ಪಾಸ್​ ಕೇಳಿದ್ದ ಎಎಸ್​ಐ ಕೈ ಕತ್ತರಿಸಿ ಗುರುದ್ವಾರದಲ್ಲಿ ಅಡಗಿದ್ದವರ ಬಂಧನ: ತರಕಾರಿ ಕೊಳ್ಳಲು ಬಂದವರಿಂದ ಮಾರಣಾಂತಿಕ ಹಲ್ಲೆ

ಪಟಿಯಾಲಾ: ನಗರದ ತರಕಾರಿ ಮಾರುಕಟ್ಟೆ ಪ್ರವೇಶಿಸಲು ಪಾಸ್​ ಕೇಳಿದ್ದ ಅಸಿಸ್ಟೆಂಟ್​ ಸಬ್ ಇನ್​ಸ್ಪೆಕ್ಟರ್​ ಕೈಯನ್ನೇ ಕತ್ತರಿಸಿ ಗುರುದ್ವಾರದಲ್ಲಿ ಅಡಗಿದ್ದ ಏಳು ಜನರನ್ನು ಪಂಜಾಬ್​ ಪೊಲೀಸರು ಬಂಧಿಸಿದ್ದಾರೆ. ಹಲ್ಲೆ ನಡೆಸಿ ಪರಾರಿಯಾಗುತ್ತಿದ್ದವರನ್ನು ಪೊಲೀಸರು ಬೆನ್ನತ್ತಿದ್ದರು. ಹಲ್ಲೆಕೋರರು ಪಟಿಯಾಲಾ ಹೊರವಲಯದ ಬಲ್ಬೆರಾ ಗ್ರಾಮದಲ್ಲಿದ್ದ ಸಿಖ್ಖರ ನಿಹಾಂಗ್​ ಪಂಗಡಕ್ಕೆ ಸೇರಿದ ಗುರುದ್ವಾರ ಪ್ರವೇಶಿಸಿ ಆಶ್ರಯ ಪಡೆದಿದ್ದರು. ಬಳಿಕ ಹಿರಿಯ ಪೊಲೀಸ್​ ವರಿಷ್ಠಾಧಿಕಾರಿ ಮನ್​ದೀಪ್​ ಸಿಂಗ್​ ಹಾಗೂ ಇತರ ಅಧಿಕಾರಿಗಳು ಹೆಚ್ಚುವರಿ ಪೊಲೀಸ್​ ಪಡೆಯೊಂದಿಗೆ ಗುರುದ್ವಾರ ಸುತ್ತುವರಿ ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿದ್ದ … Continue reading ಪಾಸ್​ ಕೇಳಿದ್ದ ಎಎಸ್​ಐ ಕೈ ಕತ್ತರಿಸಿ ಗುರುದ್ವಾರದಲ್ಲಿ ಅಡಗಿದ್ದವರ ಬಂಧನ: ತರಕಾರಿ ಕೊಳ್ಳಲು ಬಂದವರಿಂದ ಮಾರಣಾಂತಿಕ ಹಲ್ಲೆ