75 ವರ್ಷದ ಮಹಿಳೆಗೆ ಜೀವದಾನ

ಬೆಳಗಾವಿ: ಕರ್ನಾಟಕದಲ್ಲಿ ಮೊದಲ ಮತ್ತು ಭಾರತದಲ್ಲೇ ಎರಡನೇ ಬಾರಿಗೆ ‘ಕ್ಯಾರೋಟಿಡ್ ಆರ್ಟರಿ ಟಾವಿ’ ಶಸ್ತ್ರಚಿಕಿತ್ಸೆಯನ್ನು ಬೆಳಗಾವಿಯ ಅರಿಹಂತ ಆಸ್ಪತ್ರೆಯಲ್ಲಿ ನ. 1ರಂದು ಯಶಸ್ವಿಯಾಗಿ ನೆರವೇರಿಸಲಾಗಿದೆ.

‘ಟಾವಿ’ ಎಂದರೆ ಟ್ರಾನ್ಸ್‌ಕ್ಯಾಥೆಟರ್ ಆರೋಟಿಕ್ ವಾಲ್ವ್ ಇಂಪ್ಲಾಂಟೇಷನ್. ಬಹಳ ಸಂಕಿರ್ಣವಾದ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿಲಾಯಿತು. ಮಹಾರಾಷ್ಟ್ರದ ಸಂಗೋಲಾ ನಗರದ ಸಿಂಧೂಬಾಯಿ ಹರಿಭಾವು ಪೋರೆ (75) ವೃದ್ಧೆಗೆ ಒಂದೂವರೆ ಗಂಟೆಯ ಶಸ್ತ್ರಚಿಕಿತ್ಸೆ ಮಾಡಿ, ಜೀವದಾನ ಮಾಡಿದ್ದಾರೆ. ಮಹಿಳೆಗೆ ಉಸಿರಾಡಲು ತುಂಬ ತೊಂದರೆಯಾಗುತ್ತಿತ್ತು. ಆದರೆ, ಮಹಿಳೆಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ಮಾಡುವುದು ಅಪಾಯಕಾರಿ. ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು ಡಾ.ಅನ್ಮೋಲ್ ಸೋನವೆ, ಡಾ.ಎಂ.ಡಿ. ದೀಕ್ಷಿತ್, ಡಾ.ಪ್ರಭು ಹಳಕಟ್ಟಿ, ಡಾ.ಪ್ರಶಾಂತ ಎಂ.ಬಿ., ಡಾ.ಅಂಬರೀಶ ನೇರ್ಲಿಕರ್ ನೇತೃತ್ವದ ವೈದ್ಯರ ತಂಡವು ಯಶಸ್ವಿಯಾಗಿ ನಡೆಸಿತು.

ಸಾಮಾನ್ಯವಾಗಿ ಈ ಪ್ರಕ್ರಿಯೆಯನ್ನು ಪಾದದ ಅಪಧಮನಿ ಮಾಡಲಾಗುತ್ತದೆ (ಗ್ರೊಇನ್ ವೆಸೇಲ್ಸ್). ಆದರೆ, ಮಹಿಳಾ ಪಾದಗಳ ಅಪಧಮನಿಗಳು ಬಹಳ ಚಿಕ್ಕದಾಗಿವೆ. ಆದ್ದರಿಂದ, ಶಸ್ತ್ರಚಿಕಿತ್ಸೆಯ ಪರ್ಯಾಯ ಮಾರ್ಗವನ್ನು ವೈದ್ಯರಿಂದ ಕ್ಯಾರೋಟಿಡ್ ಆರ್ಟರಿ (ಮಿದುಳಿನ ರಕ್ತ ವಾಹಿನಿ) ಬಳಸಲಾಗುತ್ತಿತ್ತು. ವೃದ್ಧೆಯು ಯಾವುದೇ ಒತ್ತಡ ತೆಗೆದುಕೊಳ್ಳದೆ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯಿಸಿದರು. ಕ್ಯಾರೋಟಿಡ್ ಆರ್ಟರಿ ಟಾವಿ ಶಸ್ತ್ರಚಿಕಿತ್ಸೆ (ಮಿದುಳಿಗೆ ರಕ್ತ ಪೂರೆಕೆ) ಭಾರತದಲ್ಲಿ ಮೊದಲೇ ಆಗಿತ್ತು. ಈಗ ಎರಡನೇ ಶಸ್ತ್ರಚಿಕಿತ್ಸೆ ಅರಿಹಂತ ಆಸ್ಪತ್ರೆಯಲ್ಲಿ ಆಗಿದೆ. ಈ ಶಸ್ತ್ರಚಿಕಿತ್ಸೆ ಕರ್ನಾಟಕದಲ್ಲಿ ಮೊದಲನೆಯಾಗಿದೆ. ವಿಶೇಷವಾಗಿ ಕೆವಲ 48 ಗಂಟೆಗಳಲ್ಲಿ ಮಹಿಳೆಯನ್ನು ಡಿಸ್ಚಾರ್ಜ್ ಮಾಡಲಾಗಿದೆ. ಈ ಮಹಿಳೆಯ ಆರೋಗ್ಯ ಸ್ಥಿರವಾಗಿದೆ. ಆಸ್ಪತ್ರೆ ಅಧ್ಯಕ್ಷ ರಾವಸಾಹೇಬ ಪಾಟೀಲ, ಅರಿಹಂತ ಆಸ್ಪತ್ರೆಯ ನಿರ್ದೇಶಕ ಅಭಿನಂದನ ಪಾಟೀಲ ರೋಗಿಯ ಆರೋಗ್ಯ ವಿಚಾರಿಸಿ, ಕಾಳಜಿ ವಹಿಸುವಂತೆ ಸೂಚಿಸಿದರು.

ಈ ರೀತಿ ಶಸ್ತ್ರಚಿಕಿತ್ಸೆ ರೋಗಿಗಳಿಗೆ ವರದಾನವಾಗಿದೆ. ಶಸ್ತ್ರಚಿಕಿತ್ಸೆಗೆ ಹೆಚ್ಚಿನ ಅಪಾಯವಿರುವ ರೋಗಿಗಳು ಇನ್ನು ಮುಂದೆ ಈ ಚಿಕಿತ್ಸೆಗಾಗಿ ದೊಡ್ಡ ನಗರಗಳಿಗೆ ಹೋಗಬೇಕಿಲ್ಲ. ಬೆಳಗಾವಿಯ ಅರಿಹಂತ ಆಸ್ಪತ್ರೆಯಲ್ಲಿ ಈ ಜೀವರಕ್ಷಕ ಶಸ್ತ್ರ ಚಿಕಿತ್ಸೆ ಮಾಡಿರುವುದು ನಮಗೆ ಹೆಮ್ಮೆ ಮತ್ತು ಸಂತೋಷ ತಂದಿದೆ. ಈ ಮೂಲಕ ಕರ್ನಾಟಕ, ಮಹಾರಾಷ್ಟ್ರ, ಗೋವಾ ಸೇರಿ ವಿವಿಧೆಡೆಯ ರೋಗಿಗಳಿಗೆ ಈ ಜೀವರಕ್ಷಕ ಶಸ್ತ್ರಚಿಕಿತ್ಸೆ ಸೌಲಭ್ಯ ನೀಡಲು ಸಾಧ್ಯವಾಗುತ್ತದೆ.
|ಡಾ.ಎಂ.ಡಿ.ದೀಕ್ಷಿತ್ ಕಾರ್ಡಿಯಾಕ್ ಸರ್ಜನ್

Share This Article

ನಿಮ್ಮ ಅಂಗೈನಲ್ಲಿ ಈ ಚಿಹ್ನೆ ಇದೆಯಾ ನೋಡಿ… ಇದ್ರೆ ಎಂದಿಗೂ ಹಣಕಾಸಿನ ಸಮಸ್ಯೆಗಳು ಎದುರಾಗಲ್ಲ | Palmistry

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…

Honey: ಜೇನಿನೊಂದಿಗೆ ಈ ಆರು ಆಹಾರ ಬೆರೆಸಿ ತಿನ್ನಬೇಡಿ..ಹಾಗೆ ಮಾಡಿದರೆ ವಿಷವಾಗುತ್ತದೆ!

ಜೇನು(Honey) ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ ಕೆಲವು ಪದಾರ್ಥಗಳೊಂದಿಗೆ ಬೆರೆಸಿ ಸೇವಿಸಬಾರದು. ಈ 6 ಪದಾರ್ಥಗಳೊಂದಿಗೆ…

ಅಕ್ಕಿ ತೊಳೆದ ನೀರನ್ನು ಚೆಲ್ಲಬೇಡಿ.. ಈ ನೀರಿನಿಂದ ದೇಹದ ತೂಕ ಇಳಿಸಿಕೊಳ್ಳಬಹುದು! Interesting information

ಬೆಂಗಳೂರು:  ಅಕ್ಕಿ ತೊಳೆದರೆ ಬರುವ ನೀರನ್ನು ( rice washed water) ಅನೇಕರು ಬಿಸಾಡುತ್ತಾರೆ. ಆದರೆ…