ಬಸ್​-ಟ್ರಕ್​ ನಡುವೆ ಅಪಘಾತ: 7 ಮಂದಿ ಸಾವು, 34 ಮಂದಿಗೆ ಗಾಯ

ನವದೆಹಲಿ: ಬಸ್​ ಹಾಗೂ ಟ್ರಕ್​ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ 7 ಮಂದಿ ಮೃತಪಟ್ಟು 34 ಜನ ಗಾಯಗೊಂಡ ಘಟನೆ ಮೈನ್​ಪುರಿ ಸಮೀಪದ ಆಗ್ರಾ-ಲಕ್ನೋ ಎಕ್ಸ್​ಪ್ರೆಸ್​ ಹೈವೆಯಲ್ಲಿ ನಡೆದಿದೆ.

ಟ್ರಕ್​- ಬಸ್​ ನಡುವೆ ನಡೆದ ಅಪಘಾತದಲ್ಲಿ ಮೃತಪಟ್ಟವರ ಗುರುತು ಇನ್ನು ಪತ್ತೆಯಾಗಿಲ್ಲ. ಗಾಯಾಲುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಏಪ್ರಿಲ್​ 11ರಂದು ಕಾರು ಮತ್ತು ಟ್ರಕ್​ ನಡುವೆ ಫತೇಹಾಬಾದ್​ ಬಳಿಯ ಆಗ್ರಾ ಲಕ್ನೋ ಹೈವೆಯಲ್ಲಿ ನಡೆದ ಅಪಘಾತದಲ್ಲಿ ಎಂಟು ಜನ ಮೃತಪಟ್ಟು ಇಬ್ಬರು ಗಂಭೀರ ಗಾಯಗೊಂಡಿದ್ದರು.

ಈ ಘಟನೆಯಲ್ಲಿ ಆರು ಮಂದಿ ಸ್ಥಳದಲ್ಲೇ ಮೃತಪಟ್ಟರೆ ಇಬ್ಬರು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮೃತಪಟ್ಟಿದ್ದರು.(ಏಜೆನ್ಸೀಸ್​)