ಐಎಂಎ ಜ್ಯುವಲರ್ಸ್​ ವಂಚನೆ ಪ್ರಕರಣ: ಪೊಲೀಸರ ಎದುರು ಹಾಜರಾದ ಸಂಸ್ಥೆಯ 7 ನಿರ್ದೇಶಕರ ಬಂಧನ

ಬೆಂಗಳೂರು: ಐಎಂಎ ಜ್ಯುವಲರ್ಸ್​ನ ನೂರಾರು ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಸಂಸ್ಥೆಯ ಏಳು ಮಂದಿ ನಿರ್ದೇಶಕರನ್ನು ಪೊಲೀಸರು ಬಂಧಿಸಿದ್ದಾರೆ.

ನಿಜಾಮುದ್ದೀನ್, ನಾಸಿರ್ ಹುಸೇನ್, ನವೀದ್ ಅಹಮದ್, ಅರ್ಷದ್ ಖಾನ್, ವಾಸಿಂ, ಅನ್ಸರ್ ಪಾಷಾ ಮತ್ತು ದಾದಾ ಪೀರ್ ಬಂಧಿತರು. ಪೂರ್ವ ವಿಭಾಗದ ಡಿಸಿಪಿ ರಾಹುಲ್​ ಕುಮಾರ್​ ಶಹಾಪುರ ಎದುರು ಇವರೆಲ್ಲರೂ ಹಾಜರಾಗಿದ್ದರು.

ಪೊಲೀಸರ ಎದುರು ಶರಣಾದ ಈ 7 ಮಂದಿ ವಂಚನೆಯ ಹಿಂದೆ ಹಾಗೂ ಮನ್ಸೂರ್​ ಖಾನ್​ ಕಾಣೆಯಾಗಿರುವ ಹಿಂದೆ ತಮ್ಮದೇನೂ ಪಾತ್ರವಿಲ್ಲ. ಯಾವುದೇ ರೀತಿಯ ತನಿಖೆಗೆ ಸಹಕರಿಸಲು ತಾವು ಸಿದ್ಧ ಎಂದು ಡಿಸಿಪಿ ಎದುರು ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅವರೆಲ್ಲರನ್ನೂ ಪೊಲೀಸರು ವಿಚಾರಣೆಗೆ ಒಳಪಡಿಸಿ, ಬಳಿಕ ನ್ಯಾಯಾಧೀಶರ ಎದುರು ಹಾಜರುಪಡಿಸಲು ಪೊಲೀಸರು ಕರೆದೊಯ್ಯುತ್ತಿದ್ದಾರೆ.(ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *