಿಸಲಾಗಿತ್ತು. ಮಹಾರಾಷ್ಟ್ರ ರಾಜ್ಯದಲ್ಲಿರುವ ಭಾರತೀಯ ನೌಕಾಪಡೆಯ ಮಿಸೈಲ್ ಸಂಗ್ರಹಣೆ ಮತ್ತು ಪರೀಕ್ಷಾ ಕೇಂದ್ರ ಐಎನ್​ಎಸ್ ತುನೀರ್​ನಿಂದ ಫೆ. 9 ರಂದು ಹೊರಟ ಸೈಕಲ್ ಸವಾರರು ಏಳು ದಿನದಲ್ಲಿ ಕಾರವಾರ ಮೂಲಕ ಅಂಕೋಲಾ ಬೇಲೆಕೇರಿ ಸಮೀಪದ ನೌಕಾ ಶಸ್ತ್ರ ಸಂಗ್ರಹಾಗಾರ ಐಎನ್​ಎಸ್ ವಜ್ರಕೋಶ ತಲುಪಿದ್ದಾರೆ.

ದಾರಿ ಮಧ್ಯೆ ಹಲವು ಕೋಟೆಗಳು, ಹಾಗೂ ಶಾಲೆಗಳಿಗೆ ಸೈಕ್ಲಿಸ್ಟ್​ಗಳು ಭೇಟಿ ನೀಡಿ ಸಾಹಸದ ಕುರಿತು ಜಾಗೃತಿ ಮೂಡಿಸಿದರು. ಕೆಲವೆಡೆ ಬೋಟ್​ಗಳ ಮೂಲಕವೂ ಕೋಟೆಗಳಿಗೆ ತೆರಳಿದರು.